ಪಾಕ್ ಉಗ್ರರ ನೆಲೆ: ಭಾರತ
			      		
			      			Posted On September 22, 2017			      		
				  	
							0
						
			    	     ವಾಷಿಂಗ್ಟನ್: ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ಉಗ್ರ ನೆಲೆವೀಡಾಗಿ ಪರಿಣಮಿಸಿದ್ದು, ಅವರ ಪೋಷಣೆಯ ಹೊಣೆಯನ್ನೂ ಇದೇ ರಾಷ್ಟ್ರ ವಹಿಸಿಕೊಂಡಿದೆ ಎಂದು ಭಾರತ ತರಾಟೆಗೆ ತೆಗೆದುಕೊಂಡಿದೆ.
ವಾಷಿಂಗ್ಟನ್: ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ಉಗ್ರ ನೆಲೆವೀಡಾಗಿ ಪರಿಣಮಿಸಿದ್ದು, ಅವರ ಪೋಷಣೆಯ ಹೊಣೆಯನ್ನೂ ಇದೇ ರಾಷ್ಟ್ರ ವಹಿಸಿಕೊಂಡಿದೆ ಎಂದು ಭಾರತ ತರಾಟೆಗೆ ತೆಗೆದುಕೊಂಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, “ಪಾಕ್ ಎಂದರೆ ಉರ್ದುವಿನಲ್ಲಿ ಶುದ್ಧವಾದದ್ದು ಎಂದರ್ಥ. ಆದರೆ ಇದು ಭಯೋತ್ಪಾದಕರಿಗೆ ಪರಿಶುದ್ಧ ರಾಷ್ಟ್ರ ಎಂಬಂತಾಗಿದೆ ಎಂದು ಭಾರತದ ಪ್ರತಿನಿಧಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಹೆಚ್ಚಾಗಿರುವ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತ ಈ ಹೇಳಿಕೆ ನೀಡಿದ್ದು, ಪಾಕಿಸ್ತಾನ ಹಿಂದಿನಿಂದಲೂ ಉಗ್ರರನ್ನು ಬೆಂಬಲಿಸುತ್ತಲೇ ಬಂದಿದೆ. ಈಗಲೂ ಪಾಕಿಸ್ತಾನ ಉಗ್ರರನ್ನು ಪೋಷಿಸುತ್ತಿದೆ. ಮುಂದೆಯೂ ಹಾಗೆ ಮಾಡುತ್ತದೆ. ಅದನ್ನು ನಿಯಂತ್ರಿಸಬೇಕು ಎಂದಿದ್ದಾರೆ.