ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!

ಬಾಲಿವುಡ್ ಸ್ಟಾರ್ ದಂಪತಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರು ಅಪ್ಪ, ಅಮ್ಮಾ ಆಗುತ್ತಿದ್ದಾರೆ. 42 ವರ್ಷದ ನಟಿ ಕಳೆದ ಮಾರ್ಚ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸರ್ಪ ಸಂಸ್ಕಾರ ಸೇವೆ ಮಾಡಿಸಿಕೊಂಡಿದ್ದರು. ಈಗ ಭಗವಂತ ಅವರಿಗೆ ಆರ್ಶೀವಾದ ಮಾಡಿದ್ದಾನೆ.
ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯದಿಂದ ಪ್ರಾರಂಭಿಸುವ ಹಾದಿಯಲ್ಲಿದ್ದೇವೆ ಎಂದು ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ಯ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಿತ್ಯವೂ ಸಾವಿರಾರು ಭಕ್ತರು ಬರುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಸೇವೆ ಮಾಡಲಾಗುವುದು. ಸಾಮಾನ್ಯವಾಗಿ ಕುಟುಂಬದಲ್ಲಿ ಸರ್ಪದೋಷ ಇದ್ದರೆ ಮಕ್ಕಳಾಗೋದಿಲ್ಲ ಎನ್ನುವ ನಂಬಿಕೆ ಇದೆ. ಇದರಿಂದ ಚರ್ಮ ಸಮಸ್ಯೆ ಕೂಡ ಬರುವುದು ಎಂದು ಹೇಳಲಾಗುತ್ತದೆ. ಹೀಗಾಗಿ ಆಶ್ಲೇಷ ಬಲಿ ಸೇವೆ, ಸರ್ಪ ಸಂಸ್ಕಾರ ಸೇವೆಯನ್ನು ಭಕ್ತರು ಮಾಡುತ್ತಾರೆ. ಆಗ ಸರ್ಪ ದೋಷ ನಿವಾರಣೆ ಆಗಿ ಮಕ್ಕಳಾಗುತ್ತವೆ ಎನ್ನುವ ನಂಬಿಕೆ ಅನಾದಿಕಾಲದಿಂದಲೂ ಚಾಲ್ತಿಯಲ್ಲಿದೆ.
42 ನೇ ವಯಸ್ಸಿನಲ್ಲಿ ತಾಯಿಯಾಗೋದು ಸುಲಭವಿಲ್ಲ. ಫಿಟ್ ಆಗಿದ್ದರೂ ಮಗು ಮಾಡಿಕೊಳ್ಳುವುದು ಕಷ್ಟಸಾಧ್ಯ. ಪ್ರಿಯಾಂಕಾ ಚೋಪ್ರಾ ಅವರಿಂದ ಹಿಡಿದು ಶಿಲ್ಪಾ ಶೆಟ್ಟಿಯವರಿಗೆ ಸಾಕಷ್ಟು ನಟಿಯರು ಮಗು ಆಗಿಲ್ಲ ಎಂಬ ಕಾರಣಕ್ಕೆ ಸರೋಗಸಿ ಮೊರೆ ಹೋಗಿದ್ದರು. ಶಾರುಖ್ ಖಾನ್ – ಗೌರಿ ಕೂಡ ತಮ್ಮ ಮೂರನೆ ಮಗುವನ್ನು ಸರೋಗಸಿ ಮೂಲಕ ಪಡೆದರು.
ಮಾರ್ಚ್ ನಲ್ಲಿ ಕತ್ರಿನಾ ಕೈಫ್ ಅವರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಪೂಜೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸಂತಾನಕ್ಕೋಸ್ಕರ ಪ್ರಾರ್ಥನೆ ಮಾಡಿದ್ದರು. ಈ ಬಗ್ಗೆ ಅವರು ಎಲ್ಲಿಯೂ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.
ಮಾರ್ಚ್ ತಿಂಗಳಲ್ಲಿ ಕತ್ರಿನಾ ಕೈಫ್ ಅವರು ಕುಕ್ಕೆಗೆ ಭೇಟಿ ನೀಡಿದ್ದರು. ಇದಾಗಿ ಆರು ತಿಂಗಳು ಕಳೆದಿವೆ. ಈಗ ಅವರು ಗರ್ಭೀಣಿಯಾಗಿರೋ ನ್ಯೂಸ್ ಕೊಟ್ಟಿದ್ದಾರೆ. ಈ ಮೂಲಕ ಅವರ ಭಕ್ತಿಗೆ ದೇವರು ಒಲಿದಿದ್ದಾನೆ ಎಂದಾಯಿತು. 2021 ಡಿಸೆಂಬರ್ 9 ರಂದು ಕತ್ರಿನಾ ಹಾಗೂ ವಿಕ್ಕಿ ಮದುವೆಯಾಗಿದ್ದರು.