ಕಣ್ಣೂರಿನಲ್ಲಿ ಬಾಂಬ್ ಸದ್ದು, ಜನರಕ್ಷಾ ಯಾತ್ರೆಗೆ ಬ್ರೇಕ್ ಹಾಕುವ ಪ್ಲಾನ್ !
ತಿರುವನಂತಪುರ : ಕಮ್ಯೂನಿಸ್ಟರು ಸ್ವಭಾವತಃ ರಾಜಕೀಯವಾಗಿ ಹಿಂಸಾಚಾರಿಗಳು ಎಂದು ದೆಹಲಿಂಯ ಪ್ರತಿಭಟನೆಯಲ್ಲಿ ಭಾನುವಾರ ಬೆಳಗ್ಗೆ ಬಿಜೆಪಿ ರಾಷ್ಟ್ರೀ ಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದೆ ತಡ ತಡರಾತ್ರಿ ಕೇರಳದಲ್ಲಿ ಬಾಂಬ್ ಸಿಡಿದಿದೆ. ಕಣ್ಣೂರು ಜಿಲ್ಲೆಯಲ್ಲಿ ಸಿಡಿದಿರುವ ದೇಸೀ ಬಾಂಬ್‍ಗೆ 5 ಸಿಪಿಎಂ ಕಾರ್ಯಕರ್ತರು ಮತ್ತು 4 ಪೊಲೀಸರು ಗಾಯಗೊಂಡಿದ್ದಾರೆ. ಸಿಎಂ ಪಿಣರಾಯಿ ವಿಜಯನ್ ತವರು ಕಣ್ಣೂರಿನಲ್ಲಿಯೇ ಅಧಿಕ ಆರ್‍ಎಸ್‍ಎಸ್ ಕಾರ್ಯಕರ್ತರ ಹತ್ಯೆ ನಡೆದಿದೆ ಎಂದು ಷಾ ಆರೋಪಿಸಿದ ಬೆನ್ನಲ್ಲೇ ಹಿಂಸಾಚಾರಕ್ಕೆ ತಾನೇ ತವರು ಎಂದು ಘೋಷಿಸಿದಂತೆ ಕಣ್ಣೂರಿನಲ್ಲಿ ಬಾಂಬ್ ಸದ್ದು ಕೇಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವ್ಯವಸ್ಥಿತ ಸಂಚು: ಕೇರಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆಯ ವಿರುದ್ಧ ಬಿಜೆಪಿ ಜನರಕ್ಷಾ ಯಾತ್ರೆ ಹಮ್ಮಿಕೊಂಡಿದೆ. ಈಗಾಗಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ಅನೇಕ ಕೇಂದ್ರ ಸಚಿವರು ಬಂದು ರ್ಯಾಲಿ ನಡೆಸಿದ್ದಾರೆ. ಕಮಲ ಪಾಳಯದ ಪ್ರಭಾವದಿಂದ ಆರ್‍ಎಸ್‍ಎಸ್ ಚಿಗುರೊಡೆಯುತ್ತಿರುವುದನ್ನು ಸಹಿಸದೆ ಸಿಪಿಐ(ಎಂ) ಬಾಂಬ್ ಸ್ಫೋಟದ ಎಚ್ಚರಿಕೆ ನೀಡಿದೆ ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ.
ಮತ್ತೊಂದೆಡೆ ಲಘು ಬಾಂಬ್ ಸ್ಫೋಟಿಸಿ ತಮ್ಮದೇ ಸಿಪಿಐ ಕಾರ್ಯಕರ್ತರು ಗಾಯಗೊಳ್ಳುವಂತೆ ನೋಡಿಕೊಂಡು ನಂತರ ರ್ಯಾಲಿ ನಡೆಸುತ್ತಿರುವ ಬಿಜೆಪಿ ತಲೆಗೆ ಕಟ್ಟುವ ಹುನ್ನಾರವಿದು ಎಂದು ರಾಜಕೀಯ ಮುಖಂಡರು ವಿಶ್ಲೇಷಿಸುತ್ತಿದ್ದಾರೆ.
ಒಟ್ಟಿನಲ್ಲಿ 15ದಿನಗಳ ಜನರಕ್ಷಾ ಯಾತ್ರೆಗೆ ಬ್ರೇಕ್ ಹಾಕಲು ಬೇಕಾದ್ದ ಎಲ್ಲ ಹಿಂಸಾತ್ಮಕ ತಂತ್ರಗಾರಿಕೆಯನ್ನು ರಾಜ್ಯ ಸರ್ಕಾರ ಮಾಡಿಯೇ ತೀರುತ್ತದೆ ಎಂದು ಬಾಂಬ್ ಸ್ಫೋಟದಿಂದ ಸ್ಪಷ್ಟವಾಗಿದೆ, ಬಿಜೆಪಿಗೆ ಇದೇ ಸಂದೇಶ ರವಾನೆಯಾಗಿದೆ. ಕಾಂಗ್ರೆಸ್ ಮತ್ತು ಕೇರಳದ ಜನತೆ ಮಾತ್ರ ಮೂಕಪ್ರೇಕ್ಷಕರಾಗಿ ಎಡ-ಬಲಗಳ ಕದನ ವೀಕ್ಷಿಸುವ ಅನಿವಾರ್ಯತೆಯಲ್ಲಿ ಮುಳುಗಿದ್ದಾರೆ.
Leave A Reply