ಈ ದೇಶ ಕಂಡ ಅತಿ ಕೆಟ್ಟ ರಕ್ಷಣಾ ಮಂತ್ರಿ ಎ.ಕೆ. ಆ್ಯಂಟನಿ
ಇತ್ತೀಚೆಗಷ್ಟೇ ನಿರ್ಮಲಾ ಸೀತಾರಾಮನ್ ರಕ್ಷಣಾ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಂದಿರಾ ಗಾಂಧಿ ಬಳಿಕ ಮಹಿಳೆಯೊಬ್ಬರು ಜವಾಬ್ದಾರಿಯುತ ಖಾತೆ ವಹಿಸಿಕೊಂಡಿದ್ದು ಚರ್ಚೆಯಾಯಿತು. ಹಾಗೆಯೇ, ದೇಶ ಕಂಡ ದಕ್ಷ ರಕ್ಷಣಾ ಮಂತ್ರಿಗಳನ್ನು ನೆನಪಿಸಿಕೊಳ್ಳಲಾಯಿತು. ಕಾಂಗ್ರೆಸ್ಸಿನ ಜಾರ್ಜ್ ಫರ್ನಾಂಡಿಸ್ ಬಗ್ಗೆಯೂ ಸಕಾರಾತ್ಮಕ ಅಂಶ ಕೇಳಿಬಂದವು. ಆದರೂ ಒಂದು ಪ್ರಶ್ನೆ ಮಾತ್ರ ಹಾಗೆಯೇ ಉಳಿಯಿತು…
ಹಾಗಾದರೆ ದೇಶ ಕಂಡ ಅತಿ ಕೆಟ್ಟ ರಕ್ಷಣಾ ಮಂತ್ರಿ ಯಾರು?
ಅರುಣ್ ಜೇಟ್ಲಿ 2016ರಲ್ಲಿ ರಕ್ಷಣಾ ಖಾತೆ ವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿ ಕರೆದು “ಅಗಸ್ಟಾ ವೆಸ್ಟ್ ಲೆಂಡ್ ಹಗರಣವನ್ನು ಯುಪಿಎ ಆಡಳಿತದಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಎನ್ ಡಿಎ ಅದನ್ನು ಮತ್ತೆ ತನಿಖೆ ಮಾಡಲು ಅನುವು ಮಾಡಿಕೊಡುತ್ತದೆ ಎಂದರು. ಹೆಲಿಕಾಪ್ಟರ್ ಖರೀದಿ ಹಗರಣವನ್ನು ಮುಚ್ಚಿಹಾಕಿದ್ದು ಬೇರೆ ಯಾರೂ ಅಲ್ಲ, ಯುಪಿಎ ಅವಧಿಯಲ್ಲಿ ರಕ್ಷಣಾ ಮಂತ್ರಿಯಾಗಿದ್ದ ಎ.ಕೆ. ಆ್ಯಂಟನಿ.
ಈ ಕಾಂಗ್ರೆಸ್ಸಿನವರಿಗೆ ಯಾವುದೇ ಘಟನೆ, ಹಗರಣವನ್ನು ಮುಚ್ಚಿಹಾಕುವುದು ಒಂದು ಚಾಳಿಯೇ ಆಗಿಬಿಟ್ಟಿದೆ. ಮೊದಲು ಇಶ್ರತ್ ಜಹಾನ್ ಪ್ರಕರಣ ಮುಚ್ಚಿಹಾಕಿತು. ಬಳಿಕ ಸಂಝೋತಾ ಎಕ್ಸ್ ಪ್ರೆಸ್ ದುರಂತ, ಮಾಲೇಗಾಂವ್ ಸ್ಫೋಟ, ಅಗಸ್ಟಾ ವೆಸ್ಟ್ ಲೆಂಡ್ ಹಗರಣ… ಹೀಗೆ ಒಂದೇ, ಎರಡೇ? ಹೀಗೆ ಮುಚ್ಚಿ ಹಾಕುವ ಕೆಲಸದಲ್ಲಿ ಕಾಂಗ್ರೆಸ್ಸಿಗೆ ನಿಷ್ಠೆ ತೋರಿದ್ದು ಎ.ಕೆ. ಆ್ಯಂಟನಿ.
ಎಸ್ 70 ಬಿ, ಎಂಎಂಆರ್ ಸಿಎ, ಸಿಎಚ್-47 ಎಫ್, ಎಂ 777, ಅವ್ರೋ… ಹೀಗೆ ಹಲವು ಹೆಲಿಕಾಪ್ಟರ್ ಖರೀದಿಯಲ್ಲಿ ಎ.ಕೆ. ಆ್ಯಂಟನಿ ವಿರುದ್ಧ ಆರೋಪಗಳು ಕೇಳಿಬಂದವು. ಆದರೂ ಜಪ್ಪಯ್ಯ ಎನ್ನಲಿಲ್ಲ ಅವರು. ಇದೇ ಕಾರಣಕ್ಕೆ ಮನೋಹರ್ ಪರಿಕ್ಕರ್ ರಕ್ಷಣಾ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ, “ನಾವು ಅತಿ ಕೆಟ್ಟ ಅವ್ಯವಸ್ಥೆಯಲ್ಲಿದ್ದೇವೆ, ಇದನ್ನೆಲ್ಲ ತೊಲಗಿಸಬೇಕು’ ಎಂದಿದ್ದರು!
ಬರೀ ಹಗರಣಗಳಷ್ಟೇ ಅಲ್ಲ, ಅವರು ನೀಡುವ ಹೇಳಿಕೆಗಳೂ ಹಾಸ್ಯಾಸ್ಪದ, ನಿರ್ಲಜ್ಯತನದಿಂದ ಕೂಡಿದ್ದವು. 2016ರಲ್ಲಿ ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿ ಭಾರತದ ಐವರು ಯೋಧರನ್ನು ಹತ್ಯೆ ಮಾಡಿದ ಬಳಿಕ, “ಉಗ್ರರೇ ಪಾಕಿಸ್ತಾನಿ ಸೈನಿಕರ ಸಮವಸ್ತ್ರ ತೊಟ್ಟು ದಾಳಿ ಮಾಡಿದ್ದಾರೆ” ಎಂದರು. ಇದಕ್ಕೆ ದೇಶಾದ್ಯಂತ ಟೀಕೆ ವ್ಯಕ್ತವಾದಾಗ “ಇದು ಪಾಕಿಸ್ತಾನ ವಿಶೇಷ ಪಡೆ ಮಾಡಿದ ದಾಳಿ” ಎಂದು ತಿಪ್ಪೆ ಸಾರಿಸಿದರು.
ಆ್ಯಂಟನಿ ರಕ್ಷಣಾ ಮಂತ್ರಿಯಾಗಿದ್ದಾಗ ದೇಶಕ್ಕೆ ರಕ್ಷಣೆ ಎಂಬುದೇ ಇರಲಿಲ್ಲ. ಗಡಿಯಲ್ಲಿ ಉಗ್ರರ ದಾಳಿ, ಕದನ ವಿರಾಮ ಉಲ್ಲಂಘನೆ, ಹಗರಣಗಳೇ ಸುದ್ದಿಯಾದವು. ಅವರ ಅವಧಿಯಲ್ಲೇ ಚೀನಾ ಬರೋಬ್ಬರಿ 19 ಕಿ.ಮೀ. ಅತಿಕ್ರಮಣ ಮಾಡಿದ್ದು ಎಂಬುದು ಎಷ್ಟು ಜನರಿಗೆ ಗೊತ್ತು? ಇವರು ರಕ್ಷಣಾ ಮಂತ್ರಿಯಾಗಿದ್ದಾಗಲೇ 100ಕ್ಕೂ ಅಧಿಕ ವಾಯುದಳದ 100 ವಿಮಾನಗಳು ಅಪಘಾತಕ್ಕೀಡಾದವು, ತತ್ರಾ ಸೇನಾ ಟ್ರಕ್ ಖರೀದಿಯಲ್ಲಿ ಜನರಲ್ ವಿ.ಕೆ. ಸಿಂಗ್ ಅವರಿಗೆ 14 ಕೋಟಿ ರು. ಲಂಚದ ಆಮಿಷ ಒಡ್ಡಿದ್ದ ಆರೋಪ ಕೇಳಿಬಂದಿದ್ದು, ಇದೇ ಆ್ಯಂಟನಿ ಕುರಿತೇ ಎಂಬುದೇ ಗಮನಾರ್ಹ.
ಅಷ್ಟೇ ಅಲ್ಲ, ಅಧಿಕಾರದ ದುರುಪಯೋಗ ಮಾಡಿಕೊಂಡ ಕೀರ್ತಿಯೂ ಇದೇ ಆ್ಯಂಟನಿಗೇ ಸಲ್ಲಬೇಕು. 2012ರಲ್ಲಿ ಎ.ಕೆ. ಆ್ಯಂಟನಿ ಪತ್ನಿ ಎಲಿಜಬೆತ್ ಆ್ಯಂಟನಿ ಬಿಡಿಸಿದ ಪೇಂಟಿಂಗ್ ಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರ 28 ಕೋಟಿ ರು.ಗೆ ಖರೀದಿಸುವಂತೆ ಮಾಡಿದ್ದು ಆ್ಯಂಟನಿ. ವಾಸ್ತವದಲ್ಲಿ ಎಲಿಜಬೆತ್ ಆ್ಯಂಟನಿ ಯಾವುದೇ ತರಬೇತಿ ಪಡೆದ, ನುರಿತ ಪೇಂಟರ್ ಸಹ ಆಗಿರಲಿಲ್ಲ.
ಹೀಗೆ ಒಬ್ಬ ಅದಕ್ಷ, ಭ್ರಷ್ಟ, ಬೇಜವಾಬ್ದಾರಿಯುತರೊಬ್ಬರು ದೇಶದ ರಕ್ಷಣಾ ಮಂತ್ರಿಯಾದರೆ ಏನಾಗುತ್ತದೆ ಎಂಬುದಕ್ಕೆ ಆ್ಯಂಟನಿಯವರೇ ಸಾಕ್ಷಿ. ಈಗ ಮಹತ್ತರ ಖಾತೆಯನ್ನು ನಿರ್ಮಲಾ ಸೀತಾರಾಮನ್ ವಹಿಸಿಕೊಂಡಿದ್ದಾರೆ. ದಕ್ಷವಾಗಿ ನಿರ್ವಹಿಸಲಿ ಎಂಬುದೇ ಆಶಯ.
-ಅತುಲ್ ಕುಮಾರ್ ಮಿಶ್ರಾ
Leave A Reply