ದುರ್ಗೆ ಕುರಿತ ಅವಮಾನಕರ ಹೇಳಿಕೆ: ದೆಹಲಿ ವಿವಿ ಪ್ರೊಫೆಸರ್ ವಿರುದ್ಧ ಎಫ್ಐಆರ್
ದೆಹಲಿ: ದೇಶದ ಹಲವು ವಿಶ್ವವಿದ್ಯಾಲಯ, ಅಲ್ಲಿರುವವರು ಯಾವಾಗಲೂ ವಿವಾದದಲ್ಲೇ ಇರಲು ಬಯಸುತ್ತಾರೆ ಎಂಬುದಕ್ಕೆ ಹೈದರಾಬಾದ್ ಹಾಗೂ ಜೆಎನ್ ಯು ವಿವಿಗಳೇ ಸಾಕ್ಷಿ.ಇದಕ್ಕೆ ಮತ್ತೊಂದು ನಿದರ್ಶನವಾಗಿ ಈಗ ದೆಹಲಿ ವಿವಿ ಸೇರಿದೆ.
ಹೌದು, ದುರ್ಗಾ ಮಾತೆಯ ಕುರಿತು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ದೆಹಲಿ ವಿವಿ ಸಹಾಯಕ ಪ್ರೊಸೆಸರ್ ಕೇದಾರ್ ಕುಮಾರ್ ಮಂಡಲ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದೆಹಲಿ ವಿವಿಯ ದ್ಯಾಲ್ ಸಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರೊಸೆಸರ್ ಆಗಿರುವ ಮಂಡಲ್ ಸೆಪ್ಟೆಂಬರ್ 22ರಂದು, “ಭಾರತದ ಪುರಾಣದಲ್ಲಿ ದುರ್ಗಾ ಮೋಹಕ ವೇಶ್ಯೆಯಾಗಿದ್ದಳು” ಎಂದು ತಮ್ಮ ಎಲುಬಿಲ್ಲದ ನಾಲಗೆಯನ್ನು ಹರಿಬಿಟ್ಟಿದ್ದರು.
ಮಂಡಲ್ ಹೇಳಿಕೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹಾಗೂ ರಾಷ್ಟ್ರೀ ವಿದ್ಯಾರ್ಥಿಗಳ ಒಕ್ಕೂಟ (ಎನ್ಎಸ್ ಯುಐ) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದವು. ಈಗ ದೂರಿನಂತೆ ಮಂಡಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುರ್ಗೆಯನ್ನು ಉತ್ತರ ಭಾರತದಲ್ಲಿ ಹೆಚ್ಚಾಗಿ ಆರಾಧಿಸುತ್ತಾರೆ. ದುಷ್ಟ ಸಂಹಾರಕ್ಕೆ ಒಂಬತ್ತು ಅವತಾರ ಎತ್ತಿದ ದುರ್ಗೆ ಶೌರ್ಯದ ಸಂಕೇತವೂ ಆಗಿದ್ದಾಳೆ.
Leave A Reply