ಸಿಐಡಿ ಕ್ಲೀನ್‍ಚಿಟ್ ಪಡೆದಿದ್ದ ಕೆ.ಜೆ.ಜಾರ್ಜ್ ವಿರುದ್ಧ ಸಿಬಿಐನಿಂದ ಪ್ರಕರಣ ದಾಖಲು
Posted On October 27, 2017
ಬೆಂಗಳೂರು : ಡಿವೈಎಸ್‍ಪಿ ಎಂ.ಕೆ. ಗಣಪತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಯಲ್ಲಿ ನಿರೀಕ್ಷಿತ ಕ್ಲೀನ್‍ಚಿಟ್ ಪಡೆದಿದ್ದ ಅಂದಿನ ಗೃಹ ಮಂತ್ರಿ ಕೆ.ಜೆ.ಜಾರ್ಜ್ ಸಿಬಿಐನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.
ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆಂiಯ ವರದಿಯಲ್ಲಿ ಹೇಳಲಾದರೂ, ಅದಕ್ಕೂ ಮುನ್ನ ಮಾಧ್ಯಮದಲ್ಲಿ ಕೂತು ನೇರವಾಗಿ ಗಣಪತಿ ತಮಗೆ ಪೊಲೀಸ್ ಇಲಾಖೆಯಲ್ಲಿ ಪ್ರಭಾವಿಗಳಿಂದಾಗುತ್ತಿರುವ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು,
ಪ್ರಮುಖವಾಗಿ ಜಾರ್ಜ್ ಅವರ ಭ್ರಷ್ಟತೆ, ಕಪಟಗಳನ್ನು ವಿವರಿಸಿದ್ದರು. ಆದರೆ ರಾಜ್ಯದ ಜನತೆ ನಿರೀಕ್ಷಿಸಿದಂತೆ ವಿರೋಧಪಕ್ಷಗಳ ಒತ್ತಡಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ಪ್ರಕರಣದ ತನಿಖೆ ಸಿಐಡಿಗೆ ಒಪ್ಪಿಸಿದ್ದರೆ ಹೊರತು ಕ್ಲೀನ್‍ಚಿಟ್ ಸಿಗುವುದು ಪಕ್ಕಾ ಆಗಿತ್ತು.
ಸಿಬಿಐನಿಂದ ಕೇಸ್ ದಾಖಲು : ಬೆಂಗಳೂರು ನಗರಾಭಿವೃದ್ಧಿ ಹಾಲಿ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಂತಿ ಮತ್ತು ಎಡಿಜಿಪಿ ಎ.ಎಂ.ಪ್ರಸಾದ್ ವಿರುದ್ಧ ಇದೀಗ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಪ್ರಕರಣ ದಾಖಲಿಸಿದೆ. ಪ್ರಾಥಮಿಕ ತನಿಖೆಯಿಂದ ಸಾವಿನಲ್ಲಿ ಮೂವರ ಕೈವಾಡವಿರುವುದು ಸಾಬೀತಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಜುಲೈ 7, 2016ರಂದು ಕೊಡಗಿನ ಲಾಡ್ಜ್‍ವೊಂದರಲ್ಲಿ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು.
- Advertisement -
20162017ammbengalurucasecbidyspganapathygeorgejulykjkodagukushalnagarlodgemadikerimmmohantypranabprasadregisterSiddaramaiahsuicide
Trending Now
ದಿನೇಶ್ ಗುಂಡು ರಾವ್ ಎಲ್ಲಿ ನಿದ್ದೆ ಮಾಡುತ್ತಿದ್ದಾರೆ - ಕುಂಪಲ ಪ್ರಶ್ನೆ
September 18, 2024
Leave A Reply