ಮೋದಿ ಇಸ್ರೇಲ್ ಭೇಟಿ ನೀಡಿದ್ದು ಐತಿಹಾಸಿಕ: ನೆತನ್ಯಾಹು
Posted On September 20, 2017
0
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ಗೆ ಭೇಟಿ ನೀಡಿದ್ದು ಐತಿಹಾಸಿಕ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಇಸ್ರೇಲ್ ದೇಶಕ್ಕೆ ನೂರಾರು ಮುಖಂಡರು ಭೇಟಿ ನೀಡಿದ್ದಾರೆ. ಆದರೆ ಇವರಲ್ಲಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡಿದ್ದು ಐತಿಹಾಸಿಕ ಎಂದಿದ್ದಾರೆ.
ನರೇಂದ್ರ ಮೋದಿ ಭೇಟಿಯಿಂದ ಉಭಯ ರಾಷ್ಟ್ರಗಳ ನಡುವೆ ಅಪರಿಮಿತ ಅವಕಾಶ ಸೃಷ್ಟಿಯಾಗಿವೆ. ಅಲ್ಲದೆ ಮಾನವತೆಯ ಆಧಾರದ ಮೇಲೂ ಮೋದಿ ತಮ್ಮ ಭೇಟಿ ವೇಳೆ ಛಾಪು ಮೂಡಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಮೋದಿ ಅವರು ಜಾಗತಿಕ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಭೇಟಿ ಔಪಚಾರಿಕವಾಗಿರದೆ, ಅವಕಾಶಗಳ ಸದುಪಯೋಗ, ಬಾಂಧವ್ಯ ವೃದ್ಧಿ, ಪರಸ್ಪರ ಸಹಕಾರ ಸೇರಿ ನಾನಾ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವಂಥಾಗಿದೆ ಎಂದು ತಿಳಿಸಿದ್ದಾರೆ.
Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
November 11, 2025









