ಸುದ್ದಿಗೋಷ್ಠಿಯಲ್ಲಿ ಪತಿಗೆ ವಿಚ್ಛೇದನ ನೀಡಿದ ಮುಸ್ಲಿಂ ಮಹಿಳೆ
Posted On September 10, 2017
ಲಖ್ನೌ: ಪತಿಯಿಂದ ಬೇಸತ್ತ ಮುಸ್ಲಿಂ ಮಹಿಳೆಯೊಬ್ಬರು ಸುದ್ದಿಗೋಷ್ಠಿ ಕರೆದು ಮಾಧ್ಯಮದವರ ಎದುರು ವಿಚ್ಛೇದನ ಘೋಷಿಸಿದ್ದಾರೆ.
‘ಇಸ್ಲಾಂನ ವಿಧಿವಿಧಾನದ ಅನ್ವಯ ‘ಖುಲಾ (ವಿಚ್ಛೇದನ)’ ಪಡೆಯಲು ಧರ್ಮಗುರುಗಳನ್ನು ಸಂಪರ್ಕಿಸಿದರೂ, ಅವರು ವಿಚ್ಛೇದನಕ್ಕೆೆ ಅನುಮತಿ ನೀಡದ ಕಾರಣ ಸುದ್ದಿಗೋಷ್ಠಿ ಕರೆದು ವಿಚ್ಛೇದನ ನೀಡುತ್ತಿದ್ದೇನೆ’ ಉತ್ತರ ಪ್ರದೇಶದ ಮಹಿಳೆ ಶಾಜಾದಾ ಕಾತೂನ್ ತಿಳಿಸಿದ್ದಾರೆ.
ಅಲ್ಲದೆ ಇಸ್ಲಾಂನಲ್ಲಿ ಪುರುಷರು ತಲಾಖ್ ನೀಡಬಹುದಾದರೆ, ನಾವೇಕೆ ಖುಲಾ ನೀಡಬಾರದು ಎಂದು ಪ್ರಶ್ನಿಸಿದ್ದಾರೆ.
ಶಾಜಾದಾ, ಜುಬರ್ ಅಲಿ ಎಂಬುವರನ್ನು ಮದುವೆಯಾಗಿದ್ದು, ಇತ್ತೀಚೆಗೆ ದಾಂಪತ್ಯದಲ್ಲಿ ಒಡಕು ಮೂಡಿದೆ. ಅಲಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಸಹ ತಿಳಿದುಬಂದಿದೆ.
- Advertisement -
Leave A Reply