• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!

Tulunadu News Posted On December 22, 2025
0


0
Shares
  • Share On Facebook
  • Tweet It

ಕಳೆದ ವರ್ಷ ರಾಜಕೀಯ ಪಕ್ಷಗಳಿಗೆ ಬರುವ ಫಂಡ್ ಬಗ್ಗೆ ಸಾಕಷ್ಟು ಚರ್ಚೆ, ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಚುನಾವಣಾ ಬಾಂಡ್ ಅನ್ನು ಸುಪ್ರೀಂಕೋರ್ಟ್ ರದ್ದು ಮಾಡಿದ ಬಳಿಕ ಈಗ ಚುನಾವಣಾ ಟ್ರಸ್ಟ್ ಮೂಲಕವೇ ಹಣ ನೀಡುವ ಕ್ರಮ ಆರಂಭವಾಗಿದೆ. ಉದ್ಯಮಿಗಳು, ಕಂಪೆನಿಗಳು ಕಾನೂನಾತ್ಮಕವಾಗಿ ಸ್ಥಾಪಿತವಾಗಿರುವ ಚುನಾವಣಾ ಟ್ರಸ್ಟ್ ಗಳಿಗೆ ಹಣವನ್ನು ದೇಣಿಗೆಯ ರೂಪದಲ್ಲಿ ನೀಡಬಹುದು. ಆ ಟ್ರಸ್ಟ್ ಗಳ ಮೂಲಕ ಹಣ ಆಯಾ ರಾಜಕೀಯ ಪಕ್ಷಗಳಿಗೆ ಸಂದಾಯವಾಗುತ್ತದೆ. ವಿವಾದಾತ್ಮಕ ಚುನಾವಣಾ ಬಾಂಡ್ ಗಳನ್ನು ಸುಪ್ರಿಂ ಕೋರ್ಟ್ ರದ್ದು ಮಾಡಿದ ನಂತರದ ಮೊದಲ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ ಒಂಭತ್ತು ಪ್ರಮುಖ ಚುನಾವಣಾ ಟ್ರಸ್ಟ್ ಗಳಿಂದ 3811 ಕೋಟಿ ರೂಪಾಯಿಯಷ್ಟು ದೇಣಿಗೆ ಹರಿದು ಬಂದಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ಇನ್ನು ಆಶ್ಚರ್ಯ ಎಂದರೆ ಒಟ್ಟು ದೇಣಿಗೆಯಲ್ಲಿ ಶೇಕಡಾ 82 ರಷ್ಟು ಪಾಲು ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಯ ಪಾಲಾಗಿದೆ ಎಂದು ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.

2024-25 ರಲ್ಲಿ ಬಿಜೆಪಿಗೆ 3112 ಕೋಟಿ ರೂ ಅಂದರೆ 82%, ಕಾಂಗ್ರೆಸ್ ಗೆ 299 ಕೋಟಿ ರೂ ಅಂದರೆ ಶೇಕಡಾ 8 ಮತ್ತು ಇತರೆ ಪಕ್ಷಗಳಿಗೆ ಒಟ್ಟಾರೆ 400 ಕೋಟಿ ರೂ ಅಂದರೆ ಶೇಕಡಾ 10 ದೇಣಿಗೆ ನೀಡಲಾಗಿದೆ. ಇದು ಪ್ರಮುಖ ಚುನಾವಣಾ ಟ್ರಸ್ಟ್ ಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯನ್ನಾಧರಿಸಿದ ಅಂಕಿ- ಅಂಶಗಳಾಗಿದ್ದು, ಇತರೆ ಸಣ್ಣಪುಟ್ಟ ಟ್ರಸ್ಟ್ ಗಳು ಹಾಗೂ ನೋಂದಣಿಯಾಗದ ಮೂಲಗಳಿಂದಲೂ ರಾಜಕೀಯ ಪಕ್ಷಗಳಿಗೆ ಭಾರೀ ಪ್ರಮಾಣದ ದೇಣಿಗೆ ಹರಿದು ಬಂದಿದೆ. ಒಟ್ಟು 13 ಚುನಾವಣಾ ಟ್ರಸ್ಟ್ ಗಳಲ್ಲಿ 9 ಟ್ರಸ್ಟ್ ಗಳು ದೇಣಿಗೆಯ ವಿವರಗಳನ್ನು ಆಯೋಗಕ್ಕೆ ಸಲ್ಲಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅವು ನೀಡಿದ ದೇಣಿಗೆ 3 ಪಟ್ಟು ಹೆಚ್ಚಾಗಿದೆ.

ಕಳೆದ ಬಾರಿ ಈ ಟ್ರಸ್ಟ್ ಗಳು 1218 ಕೋಟಿ ರೂಪಾಯಿ ನೀಡಿದ್ದವು. 2668 ಕೋಟಿ ರೂ ದೇಣಿಗೆಯೊಂದಿಗೆ ಪ್ರುಡೆಂಟ್ ಎಲೆಕ್ಟ್ರೋರಲ್ ಟ್ರಸ್ಟ್ ಮೊದಲ ಸ್ಥಾನದಲ್ಲಿದೆ. ಇದರ ಬಹುಪಾಲು ದೇಣಿಗೆ ಬಿಜೆಪಿಗೆ ಹೋಗಿದೆ. ಜೊತೆಗೆ ಕಾಂಗ್ರೆಸ್, ಟಿಎಂಸಿ, ಆಪ್, ಟಿಡಿಪಿ ಮತ್ತು ಇತರೆ ರಾಜಕೀಯ ಪಕ್ಷಗಳಿಗೂ ಹಣ ನೀಡಿದೆ. ಜಿಂದಾಲ್ ಸ್ಟೀಲ್ ಆಂಡ್ ಪವರ್, ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿ., ಭಾರ್ತಿ ಏರ್ ಟೆಲ್, ಅರವಿಂದೋ ಫಾರ್ಮಾ ಮತ್ತು ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಈ ಟ್ರಸ್ಟ್ ನ ಪ್ರಮುಖ ದೇಣಿಗೆದಾರರು.

ಪ್ರೋಗ್ರೆಸಿವ್ ಎಲೆಕ್ಟೋರಲ್ ಟ್ರಸ್ಟ್ 914.97 ಕೋಟಿ ರೂ ದೇಣಿಗೆಯಾಗಿ ನೀಡಿದ್ದು, ಇದರ ಶೇಕಡಾ 80.82 ರಷ್ಟು ಭಾಗ ಬಿಜೆಪಿಗೆ ಹೋಗಿದೆ. ನ್ಯೂ ಡೆಮಾಕ್ರಟಿಕ್ ಎಲೆಕ್ಟೋರಲ್ ಟ್ರಸ್ಟ್ 160 ಕೋಟಿ ರೂ ದೇಣಿಗೆ ನೀಡಿದೆ. ಹಾರ್ಮೋನಿ ಎಲೆಕ್ಟೋರಲ್ ಟ್ರಸ್ಟ್ ಬಿಜೆಪಿಗೆ 30 ಕೋಟಿ ನೀಡಿದೆ. ಟ್ರಯಂಪ್ ಎಲೆಕ್ಟೋರಲ್ ಟ್ರಸ್ಟ್ 25 ಕೋಟಿ ರೂ ದೇಣಿಗೆ ನೀಡಿದ್ದು, ಇದರಲ್ಲಿ ಬಿಜೆಪಿಗೆ 21 ಕೋಟಿ, ಜನಪ್ರಗತಿ ಎಲೆಕ್ಟೋರಲ್ ಟ್ರಸ್ಟ್ ಶಿವಸೇನೆ ಉದ್ಧವ್ ಠಾಕ್ರೆ ಬಣಕ್ಕೆ 1 ಕೋಟಿ ರೂ ದೇಣಿಗೆ ನೀಡಿದೆ.

 

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search