ಯಾವುದೋ ಪ್ರಶ್ನೆಗೆ ಇನ್ಯಾವುದೋ ಉತ್ತರ ನೀಡುವ ರಾಹುಲ್ ಗಾಂಧಿಯಂತೆ ಆಗಿ ಬಿಟ್ರಾ ರಮಾನಾಥ ರೈ ಗಳು?
Posted On September 23, 2017
ಭಾರತದ ಪ್ರಥಮ ಪ್ರಧಾನಿ ಎಂಬ ಮಹತ್ತರ ಜವಾಬ್ದಾರಿಯನ್ನು ಅರಿಯದೇ ತನ್ನ ಮೂರ್ಖತನದ ರೊಮ್ಯಾಂಟಿಕ್ ಐಡಿಯಾಗಳಿಂದ (ಇತಿಹಾಸಕಾರರೇ ಹೇಳಿರುವಂತೆ) ಚೀನಾ ಮುಂದೆ ತಲೆ ತಗ್ಗಿಸಿ ನಿಲ್ಲುವಂತೆ ಮಾಡಿದರಲ್ಲಾ ನೆಹರೂ! ಭಾರತೀಯರು ಎಷ್ಟು ನೋವನುಭವಿಸಿರಬೇಕು?
ಚಕ್ರವರ್ತಿಯವರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ “ನೆಹರೂ ಪರದೆ ಸರಿಯಿತು” ಎಂಬ ಪುಸ್ತಕದಲ್ಲಿ ಹಾಗೂ ತಮ್ಮ ಭಾಷಣಗಳಲ್ಲಿ ನೆಹರೂ ಅವರನ್ನು ಪ್ರಶ್ನಿಸುತ್ತಾರೆಯೇ ಹೊರತು ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಪಾತ್ರದ ಬಗ್ಗೆಯಲ್ಲ.
ಚಕ್ರವರ್ತಿ ಸೂಲಿಬೆಲೆಯವರು ನೆಹರೂ ಆಡಳಿತದ ವೈಫಲ್ಯದಿಂದ ಭಾರತ ಎದುರಿಸಿದ ಅವಮಾನ, ಸಮಸ್ಯೆಗಳ ಉಗಮ, ಅನುಭವಿಸಿದ ನಷ್ಟ, ಕಳೆದುಕೊಂಡ ಭೂಮಿ, ಹೀಗೆ ಪ್ರಮುಖ ವಿಚಾರಗಳ ಬಗ್ಗೆ ಈ ಹಿಂದೆ ಎತ್ತಿರುವ ಪ್ರಶ್ನೆಗಳಿಗೆ ಸಮರ್ಥ ಉತ್ತರ ಕೊಟ್ಟಿದ್ದರೆ ರೈ ಯವರನ್ನು ಮೆಚ್ಚಬಹುದಾಗಿತ್ತು.
ಆದರೆ ನೆಹರೂ ಅವರನ್ನು ಈ ವಿಷಯದಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರಿತಿರುವ ರೈ ಯವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ನೆಹರೂ ಅವರನ್ನು ಟೀಕಿಸುವವರು ದೇಶದ್ರೋಹಿಗಳು ಎಂದು ಭಾಷಣ ಮಾಡಿ ಮಾಮರವೆಲ್ಲೋ ಕೋಗಿಲೆ ಎಲ್ಲೋ ಎಂಬಂತೆ ಸೇಫ್ ಗೇಮ್ ಆಡಿದ್ದಾರೆ..
ರಮಾನಾಥ ರೈಗಳು ಹೇಳುವ ಪ್ರಕಾರ “ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಡಿ ಒಂದೇ ಒಂದು ದಿನ ಜೈಲಿನಲ್ಲಿದ್ದ ವ್ಯಕ್ತಿಯಾದರೂ ಸರಿ, ಅವರನ್ನು ಟೀಕಿಸುವವರು ದೇಶದ್ರೋಹಿಗಳಿಗೆ ಸಮ”.
ಇದು ಖಂಡಿತವಾಗಿಯೂ ಒಪ್ಪಿಕೊಳ್ಳುವ ಮಾತು.ಹಾಗಾದರೆ ವೀರ್ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಅಂಡಮಾನಿನ ಜೈಲಿನಲ್ಲಿ ಚಿತ್ರ ಹಿಂಸೆ ಅನುಭವಿಸಿದವರು. ಅಂತಹವರನ್ನು ಟೀಕಿಸುತ್ತಿರುವುದು ಸ್ವತಃ ಕಾಂಗ್ರೆಸ್ಸಿನ ಯುವರಾಜ ರಾಹುಲ್ ಗಾಂಧಿ. ಇವರಿಗೆ ದೇಶದ್ರೋಹಿಗಳ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಕೊಡಬಹುದು?
ಕಮ್ಯೂನಿಸ್ಟ್ ಬುದ್ಧಿಜೀವಿಗಳು ದಿನ ಬೆಳಗಾದರೆ ಸಾವರ್ಕರ್ ಅವರನ್ನು ಟೀಕಿಸುತ್ತಾರೆ. ಈ ದೇಶದ್ರೋಹಿಗಳನ್ನು ಏನು ಮಾಡಬಹುದು?
ರೈ ಯವರೇ ಇಷ್ಟೇ ಆಗಿದ್ದರೆ ನಿಮ್ಮದು ರಾಜಕೀಯ ಅಂದುಕೊಂಡು ಸುಮ್ಮನಾಗಬಹುದಿತ್ತು. ಆದರೆ ಚಕ್ರವರ್ತಿ ಸೂಲಿಬೆಲೆಯವರನ್ನು ಟೀಕಿಸುವ ಭರದಲ್ಲಿ ಕರ್ನಾಟಕ ರಾಜ್ಯದ ಒಂದು ಊರಿನ ಹೆಸರನ್ನು ಅವಮಾನಿಸಿದಿರಿ. ಸಾಲದ್ದಕ್ಕೆ ನೆರೆದಿದ್ದ ಜನರಿಂದಲೂ ಪದೇಪದೇ ಅವಮಾನಿಸಿ ಪ್ರಚಂಡ ದಿಗ್ವಿಜಯ ಸಾಧಿಸಿದಂತೆ ಗೆಲುವಿನ ನಗೆ ಬೀರಿದಿರಿ. ತಮ್ಮ ಹೆಸರು ಬಿ.ರಮಾನಾಥ ರೈ. “ಬಿ” ಅಂದರೆ ಬೆಳ್ಳಿಪಾಡಿ ಎಂಬ ಊರಿನ ಹೆಸರು. ಅದೇ “ಬಿ”ಯನ್ನು ಉಪಯೋಗಿಸಿ ಅದೆಷ್ಟು ಅವಹೇಳನಕಾರಿ ಪದ ಪ್ರಯೋಗ ನಿಮ್ಮ ವಿರುದ್ಧವೂ ಮಾಡಬಹುದೆಂಬುದನ್ನು ಮರೆತು ಬಿಟ್ರಾ ಹೇಗೆ?
ರಮಾನಾಥ ರೈ ಗಳೇ ಈಗಾಗಲೇ ನಿಮ್ಮ ಹಿಂದೂ ವಿರೋಧಿ ನೀತಿಯಿಂದ ಸ್ವಕ್ಷೇತ್ರದಲ್ಲೇ ಜನ ರೊಚ್ಚಿಗೆದ್ದಿದ್ದಾರೆ. ಅದೂ ಸಾಲದೆಂಬಂತೆ ಸ್ವಪಕ್ಷದವರೇ ನಿಮ್ಮ ಗೃಹಮಂತ್ರಿ ಸ್ಥಾನಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಇವೆಲ್ಲದರ ಪರಿಣಾಮವೋ ಏನೋ, ನಿಮ್ಮನ್ನು ನಾಡಿಗೆ (ಗೃಹ ಸಚಿವ) ತರುವ ಬದಲು ಕಾಡಿನಲ್ಲೇ (ಅರಣ್ಯ ಸಚಿವ) ಇರಿಸಲಾಗಿದೆ.
ಬಂಟ್ವಾಳದ ನಕಲಿ ಹುಲಿ ಆದಷ್ಟು ಶೀಘ್ರದಲ್ಲಿ ವನವಾಸ ಮುಗಿಸಿ ನಾಡಿಗೆ ಬರುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ..
- Advertisement -
Trending Now
ದೇಶದ್ರೋಹಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.
August 30, 2024
Leave A Reply