• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಜೆನೆರಿಕ್ ಔಷಧಾಲಯ ತೆರೆಯಲು ಕೇಂದ್ರ, ರಾಜ್ಯ ಮುಂದಾಗಲಿ!

TNN Correspondent Posted On September 9, 2017
0


0
Shares
  • Share On Facebook
  • Tweet It

ಪಾಪದವರ ಎರಡು ಪ್ರಮುಖ ಟೆನ್ಷನ್ ಕಡಿಮೆಯಾಗಿದೆ. ಒಂದು ಮಂಡಿಚಿಪ್ಪು ಶಸ್ತ್ರಚಿಕಿತ್ಸೆ, ಇನ್ನೊಂದು ಹಾರ್ಟ್ ಆಪರೇಶನ್‌ನಲ್ಲಿ ಸ್ಟ್ರೆೆಂಥ್ಸ್‌ ಅಳವಡಿಸುವುದು. ಎರಡಕ್ಕೂ ಎಷ್ಟು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದೇನೆ. ಇನ್ನು ಆಗಬೇಕಾಗಿರುವುದು ಕಣ್ಣಿಿನ ಕ್ಯಾಟರೆಕ್ಟ್‌ ಶಸ್ತ್ರಚಿಕಿತ್ಸೆ ನಡೆಸುವಾಗ ಅಳವಡಿಸುವ ಇನ್ಟ್ರಾಕ್ಯೂಲರ್ ಲೆನ್‌ಸ್‌‌ನ ಬೆಲೆಯನ್ನು ಹೀಗೆ ಗಣನೀಯ ಪ್ರಮಾಣದಲ್ಲಿ ಇಳಿಸುವುದು. ಇನ್ನು ಹೃದಯದಲ್ಲಿ ವಾಲ್ (ಕವಾಟ)ವನ್ನು ಅಳವಡಿಸುವ ಶಸ್ತ್ರಚಿಕಿತ್ಸೆಯನ್ನು ಕೂಡ ಕಡಿಮೆ ದರದಲ್ಲಿ ಮಾಡುವ ಪ್ರಕ್ರಿಯೆ. ಈ ಎರಡರ ಬಗ್ಗೆೆನೂ ಕೇಂದ್ರ ಯೋಚಿಸುತ್ತಿದೆ. ಅದು ಕೂಡ ಆದಷ್ಟು ಬೇಗ ಜಾರಿಯಾಗಲಿದೆ. ನಾನು ನಿನ್ನೆೆ ಹೇಳಿದ ಎರಡು ಬೃಹತ್ ಶಸ್ತ್ರಚಿಕಿತ್ಸೆ ಮತ್ತು ಇವತ್ತು ಹೇಳಿರುವ ಎರಡು ಶಸ್ತ್ರಚಿಕಿತ್ಸೆೆಗೆ ಬೆಲೆ ಕಡಿಮೆಯಾಗುವುದರಿಂದ ಸಾಮಾನ್ಯ ಜನರ ಪಾಲಿಗೆ ಇದು ನಿಜಕ್ಕೂ ತುಂಬಾ ಸಮಾಧಾನದ ಸಂಗತಿಯಾಗಲಿದೆ.

ಇನ್ನು ನೀವು ಜೆನೆರಿಕ್ ಔಷಧಿಯ ಬಗ್ಗೆೆ ಕೇಳಿರಬಹುದು. ಬಡ ಮತ್ತು ಮಧ್ಯಮ ವರ್ಗದ ರೋಗಿಗಳ ಪಾಲಿಗೆ ಕೇಂದ್ರ ಸರಕಾರ ಜೆನೆರಿಕ್ ಔಷಧಗಳನ್ನು ಜಾರಿಗೆ ತರುವ ಮೂಲಕ ಅವರಿಗೆ ಔಷಧಿಗಳ ಹೊರೆ ಕಡಿಮೆ ಮಾಡಿದೆ.

ಅಷ್ಟಕ್ಕೂ ಜೆನೆರಿಕ್ ಔಷಧಿಗಳು ಎಂದರೇನು ಎಂದು ಗೊತ್ತಿಲ್ಲದವರಿಗೆ ಒಂದೇ ವಾಕ್ಯದಲ್ಲಿ ಹೇಳಬಯಸುತ್ತೇನೆ. ಬೇರೆ ಬ್ರಾಂಡ್ ಹೊಂದಿರುವ ಔಷಧಗಳ ಗುಣಮಟ್ಟದಷ್ಟೇ ಇರುವ, ಅಷ್ಟೇ ಪ್ರಭಾವಶಾಲಿಯಾಗಿರುವ, ಹೆಸರು, ಆಕಾರ, ಬಣ್ಣದಲ್ಲಿ ವ್ಯತ್ಯಾಸ ಇದ್ದರೂ ಕಾಯಿಲೆಗಳನ್ನು ಗುಣಪಡಿಸುವ ನಿಟ್ಟಿಿನಲ್ಲಿ ಬ್ರಾಂಡ್ ಔಷಧಿಗಳಿಗೆ ಒಂದು ತೂಕ ಹೆಚ್ಚೆೆ ಸ್ಪರ್ಧೆೆ ಕೊಡಬಲ್ಲ ಆದರೆ ಬ್ರಾಂಡ್ ನೇಮ್ ಇಲ್ಲದ, ಜಾಹೀರಾತು ಹೊಂದಿಲ್ಲದ ಔಷಧಿಗಳೇ ಜೆನರಿಕ್ ಔಷಧಿಗಳು ಎನ್ನುತ್ತಾರೆ. ಆದರೆ ನನ್ನದೊಂದು ಸಲಹೆಯನ್ನು ನಾನು ಕೇಂದ್ರ ಸರಕಾರಕ್ಕೆೆ ಕೊಡಲು ಇಷ್ಟಪಡುತ್ತೇನೆ.

ಅದೇನೆಂದರೆ ನೀವು ಜೆನೆರಿಕ್ ಔಷಧಿಗಳನ್ನು ಕೊಳ್ಳಲು ಬಡರೋಗಿಗಳಿಗೆ ಕರೆ ಕೊಡುತ್ತಿದ್ದಿರಿ ನಿಜ, ಆದರೆ ಜೆನರಿಕ್ ಔಷಧಿಗಳನ್ನು ಮಾರಲು ಅಂಗಡಿಗಳು ಸಾಕಷ್ಟು ಬೇಕು. ಆದರೆ ಅಂಗಡಿಗಳನ್ನು ತೆರೆಯಬೇಕಾದರೆ ಅದಕ್ಕೆೆ ಬಂಡವಾಳ ಬೇಕು. ಆದರೆ ಜೆನೆರಿಕ್ ಔಷಧಿಗಳಲ್ಲಿ ಲಾಭದ ಮಾರ್ಜಿನ್ ಕಡಿಮೆ. ಕಡಿಮೆ ಲಾಭಕ್ಕೆೆ ಮಾರಿ ಅಂಗಡಿ ಬಾಡಿಗೆ ಕೊಟ್ಟು ಪೂರೈಸುವುದು ಕಷ್ಟ. ಅದಕ್ಕಾಗಿ ಕೇಂದ್ರ ಸರಕಾರ ಜೆನೆರಿಕ್ ಔಷಧಾಲಯಗಳನ್ನು ಸರಕಾರಿ ಆಸ್ಪತ್ರೆೆಯ ಆವರಣದಲ್ಲಿ ತೆರೆಯಬೇಕು. ಪಾಪದವರು ಅಲ್ಲಿಗೆ ಬರುವುದರಿಂದ ಅಲ್ಲಿಯೇ ಔಷಧ ಅವರಿಗೆ ಸಿಗುತ್ತದೆ. ಬೇರೆ ಕಡೆ ಅಂತಹ ಮೆಡಿಕಲ್ ಗಳನ್ನು ತೆರೆದರೆ ಶ್ರೀಮಂತರು ಕೂಡ ಖರೀದಿಸಿ ನಂತರ ಅರ‌್ಹರಿಗೆ ಕೊರತೆಯಾಗಬಹುದು. ಉದಾಹರಣೆಗೆ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆೆಯಲ್ಲಿ ಹಾಲಿನ ಬೂತ್ ಒಂದಕ್ಕೆೆ ಅವಕಾಶ ಕೊಟ್ಟಂತೆ ಜೆನೆರಿಕ್ ಶಾಪ್ ತೆರೆಯಿರಿ. ಹಾಗೆ ವೆನ್ ಲಾಕ್ ಆಸ್ಪತ್ರೆೆಯಲ್ಲಿ ಕ್ಯಾಾಂಟಿನ್ ಗೆ ಜಾಗ ಮಾಡಿಕೊಟ್ಟಂತೆ ಅಲ್ಲಿಯೂ ಜೆನೆರಿಕ್ ಅಂಗಡಿಗಳು ಓಪನ್ ಆಗಲಿ.

ಅಷ್ಟಕ್ಕೂ ಒಂದು ವಿಷಯ ಹೇಳಬಯಸುತ್ತೇನೆ. ಯಾವಾಗಲೂ ಪ್ರತಿಭಟನೆಗಳು ಆಗಬೇಕಾಗಿರುವುದು ಇಂತಹ ವಿಷಯದಲ್ಲಿ. ಕಮ್ಯುನಿಸ್ಟರು ಕೆಲವೊಮ್ಮೆ ಅಲ್ಲಲ್ಲಿ ಬೀಡಿ ಕಾರ್ಮಿಕರ, ಕಟ್ಟಡ ಕಾರ್ಮಿಕರ ಪರ ಪ್ರತಿಭಟನೆ ಮಾಡುತ್ತಾರೆ. ಆದರೆ ಅವರಿಗೆ ಜನಬಲ ಕಡಿಮೆ ಇರುವುದರಿಂದ ಮತ್ತು ಯಾವತ್ತೂ ರಾಜ್ಯದಲ್ಲಿ ಅಧಿಕಾರಕ್ಕೆೆ ಬರಲು ಸಾಧ್ಯವೇ ಇಲ್ಲವಾಗಿರುವುದರಿಂದ ಅವರ ಬೇಡಿಕೆ ಅನುಷ್ಠಾನಕ್ಕೆೆ ಬರುವುದು ಕಡಿಮೆ. ಅದಕ್ಕಾಗಿ ಜನರ ಪರ ಹೋರಾಟದಲ್ಲಿ ಬಿಜೆಪಿ, ಕಾಂಗ್ರೆೆಸ್ ಮುಂದಕ್ಕೆೆ ಬರಬೇಕು. ಜೆನೆರಿಕ್ ಮಳಿಗೆಗಳನ್ನು ಹೆಚ್ಚೆೆಚ್ಚು ತೆರೆಯಲು ಕೇಂದ್ರದ ಮೇಲೆ ಕಾಂಗ್ರೆೆಸ್ ಒತ್ತಡ ತರಲಿ. ಹಾಗೆ ಅದಕ್ಕೆೆ ಜಾಗ, ಮೂಲಭೂತ ಸೌಲಭ್ಯ ಕೊಡಿಸಲು ಬಿಜೆಪಿ ರಾಜ್ಯದ ಮೇಲೆ ಒತ್ತಡ ತರಲಿ. ಒಟ್ಟಿನಲ್ಲಿ ಅಭಿವೃದ್ಧಿ ನಮ್ಮ ಕರಾವಳಿಗೆ, ರಾಜ್ಯಕ್ಕೆೆ ಸಿಗಲಿ. ಹೇಗೂ ಮಂಗಳೂರು ಚಲೋ ಮುಗಿದಿದೆ. ನವ ಕರ್ನಾಟಕದ ಚಿಂತನೆ ನಡೆಯಲಿ ಎಂದು ಹೇಳುತ್ತಾ ವಾರವನ್ನು ಮುಗಿಸುತ್ತಿಿದ್ದೇನೆ. ಮುಂದಿನ ವಾರ ಹೊಸ ವಿಚಾರ, ಹೊಸ ಕಲ್ಪನೆಗಳೊಂದಿಗೆ ಸಿಗೋಣ!

-ಹನುಮಂತ ಕಾಮತ್, ಸಾಮಾಜಿಕ ಹೋರಾಟಗಾರರು

0
Shares
  • Share On Facebook
  • Tweet It




Trending Now
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Tulunadu News January 20, 2026
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
Tulunadu News January 19, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
  • Popular Posts

    • 1
      ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • 2
      ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • 3
      ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • 4
      ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..

  • Privacy Policy
  • Contact
© Tulunadu Infomedia.

Press enter/return to begin your search