ವಿವಿಯಲ್ಲಿ ಭೈರಪ್ಪನವರ ಅಷ್ಟೂ ಹಗರಣಗಳಿಗೆ ಅಕ್ರಮ ಸದಸ್ಯ ಹರೀಶ್ ಆಚಾರ್ ಬೆಂಬಲ!
ಕರ್ನಾಟಕದ ಘನವೆತ್ತ ರಾಜ್ಯಪಾಲರು ಶೀಘ್ರದಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ಕಡೆ ತಮ್ಮ ಚಿತ್ತವನ್ನು ಹರಿಸದಿದ್ದರೆ ಅಲ್ಲಿರುವ ಕುಲಪತಿ ಭೈರಪ್ಪನವರು ವಿಶ್ವವಿದ್ಯಾಲಯವನ್ನು ಇಡಿಯಾಗಿ ಸ್ವಾಹ ಮಾಡಲಿದ್ದಾರೆ. ಈ ಕುರಿತು ತುಳುನಾಡು ನ್ಯೂಸ್ ಸರಣಿಯಲ್ಲಿ ವರದಿಗಳನ್ನು ಪ್ರಕಟಿಸುತ್ತಿದೆ. ಭೈರಪ್ಪನವರು ರಾಜ್ಯಪಾಲರ ಕಣ್ಣಿಗೂ ಮಣ್ಣೆರೆಚಿ ಮಾಡುತ್ತಿರುವ ಕುತಂತ್ರಕ್ಕೆ ಇಡೀ ವಿಶ್ವವಿದ್ಯಾಲಯದ ಶಿಕ್ಷಕ ವೃಂದ ಕೂಡ ಅಸಹ್ಯಪಡುತ್ತಿದೆ. ಭೈರಪ್ಪನವರು ತಾವು ಮಾಡುತ್ತಿರುವ ಭ್ರಷ್ಟಾಚಾರ ಬಯಲಿಗೆ ಬರಬಾರದು ಎಂದು ತೆಗೆದುಕೊಂಡಿರುವ ಮುನ್ನೆಚ್ಚರಿಕೆಯ ಬಗ್ಗೆ ಕಾಂಗ್ರೆಸ್ಸಿಗರು ಶಹಭಾಷ್ ಎನ್ನುತ್ತಿದ್ದಾರೆ. ವಿಷಯ ಏನೆಂದರೆ ಭೈರಪ್ಪನವರು ತಾವು ಮಾಡುವ ಪ್ರತಿಯೊಂದು ಭ್ರಷ್ಟಾಚಾರಕ್ಕೂ ಕಾಂಗ್ರೆಸ್ಸಿನ ಆರ್ಶೀವಾದ ಪಡೆದೆ ಮಾಡುತ್ತಿರುವುದರಿಂದ ಅವರಿಗೆ ತಮ್ಮ ಹಗರಣ ಹೊರಗೆ ಬರುತ್ತದೆ ಎನ್ನುವ ಹೆದರಿಕೆ ಇಲ್ಲ. ಏಕೆಂದರೆ ಈಗ ಇರುವುದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ. ಆದರೆ ಅವರಿಗೆ ಆತಂಕ ಇರುವುದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಏನಾದರೂ ತಮ್ಮ ಹಗರಣವನ್ನು ಬಯಲಿಗೆ ತಂದು ರಾಜ್ಯಪಾಲರಿಗೆ ದೂರು ಕೊಟ್ಟರೆ ತಾವು ತಮ್ಮ ಅಂಗಡಿ ಮುಚ್ಚಿ ಗಂಟು ಮೂಟೆ ಕಟ್ಟಿ ಮೈಸೂರಿಗೆ ಮುಖ ಮಾಡಿ ಹೊರಡಬೇಕಾಗಬಹುದು ಎನ್ನುವ ಭಯ.
ಅದಕ್ಕೆ ಅವರು ಏನು ಮಾಡಿದರು ಎಂದರೆ ವಿವಿಯ ಸಿಂಡಿಕೇಟ್ ಸದಸ್ಯರಾಗಿ ಎಬಿವಿಪಿ, ಬಿಜೆಪಿ ಕಡೆಯಿಂದ ಯಾರ್ಯಾರೋ ಬಂದು ಕುಳಿತರೆ ಅವರು ತನ್ನ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರೆ ಆಗ ತಾನು ಫಜೀತಿಗೆ ಒಳಪಟ್ಟು ಇಷ್ಟು ವರ್ಷ ಎಲ್ಲಾ ಕಡೆ ಸೆಟಲ್ ಮೆಂಟ್ ಮಾಡಿಸಿಕೊಂಡು ಉಳಿಸಿರುವ ಮಾನ, ಮರ್ಯಾದೆಯನ್ನು ಕಳೆದುಕೊಳ್ಳಬೇಕಾದಿತು ಎಂದು ಹೆದರಿದ ಭೈರಪ್ಪನವರು ಮಾಡಿದ ತಂತ್ರವೆಂದರೆ ಸಂಘ ಪರಿವಾರದವ ಗುಂಪಿನಿಂದಲೇ ಒಬ್ಬ ವ್ಯಕ್ತಿಯನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವುದು.
ಹೀಗೆ ಭೈರಪ್ಪನವರ ಅಷ್ಟೂ ಭ್ರಷ್ಟಾಚಾರಗಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತುಕೊಂಡಿರುವ, ಎಬಿವಿಪಿ ಮಂಗಳೂರು ವಿಶ್ವವಿದ್ಯಾನಿಲಯದ ಹಗರಣಗಳನ್ನು ಬಯಲಿಗೆ ಎಳೆಯಲು ಹೊರಟಾಗ ಅದನ್ನು ತಡೆಯುವ, ವಿವಿಯನ್ನು ಅಭಿವೃದ್ಧಿ ಮಾಡುತ್ತೆವೆ ಎಂದು ಎದುರಿಗೆ ನಾಟಕ ಮಾಡಿ ಹಿಂದೆ ಪ್ರತಿಯೊಂದರಲ್ಲಿಯೂ ಕಮೀಷನ್ ಪಡೆಯುವ ಮತ್ತು ಭೈರಪ್ಪನವರ ಕಪ್ಪು ಹಣವನ್ನು ಬಿಳಿ ಮಾಡುವ ಗುತ್ತಿಗೆ ಪಡೆದುಕೊಂಡಿರುವ ಹೀಗೆ ಹತ್ತು ಹಲವು ಬಹುಪರಾಕ್ ಹೊಂದಿರುವ ಮನುಷ್ಯನ ಹೆಸರು ಹರೀಶ್ ಆಚಾರ್.
ಹರೀಶ್ ಆಚಾರ್ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭೈರಪ್ಪನವರೊಂದಿಗೆ ಸೇರಿಕೊಂಡು ಮಾಡಿರುವ ಹಗರಣಗಳನ್ನು ಒಂದೊಂದಾಗಿ ಹೇಳುತ್ತೇವೆ. ಅದಕ್ಕಿಂತ ಮೊದಲು ಈ ಮನುಷ್ಯ ವಿವಿ ಸಿಂಡಿಕೇಟ್ ಸದಸ್ಯನಾಗಿರುವುದೇ ಅಕ್ರಮ ಎಂದು ಮೊದಲಿಗೆ ಹೇಳಬಯಸುತ್ತೇವೆ. ಅದು ಹೇಗೆ ವಿವರಿಸುತ್ತೇವೆ.
ತುಳುನಾಡು ನ್ಯೂಸ್ ಗೆ ಸಿಕ್ಕಿರುವ ದಾಖಲೆಯ ಪ್ರಕಾರ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಆಕ್ಟ್ 2000 ರ ಚಾಪ್ಟರ್ 4 ಕಲಾಂ 39 ಪ್ರಕಾರ ಒಬ್ಬ ವ್ಯಕ್ತಿ ಸಿಂಡಿಕೇಟ್ ಸದಸ್ಯನಾಗಲು ಇರುವ ಅರ್ಹತೆಯ ಬಗ್ಗೆ ಹೇಳಲಾಗಿದೆ. ಅದರ ಎರಡನೇ ಅಂಶವೆ ಸ್ಪಷ್ಟವಾಗಿದೆ. ” ಒಬ್ಬ ವ್ಯಕ್ತಿ ಈ ಆಕ್ಟ್ ಅಡಿಯಲ್ಲಿ ಎರಡನೇ ಬಾರಿ ಸಿಂಡಿಕೇಟ್ ಸದಸ್ಯನಾಗಲು ಅರ್ಹನಾಗಿರುವುದಿಲ್ಲ”
ಎರಡನೇ ಬಾರಿಯೇ ಒಬ್ಬನಿಗೆ ಸಿಂಡಿಕೇಟ್ ಸದಸ್ಯನಾಗಲು ಸಾಧ್ಯವಾಗುವುದಿಲ್ಲವಾದರೆ ಅಥವಾ ಅಂತಹ ಅವಕಾಶವೇ ಇಲ್ಲವಾಗಿದ್ದಲ್ಲಿ ಹರೀಶ್ ಆಚಾರ್ ಮೂರನೇ ಬಾರಿಗೆ ಹೇಗೆ ಸಿಂಡಿಕೇಟ್ ಸದಸ್ಯರಾಗಲು ಸಾಧ್ಯ. ಅಂದರೆ ಮೂಲದಲ್ಲಿಯೇ ಅಕ್ರಮ ಇದೆ ಎಂದು ನೂರಕ್ಕೆ ನೂರು ಗ್ಯಾರಂಟಿ ಇದೆಯಲ್ಲ. ಹರೀಶ್ ಆಚಾರ್ ಅವರನ್ನು ಮೂರನೇ ಬಾರಿ ಸಿಂಡಿಕೇಟ್ ಗೆ ಸದಸ್ಯರನ್ನಾಗಿ ಮಾಡಿದ್ದು ರಾಜ್ಯಪಾಲರು. ಆದರೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದು ಇದೇ ಭೈರಪ್ಪನವರು. ಹಾಗೆ ಮಾಡುವಾಗ ಭೈರಪ್ಪನವರು ರಾಜ್ಯಪಾಲರಿಗೆ ಸುಳ್ಳು ಮಾಹಿತಿ ಕೊಟ್ಟು ದಾರಿ ತಪ್ಪಿಸಿರುವ ಸಾಧ್ಯತೆ ಇದೆ. ಇಲ್ಲದೇ ಹೋದರೆ ಕಾನೂನು ನಿಯಮಗಳನ್ನು ಮೀರಿ ರಾಜ್ಯಪಾಲರು ಹರೀಶ್ ಆಚಾರ್ ಅವರನ್ನು ಸಿಂಡಿಕೇಟ್ ಗೆ ಸೇರಿಸಲು ಒಪ್ಪುವ ಸಾಧ್ಯತೆ ಇರುವುದಿಲ್ಲ. ಇದರ ಅರ್ಥ ಭೈರಪ್ಪನವರು ತಮ್ಮ ಭ್ರಷ್ಟಾಚಾರಕ್ಕೆ ಯಾವುದೇ ಅಡೆತಡೆ ಆಗಬಾರದು ಎಂದು ಎಂತಹ ಕಾನೂನು, ನಿಯಮಗಳನ್ನು ಕೂಡ ಸಲೀಸಾಗಿ ಮುರಿಯಬಲ್ಲರು ಎನ್ನುವುದು ಸಾಬೀತಾಗಿದೆ. ಸಿಂಡಿಕೇಟ್ ಸದಸ್ಯತ್ವ ಎಂದರೆ ಅದು ವಿದ್ಯಾರ್ಥಿಗಳ ಹಿತರಕ್ಷಣೆ, ಸರ್ವತೋಮುಖ ಬೆಳವಣಿಗೆಗೆ ದುಡಿಯುವ ಸೇವಾನಿರತರ ಒಕ್ಕೂಟ ಇದ್ದ ಹಾಗೆ. ಅಲ್ಲಿ ಸೇವೆ ಮಾಡುವ ಮನಸ್ಸಿನ ಯುವಕರು ಬೇಕು. ಅದು ವ್ಯಾಪಾರಕ್ಕೆ ಕುಳಿತುಕೊಳ್ಳುವ ಕಟ್ಟೆ ಅಲ್ಲ. ಆದರೆ ಹರೀಶ್ ಆಚಾರ್ ಅವರು ಅದನ್ನು ತಮ್ಮ ಅಭಿವೃದ್ಧಿಗೆ ಬಳಸಿಕೊಂಡಿರುವುದು ಮಾತ್ರ ಅಕ್ಷಮ್ಯ ಅಪರಾಧ. ಅವರನ್ನು ನಿಯಮ ಮೀರಿ ಮೆಂಬರ್ ಮಾಡಿರುವುದು ಭೈರಪ್ಪನವರ ಕುತಂತ್ರದ ಭಾಗ. ಹರೀಶ್ ಆಚಾರ್ ಮೂರನೇ ಅವಧಿಗೆ ಸದಸ್ಯರಾದ ನಂತರ ಮಾಡಿರುವ ಹಗರಣ ಏನು? ಅವರಿಂದ ಭೈರಪ್ಪನವರಿಗೆ ಆದ ಲಾಭಗಳೇನು? ಎಲ್ಲವನ್ನು ನಾವು ಬಯಲಿಗೆ ತರಲಿದ್ದೇವೆ. ಯಾಕೆಂದರೆ ಮಂಗಳೂರು ವಿಶ್ವವಿದ್ಯಾಲಯ ವ್ಯಾಪಾರಿ ಸಂಸ್ಥೆಯಲ್ಲ. ಅಲ್ಲಿ ಭ್ರಷ್ಟಾಚಾರ ಮಾಡುವವರು, ಅದರಿಂದ ತಮ್ಮ ಅಭಿವೃದ್ಧಿ ಮಾಡಿಕೊಂಡವರು, ಏಳಿಗೆ ಹೊಂದಿದವರು ಎಲ್ಲರ ಮುಖವಾಡ ಕಳಚಬೇಕು. ರಾಜ್ಯಪಾಲರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ತನಕ, ಸ್ವತಂತ್ರ ತನಿಖೆ ನಡೆದು ಸತ್ಯ ಹೊರಗೆ ಬಂದು ಸಮಾಜದಲ್ಲಿ ಗಣ್ಯರ ವೇಷ ತೊಟ್ಟು ಹಿಂದೆ ಶಿಕ್ಷಣದ ಹೆಸರಿನಲ್ಲಿ ವ್ಯಾಪಾರ ಮಾಡುವವರ ಬಣ್ಣ ಕಳಚಲು ನಾವು ತಯಾರಾಗಿದ್ದೇವೆ. ಎಷ್ಟೇ ಪ್ರಭಾವ ಬಂದರೂ ನಾವು ಹಿಂದೆ ಸರಿಯಲ್ಲ!
Leave A Reply