ವಿಶೇಷ ರೀತಿಯಲ್ಲಿ ಮೋದಿ ಜನ್ಮದಿನ ಆಚರಣೆ
Posted On September 8, 2017

ದೆಹಲಿ: ಸೆಪ್ಟಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಉತ್ತರ ಪ್ರದೇಶ ಬಿಜೆಪಿ ಘಟಕದ ಶಾಸಕರು ನಿರ್ಧರಿಸಿದ್ದಾರೆ. ಪ್ರಧಾನಿ ಜನ್ಮದಿನ ಪ್ರಯುಕ್ತ ಶಾಸಕರು ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳೊಂದಿಗೆ ಪ್ರಧಾನಿಗಿರುವ ದೇಶದ ಕುರಿತ ಕನಸಿನ ಬಗ್ಗೆ ಸಂವಾದ ನಡೆಸಲಿದ್ದಾಾರೆ ಎಂದು ತಿಳಿದುಬಂದಿದೆ. ಶಾಲೆಗೆ ಭೇಟಿ ನೀಡಿದ್ದ ವೇಳೆ ಮಕ್ಕಳಿಗೆ ಸಿಹಿ ಹಂಚಿ, ಅಲ್ಲಿನ ಮೂಲಸೌಕರ್ಯಗಳ ಕುರಿತು ಮಾಹಿತಿ ಪಡೆಯಲಿದ್ದಾರೆ. 403 ಸದಸ್ಯ ಬಲವಿರುವ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 311 ಶಾಸಕರನ್ನು ಹೊಂದಿದೆ. ಸೆ. 16 ಹಾಗೂ ಸೆ.18ರಂದು ಪ್ರತಿಯೊಬ್ಬ ಶಾಸಕರು ತಲಾ ಒಂದು ಶಾಲೆಗೆ ಭೇಟಿ ನೀಡುವಂತೆ ಪಕ್ಷದ ನಾಯಕರು ತಿಳಿಸಿದ್ದಾರೆ.
- Advertisement -
Leave A Reply