ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

ಸುಹಾನಾ ಸೈಯದ್. ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. . ಸರಿಗಮಪದ ಎಂಬ ಸಂಗೀತ ರಿಯಾಲಿಟಿ ಶೋದಿಂದ ಬೆಳಕಿಗೆ ಬಂದು ಮುಸ್ಲಿಂ ಆಗಿದ್ದರೂ ಹಿಂದೂ ದೇವರ ಹಾಡನ್ನು ಹಾಡುವ ಮೂಲಕ ಒಂದಿಷ್ಟು ವಿವಾದದ ಕೇಂದ್ರ ಬಿಂದು ಆಗಿದ್ದಳು. ಎಂಟು ವರ್ಷಗಳ ಹಿಂದೆ ಅವಳು ಹಾಡಿರುವ ರಾಮನ ಭಕ್ತಿ ಹಾಡು ಬಹಳ ಫೇಮಸ್ ಆಗಿ, ಸಾಕಷ್ಟು ವೈರಲ್ ಆಗಿ, ಒಬ್ಬ ಮುಸ್ಲಿಂ ಮತದವರಾಗಿ ಹೀಗೆ ಹಾಡುವುದು ಎಷ್ಟು ಸರಿ ಎಂದು ಆಕೆಯ ಮತದವರಿಂದಲೇ ಟೀಕೆಗೆ ಗುರಿಯಾಗಿದ್ದಳು.
ಅವಳಿಗೆ ಆಗ ಬಂದಿರುವ ವಿರೋಧ ಎಷ್ಟರಮಟ್ಟಿಗೆ ಇತ್ತು ಎಂದರೆ ಬೇರೆಯವರಾದರೆ ಈ ಸಂಗೀತವೂ ಬೇಡಾ, ವಿರೋಧವೂ ಬೇಡಾ ಎಂದು ತೆಪ್ಪಗೆ ಇರುತ್ತಿದ್ದರೋ ಎನೋ. ಆದರೆ ಆಕೆ ಅದನ್ನು ಒಂದು ಸವಾಲಾಗಿ ಸ್ವೀಕರಿಸಿದಳು. ಸಂಗೀತದಲ್ಲಿಯೇ ಸಾಧನೆ ಮಾಡಿದಳು. ಯಕ್ಷಗಾನ ಕ್ಷೇತ್ರದಲ್ಲಿಯೂ ಕೈ ಆಡಿಸಿದಳು. ತನ್ನದೇ ಅಭಿಮಾನಿ ವರ್ಗವನ್ನು ಸಂಪಾದಿಸಿಕೊಂಡಳು. ಹೀಗೆ ನಡೆಯುವಾಗಲೇ ಸುಹಾನಾ ಸೈಯದ್ ಸಂಗೀತದ ಬದುಕಿನಲ್ಲಿ ಪ್ರೇಮದ ತಂತಿ ಮೀಟಿದೆ. ಅವಳ ಸರಿಗಮಪದನಿಸ ಸಂಗೀತ ಜರ್ನಿಯಲ್ಲಿ ಹೊಸ ಸ್ವರಕ್ಕೆ ಕಾರಣನಾದ ಯುವಕನ ಹೆಸರು ಏನು ಗೊತ್ತಾ?
ನಿತಿನ್ ಶಿವಾಂಶ್. ಆತನಿಗೂ ಸಂಗೀತದ ಬಗ್ಗೆ ಒಲವಿದೆ. ರಂಗಭೂಮಿಯ ಹಿನ್ನಲೆಯ ನಿತಿನ್ ಶಿವಾಂಶ್ ಅವರೊಂದಿಗೆ ಹದಿನಾರು ವರ್ಷಗಳಿಂದ ಸುಹಾನ್ ಅವರಿಗೂ ಸ್ನೇಹವಿದ್ದು, ಶಾಲಾ ದಿನಗಳಲ್ಲಿಯೇ ಪರಿಚಯವಿತ್ತು ಎಂದು ಸ್ವತ: ಸುಹಾನಾ ಹೇಳಿಕೊಂಡಿದ್ದಾರೆ. 16 ವರ್ಷಗಳ ಸ್ನೇಹ ಈಗ ಪ್ರೀತಿಯಾಗಿ ಮೂಡಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಪ್ರೀತಿಯನ್ನು ಮದುವೆಯ ಸಂಬಂಧವಾಗಿ ಪರಿವರ್ತಿಸಲು ಸುಹಾನಾ ಹಾಗೂ ನಿತಿನ್ ಬಯಸಿದ್ದು, ಆದಷ್ಟು ಶೀಘ್ರದಲ್ಲಿ ಇವರು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರ ಭವಿಷ್ಯಕ್ಕೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ಸಲ್ಲಿಸಿದ್ದು, ಸುಹಾನಾ ಅವರು ಅಭಿಮಾನಿಗಳಿಗೂ ತಮ್ಮನ್ನು ಹರಸುವಂತೆ ವಿನಂತಿಸಿದ್ದಾರೆ.
ಸುಹಾನ್ ಸೈಯದ್ ಹಾಗೂ ನಿತಿನ್ ಶಿವಾಂಶ್ ಪರಸ್ಪರ ಬೇರೆ ಬೇರೆ ಧರ್ಮದವರಾಗಿದ್ದರೂ, ಇಬ್ಬರೂ ಕಲಾಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಈಗ ವೈವಾಹಿಕ ಬದುಕಿಗೆ ಕಾಲಿಡಲು ತೀರ್ಮಾನಿಸುವ ಮೂಲಕ ಹೊಸ ಬದುಕನ್ನು ಆರಂಭಿಸಲು ತೀರ್ಮಾನಿಸಿದ್ದಾರೆ. ಇವರ ತರಹ ಅನೇಕರು ಹೀಗೆ ಪ್ರೀತಿಗೆ ಸಿಲುಕಿ ಮದುವೆಯಾಗಿ ಉತ್ತಮ ಬಾಳನ್ನು ಜೀವಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಇಂತಹ ಮದುವೆಗಳಿಗೆ ಕೆಲವರ ವಿರೋಧವೂ ಇರುತ್ತದೆ. ಇವರ ಬದುಕಿನಲ್ಲಿ ಏನೂ ಅಡ್ಡಿ ಬರದೇ, ಎಲ್ಲವೂ ಸುಸೂತ್ರವಾಗಿ ನಡೆಯಲಿ ಎಂದು ನಾವು ಹಾರೈಸೋಣ, ಅಲ್ಲವೇ?