ರೋಹಿಂಗ್ಯಾ ಮುಸ್ಲಿಮರಿಗೆ ಬೆಂಬಲ: ಯೋಗಿ ಆದಿತ್ಯನಾಥ ಆಕ್ರೋಶ
ಲಖನೌ: ಮ್ಯಾನ್ಮಾರ್ ರೋಹಿಂಗ್ಯಾ ಮುಸ್ಲಿಮರನ್ನು ಭಾರತದಲ್ಲಿಟ್ಟು ಪೋಷಣೆ ಮಾಡಬೇಕು ಎಂದು ಅಸಾದುದ್ದೀನ್ ಓವೈಸಿ, ಸೀತಾರಾಮ್ ಯೆಚೂರಿ ಹೇಳಿಕೆ ನೀಡಿರುವುದನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಖಂಡಿಸಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, “ರೋಹಿಂಗ್ಯಾಗಳು ಒಳನುಸುಳುಕೋರರೇ ಹೊರತು ನಿರಾಶ್ರಿತರಲ್ಲ. ಇಂಥ ರೋಹಿಂಗ್ಯಾಗಳ ಪರ ಮಾತನಾಡುವುದು ಸರಿಯಲ್ಲ” ಎಂದಿದ್ದಾರೆ.
ಸರಕಾರ ರೋಹಿಂಗ್ಯಾ ಮುಸ್ಲಿಮರು ಎಂಥವರು ಎಂಬುದನ್ನು ಅರಿತಿದೆ. ಮ್ಯಾನ್ಮಾರ್ ನಲ್ಲಿ ಮುಗ್ಧ ಹಿಂದೂಗಳ ಮಾರಣಹೋಮ ಮಾಡಿದ ರೋಹಿಂಗ್ಯಾಗಳ ಪರ ನಿಲ್ಲುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಆದಾಗ್ಯೂ ಇವರು ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಶಂಕೆಯಿರುವುದರಿಂದ ದೇಶದೊಳಗೆ ಇಟ್ಟುಕೊಳ್ಳುವುದು ಅಪಾಯಕಾರಿ ಎಂದು ಆದಿತ್ಯನಾಥ ಹೇಳಿದ್ದಾರೆ.
ರೋಹಿಂಗ್ಯಾ ಮುಸ್ಲಿಮರು 2012-13ರಿಂದ ಭಾರತದೊಳಕ್ಕೆ ನಸುಳುತ್ತಿದ್ದಾರೆ. ಅವರು ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದಾರೆ ಎಂದು ಗುಪ್ತಚರ ಮಾಹಿತಿಯಿಂದ ತಿಳಿದುಬಂದಿದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ. ಅವರ ಗಡಿಪಾರಿಗೂ ಚಿಂತನೆ ನಡೆಸಿದೆ.
ಶ್ರೀಲಂಕಾದಿಂದ ಬಂದ ತಮಿಳಿಗರು ನರೇಂದ್ರ ಮೋದಿ ಅವರಿಗೆ ಸಹೋದರರಂತಾಗಿರುವಾಗ, ರೋಹಿಂಗ್ಯಾ ಮುಸ್ಲಿಮರೇಕೆ ಮೋದಿ ಸಹೋದರರಾಗಬಾರದು ಎಂದು ಎಐಎಂಐಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದರು.
Leave A Reply