ದೇವಾಲಯ ಮೇಲಿದ್ದ ಕೇಸರಿ ಧ್ವಜಕ್ಕೆ ಬೆಂಕಿ: ಆಕ್ರೋಶ
Posted On September 15, 2017
ಚಾಮರಾಜನಗರ: ನಗರದ ಗಾಳೀಪುರ ಬಡಾವಣೆಯ ವಿನಾಯಕ ದೇವಾಲಯದ ಮೇಲೆ ನೆಟ್ಟಿದ್ದ ಕೇಸರಿ ಧ್ವಜ ಸುಟ್ಟಿರುವ ಘಟನೆ ನಡೆದಿದ್ದು ಹಿಂದೂಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.
ರಾತ್ರಿ ದೇವಾಲಯದ ಮೇಲಿದ್ದ ಕೇಸರಿ ಧ್ವಜ ಕೆಳಗಿಳಿಸಿ, ಪಕ್ಕದಲ್ಲೆ ನಿಂತಿದ್ದ ಬೈಕ್ ಮೇಲೆ ಇಟ್ಟು ಧ್ವಜಕ್ಕೆ ಬೆಂಕಿ ಹಚ್ಚಿ ಸುಡಲಾಗಿದೆ.
ಬೆಳಗ್ಗೆ ನಿವಾಸಿಗಳು ಗಮನಿಸಿದಾಗ ಘಟನೆ ನಡೆದಿರುವುದು ತಿಳಿದುಬಂದಿದ್ದು, ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ವಿಚಾರ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಇನ್ನು ಘಟನೆಗೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಧ್ವಜವನ್ನು ಸುಟ್ಟಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳ ಒಕ್ಕೂಟ ಹಾಗೂ ಆಜಾದ್ ಹಿಂದೂ ಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
- Advertisement -
Trending Now
ಕೃಷಿ ಮಾಡ್ಬೇಕು, ಪೆರೋಲ್ ಕೊಡಿ ವಿನಂತಿಗೆ ಹೈಕೋರ್ಟ್ ಅಸ್ತು!
December 2, 2024
Leave A Reply