ರಾಮಮಂದಿರ ನಿರ್ಮಾಣಕ್ಕೆ ಇಸ್ಲಾಂ ಧರ್ಮಗುರುಗಳ ಸಮ್ಮತಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ತೊಟ್ಟಿರುವ ಪಣಕ್ಕೆ ಪುಷ್ಟಿ ಬಂದಿದ್ದು, ಮುಸ್ಲಿಂ ಧರ್ಮ ಗುರುಗಳೇ ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರು, ಧರ್ಮಗುರುಗುಳು ಅಯೋಧ್ಯೆಗೆ ಭೇಟಿ ನೀಡಿ, ಹಿಂದೂ ಸಂತರ ಜತೆ ಚರ್ಚಿಸಿದ್ದು, ಮಂದಿರ ನಿರ್ಮಾಣಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ.
ಎಐಎಂಪಿಎಲ್ ಬಿ ಸದಸ್ಯರಾದ ಮೌಲಾನ ಕಾಲ್ಬೆ ಜವಾದ್ ಹಾಗೂ ಮೌಲಾನ ಅಬ್ದುಲ್ ಮನ್ನನ್ ಅವರು ಮಹಾಂತ ಜನ್ಮೇಜಯ ಮಹಾರಾಜ್ ಅವರನ್ನು ಭೇಟಿ ಮಾಡಿ, ಶಾಂತಿ ಹಾಗೂ ಮಾತುಕತೆಯ ಮೂಲಕ ಅಯೋಧ್ಯೆ ವಿವಾದ ಬಗೆಹರಿಸಿಕೊಳ್ಳುವ ಕುರಿತು ಮಾತುಕತೆ ನಡೆಸಿದ್ದಾರೆ.
ಅಯೋಧ್ಯೆಯಲ್ಲಿ ಬಲವಂತವಾಗಿ ಮಸೀದಿ ಕಟ್ಟಿ, ನಮಾಜಿಗೆ ಬನ್ನಿ ಎಂದರೆ ಅದು ಪಾಪದ ಕಾರ್ಯವಾಗುತ್ತದೆ. ಹಾಗಾಗಿ ಒಂದೇ ಒಂದು ಮಂದಿರ ನಿರ್ಮಾಣ ಮಾಡಿದರೆ ವಿವಾದವೂ ಬಗೆಹರಿಯುತ್ತದೆ, ಶಾಂತಿಯೂ ನೆಲೆಸುತ್ತದೆ ಎಂದು ಮೌಲಾನ ಜವಾದ್ ತಿಳಿಸಿದ್ದಾರೆ.
ಒಮ್ಮತದ ತೀರ್ಮಾನದ ಮೂಲಕ ವಿವಾದ ಬಗೆಹರಿಸಿಕೊಳ್ಳೋಣ ಎಂದು ಮಹಾರಾಜ್ ಧರ್ಮಗುರುಗಳಿಗೆ ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ.
Leave A Reply