ಗುಮ್ ನಾಮ್ ಬಾಬಾನೇ ಸುಭಾಷ್ ಚಂದ್ರ ಬೋಸ್- ಸುಭಾಷರ ಮರಿಮೊಮ್ಮಗಳು!
Special Report from Belagavi:
ಜವಾಹರ್ ಲಾಲ್ ನೆಹರೂ ಮಾಡಿದ್ದ ಶಾನಾವಾಜ್ ಕಮಿಟಿ ನೆಹರೂಗೆ ಬೇಕಾಗಿದ್ದವರ ಹೇಳಿಕೆಗಳನ್ನು ದಾಖಲಿಸಿದ್ದು ಬಿಟ್ಟರೆ ಏನೂ ಮಾಡಲಿಲ್ಲ. ನಮ್ಮ ಕುಟುಂಬದ ಮತ್ತು ದೇಶಪ್ರೇಮಿಗಳ ಸತತ ಒತ್ತಡದಿಂದ ಕೊನೆಗೂ ನೆಹರೂ ಶಾನಾವಾಜ್ ಕಮಿಟಿಯನ್ನು ಸ್ಥಾಪಿಸಿದ್ದರು. ಆದರೆ ನೆಹರೂ ಮತ್ತು ಕಾಂಗ್ರೆಸ್ ವಿರುದ್ಧವಾಗಿರುವವರ ಯಾವುದೇ ಹೇಳಿಕೆಯನ್ನು ಈ ಕಮಿಟಿ ಸ್ವೀಕರಿಸಿಲ್ಲ. ಅವರಿಗೆ ನೆಹರೂ ಹೇಳಿದ್ದೇ ವರದಿ ಕೊಡುವ ಅಗತ್ಯವಿತ್ತೆನೋ ಎಂದು ಸುಭಾಷ್ ಚಂದ್ರ ಬೋಸರ ಮರಿ ಮೊಮ್ಮಗಳು ರಾಜಶ್ರೀ ಚೌಧರಿ ಹೇಳಿ ಒಂದು ಕ್ಷಣ ಮಾತು ನಿಲ್ಲಿಸಿದರು.
ಅದರ ನಂತರ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ ಮತ್ತೊಂದು ಸಮಿತಿ ರಚನೆಯಾಯಿತು, ಅದರ ಹೆಸರು ಜಿಡಿ ಕೋಸ್ಲಾ ಕಮಿಟಿ. ಅದು ನೆಹರೂ ಅವರ ಶಾನಾವಾಜ್ ಕಮಿಟಿ ಮಾಡಿದ್ದೇ ಮತ್ತೊಮ್ಮೆ ಮಾಡಿತು ಎಂದು ಬೇರೆ ಹೇಳಬೇಕಾಗಿಲ್ಲ. ಸುಭಾಷರ ಅಣ್ಣ ಸುರೇಶ್ ಚಂದ್ರ ಬೋಸ್ ನ್ಯಾಯಾಲಯದಲ್ಲಿ ಮನವಿ ಮಾಡಿ ಶಾನಾವಾಜ್ ಕಮಿಟಿ ಮಾಡಿದ ತನಿಖೆ ಮತ್ತು ವರದಿ ಸರಿಯಿಲ್ಲ ಎಂದು ಹೇಳಿದ್ದನ್ನು ರಾಜಶ್ರೀ ನೆನಪಿಸಿಕೊಂಡರು.
ತುಳುನಾಡು ನ್ಯೂಸ್: ಹಾಗಾದರೆ ಉತ್ತರ ಭಾರತದಲ್ಲಿ ಗುಮ್ ನಾಮ್ ಬಾಬಾ ಎಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿಗೂ, ಸುಭಾಷ್ ಚಂದ್ರ ಬೋಸರಿಗೂ ಏನಾದರೂ ಸ್ವಾಮ್ಯತೆ ಇದೆಯಾ?
ರಾಜಶ್ರೀ ಚೌಧರಿ: ಹೌದು, ಹಾಗೊಂದು ಅನುಮಾನ ನಮ್ಮ ಕುಟುಂಬಕ್ಕೆ ಇದೆ. ಅದು ಕೇವಲ ಅನುಮಾನ ಅಲ್ಲದೇ, ವಾಸ್ತವವೂ ಆಗಿರಬಹುದು ಎಂದು ನನಗೆ ಅನಿಸುತ್ತದೆ. 1985 ರಲ್ಲಿ ಗುಮ್ ನಾಮ್ ಬಾಬಾ ಅಥವಾ ಭಗವಾನ್ ಜೀ ಎಂದು ಕರೆಸಿಕೊಳ್ಳುತ್ತಿದ್ದ ಆ ವ್ಯಕ್ತಿ ಕಣ್ಮರೆಯಾದ ನಂತರ ಸುಭಾಷರ ಅಣ್ಣ ಸುರೇಶ್ ಅವರ ಪತ್ನಿ ಲಲಿತಾ ಬೋಸ್ ಅವರು ಆ ಭಗವಾನ್ ಜೀ ವಾಸಿಸುತ್ತಿದ್ದ ಸ್ಥಳಕ್ಕೆ ಹೋಗಿ ಆ ವ್ಯಕ್ತಿ ಬಿಟ್ಟು ಹೋಗಿದ್ದ ವಸ್ತುಗಳನ್ನು, ಬಟ್ಟೆಗಳನ್ನು ಪರೀಶೀಲಿಸಿದ್ದರು. ಅದರ ನಂತರ ಅದೇ ವ್ಯಕ್ತಿ ಸುಭಾಷ್ ಆಗಿರಬಹುದು ಎನ್ನುವ ಬಲವಾದ ಸಂಗತಿ ಅವರಿಗೆ ಅನಿಸಿತ್ತು. ಆದ್ದರಿಂದ ಆ ವ್ಯಕ್ತಿ ಬಿಟ್ಟು ಹೋದ ವಸ್ತುಗಳನ್ನು ಸುರಕ್ಷಿತವಾಗಿ ತೆಗೆದಿಡಬೇಕು ಎಂದು ಅವರು ಆಗ್ರಹಿಸಿದ್ದರು. ಇನ್ನು ಸುಭಾಷ್ ಅವರು ನಡೆಸಿದ ಗ್ರೇಟ್ ಎಸ್ಕೇಪ್ ಬಗ್ಗೆ ಯಾವುದೇ ಉಲ್ಲೇಖ ಕಾಣುತ್ತಿಲ್ಲ. 250 ಜನ ಇವರ ಚಲನ ವಲನದ ಮೇಲೆ ಕಣ್ಣಿಟ್ಟಿದ್ದಾಗ ಅಷ್ಟೂ ಜನರನ್ನು ಏಮಾರಿಸಿ ದೇಶ ಬಿಟ್ಟು ಹೋಗಿ ಸ್ವತಂತ್ರ ಸೇನೆಯನ್ನು ಕಟ್ಟಿ ದೇಶಕ್ಕಾಗಿ ಹೋರಾಡುವ ಸಿದ್ಧತೆಯಲ್ಲಿದ್ದ ವ್ಯಕ್ತಿಯೊಬ್ಬನ ಬಗ್ಗೆ ಯಾವುದೇ ಕಡತಗಳನ್ನು ಇಲ್ಲಿಯ ತನಕ ನಮಗೆ ತೋರಿಸಿಲ್ಲ. ಇಂಟಲಿಜೆನ್ಸ್ ಅವರು ದಾಖಲೆ ಮಾಡಿರಬಹುದು. ಅದು ಕೇಂದ್ರ ಸರಕಾರದ ಹತ್ತಿರ ಇದ್ದಿರಬೇಕು. ಅದರ ದಾಖಲೆ ಖಂಡಿತ ಇದ್ದೇ ಇರುತ್ತದೆ. ಅದರೊಂದಿಗೆ ಇನ್ನು ನಾಲ್ಕು ಕಡತಗಳು ಸೇರಿ ಒಟ್ಟು 12 ಕಡತಗಳನ್ನು ನಾವು ಪರಿಶೀಲಿಸಬೇಕಾಗಿದೆ. ಅದೆಲ್ಲ ಹೊರಗೆ ಬರಬೇಕು. ಆಗ ಸತ್ಯ ಗೊತ್ತಾಗುತ್ತದೆ!
(ಬೆಳಗಾವಿಯಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತ ಸಾಹಿತ್ಯ ಸಮ್ಮೇಳನದ ನಂತರ ರಾಜಶ್ರೀ ಚೌಧರಿ ತುಳುನಾಡು ನ್ಯೂಸ್ ಗೆ ಸಂದರ್ಶನ ನೀಡಿದ್ದರು)
Leave A Reply