ಶೌರ್ಯ ಮೆರೆದ ಸೈನಿಕರು, ಕಾಂಗೋದ 22 ಮಕ್ಕಳ ರಕ್ಷಣೆ
ದೆಹಲಿ: ವಿಶ್ವಸಂಸ್ಥೆ ನಿರ್ದೇಶನದ ಮೇರೆಗೆ ಯುದ್ಧದಿಂದ ಪರಿಣಾಮ ಎದುರಿಸುತ್ತಿರುವ ಕಾಂಗೋದ ಭದ್ರತೆಗೆ ನಿಯೋಜನೆಗೊಂಡಿರುವ ಭಾರತೀಯ ಸೈನಿಕರು ಕಾಂಗೋದ 22 ಮಕ್ಕಳನ್ನು ರಕ್ಷಿಸಿ ಶೌರ್ಯ ಹಾಗೂ ಮಾನವೀಯತೆ ಮೆರೆದಿದ್ದಾರೆ.
ಉಗ್ರರು ನ್ಯಾಬಿಯೊಂಡೋ ಪ್ರದೇಶದಿಂದ 22 ಮಕ್ಕಳನ್ನು ಅಪಹರಿಸಿದ್ದಲ್ಲದೇ, ಅವರಿಗೆ ಉಗ್ರ ತರಬೇತಿ ನೀಡಿ ಬಾಲ ಭಯೋತ್ಪಾದಕರನ್ನಾಗಿ ಮಾಡಲು ಯತ್ನಿಸುತ್ತಿರುವ ಕುರಿತು ಮಾಹಿತಿ ಪಡೆದುಕೊಂಡ ಭಾರತೀಯ ಸೇನೆ ಸೆ.16ರಂದು ಕಾರ್ಯಾಚರಣೆ ಕೈಗೊಂಡು 16 ಗಂಡು ಹಾಗೂ 6 ಹೆಣ್ಣುಮಕ್ಕಳನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
48 ಗಂಟೆಗಳ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮಕ್ಕಳನ್ನು ರಕ್ಷಿಸಲಾಗಿದ್ದು, ಈಗ ವಿಶ್ವಸಂಸ್ಥೆಯ ಮಕ್ಕಳ ರಕ್ಷಣೆ ಏಜೆನ್ಸಿಗಳ ವಶಕ್ಕೆ ನೀಡಿದ್ದಾರೆ.
ಅಲ್ಲದೆ, ಮಿರ್ಕಿ ಪ್ರದೇಶದಲ್ಲಿ ಉಗ್ರರು ಒತ್ತಾಯಪೂರ್ವಕವಾಗಿ ಜನರ ಸ್ಥಳಾಂತರವನ್ನು ವಿಫಲಗೊಳಿಸಿರುವ ಸೈನಿಕರು ಸುಮಾರು 200 ಕುಟುಂಬಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆದಾಗ್ಯೂ, ಭಾರತ ಕಾಂಗೋದಲ್ಲಿ 2600 ಸೈನಿಕರನ್ನು ನಿಯೋಜಿಸಿದ್ದು, ಸಾರ್ವಜನಿಕರ ರಕ್ಷಣೆ ಮಾಡುತ್ತಿದೆ.
Leave A Reply