ರೈಲ್ವೆ ರಿಸರ್ವೇಶನ್ ಚಾರ್ಟ್ ಯುಗಾಂತ್ಯ, ಇನ್ಮೇಲೆ ಡಿಜಿಟಲ್
Posted On September 19, 2017
ಬೆಂಗಳೂರು : ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ಮೂರು ತಿಂಗಳಿನಿಂದ ನಡೆಸಿದ ಪ್ರಯೋಗ ಸಫಲವಾಗಿದ್ದರಿಂದ ದೇಶಾದ್ಯಂತ ರೈಲುಗಳಲ್ಲಿ ರಿಸರ್ವೇಷನ್ ಚಾರ್ಟ್ ಹಾಕುವುದಕ್ಕೆ ಇಲಾಖೆ ತಿಲಾಂಜಲಿ ಹಾಡಲಿದೆ. ಇದರಿಂದ ಪೇಪರ್ ಬಳಕೆಯನ್ನು ನಿಯಂತ್ರಿಸಿದಂತಾಗುತ್ತದೆ ಎಂದು ರೈಲ್ವೆ ಇಲಾಖೆ ಕಾರಣ ನೀಡಿದೆ.
ನ.8,2016ರಿಂದ ಬೆಂಗಳೂರು ವಿಭಾಗದಲ್ಲಿ ಚಾರ್ಟ್‍ಗಾಗಿ ಪೇಪರ್ ಬಳಸುವುದನ್ನು ಕೈಬಿಡಲಾಗಿತ್ತು. ಪರ್ಯಾಯವಾಗಿ ಎಸ್‍ಎಮ್‍ಎಸ್, ನಿಲ್ದಾಣಗಳಲ್ಲಿ ಡಿಜಿಟಲ್ ಡಿಸ್ಪ್ಲೇ ಚಾರ್ಟ್‍ಗಳು, ಸಹಾಯವಾಣಿ 139ನಲ್ಲಿ ತುರ್ತು ಸ್ಪಂದನೆ ಮಾರ್ಗಗಳನ್ನು ಪ್ರಯಾಣಿಕರ ಅನುಕೂಲಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ 60 ಲಕ್ಷ ರೂ. ಇಲಾಖೆಗೆ ಉಳಿತಾಯವಾಗಿದೆ ಎಂದು ಬೆಂಗಳೂರು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಶ್ರೀಧರ ಮೂರ್ತಿ ತಿಳಿಸಿದ್ದಾರೆ.
ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲುಗಳಲ್ಲಿಯೂ ಪ್ರಯೋಗ ನಡೆಸಲಾಗಿತ್ತು.
ಬರ್ತ್ ಖಾತ್ರಿಯಾದರೆ ಟಿಕೆಟ್‍ನಲ್ಲಿಯೇ ಸೀಟಿನ ಸಂಖ್ಯೆ ಉಲ್ಲೇಖ. ಇಲ್ಲವಾದಲ್ಲಿ ವೇಟಿಂಗ್ ಪ್ರಯಾಣಿಕರಿಗೆ ಖಾತ್ರಿಯಯಾದ ಕೂಡಲೇ ಎಸ್‍ಎಮ್‍ಎಸ್‍ನಿಂದ ಮಾಹಿತಿ, ಖಾತ್ರಿ ಕುರಿತು ತಿಳಿಯಲು 24 ಗಂಟೆ ಸೇವೆಯ ಸಹಾಯವಾಣಿ 139 ಪರ್ಯಾಯ ಮಾರ್ಗಗಳನ್ನು ರೈಲ್ವೆ ವ್ಯವಸ್ಥೆ ಮಾಡಿತ್ತು. ಮುಂಬೈನ ಶಿವಾಜಿ ಛತ್ರಪತಿ ಟರ್ಮಿನಸ್, ಚೆನ್ನೈನ ಸೆಂಟ್ರಲ್, ಕೋಲ್ಕತಾದ ಹೌರಾ ರೈಲ್ವೆ ನಿಲ್ದಾಣ, ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣಗಳಲ್ಲಿಯೂ ಪ್ರಾಯೋಗಿಕವಾಗಿ ರಿಸರ್ವೇಷನ್ ಚಾರ್ಟ್ ಬಳಕೆ ನಿಲ್ಲಿಸಲಾಗಿತ್ತು.
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply