ಮತಾಂತರವಾಗಲು ಮುಸ್ಲಿಂ ಗೆಳೆಯರೇ ಕಾರಣ, ನಿಜ ತಿಳಿದು ಮರಳಿ ಹಿಂದುತ್ವಕ್ಕೆ ಮರಳಿದ ಮಹಿಳೆ
ತಿರುವನಂತಪುರ: ಅದು ಜುಲೈ 23… ಹೀಗೆ ಸುದ್ದಿಗೋಷ್ಠಿ ಕರೆದ ಆಥಿರಾ ಎಂಬ ಮಹಿಳೆ, ನಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇನೆ. ಇನ್ನು ಮುಂದೆ ನಾನು ಮುಸ್ಲಿಮಳಾಗಿ ಬದುಕುತ್ತೇನೆ ಎಂದಿದ್ದಳು. ಜನರೂ ಏನೋ ಮಾಡಿಕೊಳ್ಳಲಿ ಎಂದು ಸುಮ್ಮನಾಗಿದ್ದರು.
ಆದರೆ ಪುಣ್ಯವಶಾತ್ ಅದೇ ಮಹಿಳೆ ಈಗ, “ನನ್ನ ಗೆಳೆಯರೇ ದಾರಿತಪ್ಪಿಸಿ, ಮತಾಂತರವಾಗುವಂತೆ ಮಾಡಿದರು. ಆದರೆ ನಾನೀಗ ಹಿಂದುತ್ವಕ್ಕೆ ಮರಳುತ್ತೇನೆ’ ಎಂದು ಮತ್ತೊಂದು ಸುದ್ದಿಗೋಷ್ಠಿ ಕರೆದು ಘೋಷಿಸಿದ್ದಾಳೆ.
ಹೌದು, ಸುದ್ದಿಗೋಷ್ಠಿ ಕರೆದ ತಿರುವನಂತಪುರದ ಆಥಿರಾ, ಹಿಂದುತ್ವಕ್ಕೆ ಮರಳಿದ್ದಾರೆ. ಓಂ ನಮಃ ಶಿವಾಯ ಎಂದು ಸುದ್ದಿಗೋಷ್ಠಿ ಆರಂಭಿಸಿದ್ದಾಳೆ. ಅಷ್ಟೇ ಅಲ್ಲ, “ಆರಂಭದಲ್ಲಿ ನನ್ನ ಗೆಳೆಯರು, ಕಲ್ಲನ್ನು ದೇವರು ಎಂದು ಭಾವಿಸುವುದು ಮೂಢತನ. ನಿಮ್ಮಲ್ಲಿ ಕೆಲಸಕ್ಕೆ ಬಾರದ ನೂರಾರು ದೇವರಿದ್ದಾರೆ. ಆದರೆ ನಮ್ಮಲ್ಲಿ ಒಬ್ಬ ದೇವರೇ ತುಂಬ ಪವರ್ ಫುಲ್ ಎಂದಿದ್ದರು. ನನಗೂ ಕುತೂಹಲ ತಾಳಲಾರದೆ ಇಸ್ಲಾಂ ಸ್ವೀಕರಿಸಿದೆ. ಆಯೇಷಾ ಎಂದು ಹೆಸರು ಬದಲಾಯಿಸಿಕೊಂಡೆ’ ಎಂದು ವಿವರಿಸಿದ್ದಾಳೆ.
ಆದರೆ, ಬರಬರುತ್ತ ಮತಾಂತರವಾಗಿದ್ದು ತಪ್ಪು ಎನಿಸಿತು. ನನ್ನ ಪೋಷಕರು ಸಹ ನನ್ನ ಕಣ್ಣು ತೆರೆಸಿದರು. ಹಾಗಾಗಿ ಈಗ ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಹಿಂದೂ ಯುವತಿಯರೇ, ಇನ್ನಾದರೂ ಎಚ್ಚೆತ್ತುಕೊಳ್ಳಿ. ಯಾರದೋ ಮಾತು ಕೇಳಿ ಮತಾಂತರವಾಗದಿರಿ, ಪ್ರೀತಿಯ ಹೆಸರಲ್ಲಿ ಜಿಹಾದ್ ಬಲೆಗೆ ಸಿಲುಕಿ ಕಷ್ಟಪಡದಿರಿ. ಹಿಂದುತ್ವವೇ ಮಿಗಿಲು ಎಂಬುದನ್ನು ಆಥಿರಾ ಮೂಲಕವಾದರೂ ತಿಳಿಯಿರಿ.
Leave A Reply