ಹಜ್ ಯಾತ್ರಿಕರಿಗೆ ನೀಡುವ ಸಹಾಯಧನ ಸ್ಥಗಿತಕ್ಕೆ ಕೇಂದ್ರ ಸರ್ಕಾರ ನಿರ್ಧಾರ
ದೆಹಲಿ: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮುಸ್ಲಿಮರನ್ನು ಓಲೈಸಲು ಹಜ್ ಯಾತ್ರಿಕರಿಗೆ ಸಹಾಯಧನ ನೀಡುವ ಯೋಜನೆ ಜಾರಿಗೆ ತಂದಿತ್ತು. ಆದರೆ ಹಿಂದೂಗಳೂ ಕಾಶಿ ಯಾತ್ರೆ ಕೈಗೊಳ್ಳುತ್ತಾರೆ ಎಂಬುದನ್ನು ಮರೆತಿತ್ತು ಕಾಂಗ್ರೆಸ್. ಈ ತಾರತಮ್ಯ ಹೋಗಲಾಡಲಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಹಜ್ ಯಾತ್ರಿಕರಿಗೆ ನೀಡುವ ಸಹಾಯಧನ ಸ್ಥಗಿತಕ್ಕೆ ಮುಂದಾಗಿದೆ.
ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ನೇತೃತ್ವದ ಸಮಿತಿ ಹಜ್ ನೀತಿ ಕರಡು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ನೀಡಿದೆ. ಈ ಕರಡಿನಲ್ಲಿ ಹಜ್ ಯಾತ್ರಿಕರಿಗೆ ನೀಡುವ ಸಹಾಯಧನದ ಸ್ಥಗಿತದ ಪ್ರಸ್ತಾಪವಿದೆ.
2018-22ರವರೆಗೆ ನೂತನ ಕರಡಿನ ನಿಯಮ ಅನ್ವಯವಾಗಲಿದ್ದು, ಯಾತ್ರಿಕರ ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ. ಇದು ಉತ್ತಮ ನೀತಿಯಾಗಿದ್ದು, ಜನಸ್ನೇಹಿಯಾಗಿದೆ ಎಂದು ಅಲ್ಪ ಸಂಖ್ಯಾತರ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಆದಾಗ್ಯೂ ಯಾತ್ರೆಗೆ ಇದ್ದ 21 ವಿಮಾನಗಳ ಸಂಖ್ಯೆಯನ್ನು ಒಂಬತ್ತಕ್ಕೆ ಇಳಿಸಲಾಗಿದೆ. ಸುಪ್ರೀಂ ಕೋರ್ಟ್ 2022ರ ಒಳಗೆ ಹಜ್ ಯಾತ್ರಿಕರ ಸಹಾಯ ಧನ ರದ್ದು ಮಾಡಬೇಕು ಎಂದು ಸೂಚಿಸಿತ್ತು.
Leave A Reply