• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್

Tulunadu News Posted On September 22, 2018
0


0
Shares
  • Share On Facebook
  • Tweet It

ಮಂಗಳೂರಿನ ಶಾಲಾ ಮಕ್ಕಳಿಗೆ ಕೊಡುವ ದಸರಾ ರಜೆಯನ್ನು ಯಾವುದೇ ಕಾರಣಕ್ಕೂ ಕಡಿಮೆಗೊಳಿಸಬಾರದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಮಂಗಳೂರಿನಲ್ಲಿ ದಸರಾ ಹಬ್ಬಕ್ಕೆ ತನ್ನದೇ ಆದ ವೈಶಿಷ್ಯವಿದೆ.ಮೈಸೂರು ದಸರಾದಂತೆ ಮಂಗಳೂರು ದಸರಾ ಕೂಡ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಮಂಗಳೂರಿನಲ್ಲಿರುವ ಪುರಾತನ ದೇವಿ ದೇವಾಲಯಗಳಾದ ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ,ಮಂಗಳಾದೇವಿ ಸನ್ನಿದ್ಧಿಗೆ ಭಕ್ತಸಾಗರ ಹರಿದು ಬರುತ್ತದೆ. ಹೀಗಿರುವಾಗ ಆ ಸಮಯದಲ್ಲಿ ಮಕ್ಕಳಿಗೆ ರಜೆ ನೀಡುವುದು ಹಿಂದಿನ ಕಾಲದಿಂದ ನಡೆಸಿಕೊಂಡು ಬಂದ ಪ್ರತೀತಿಯಾಗಿದೆ. ಮಳೆಗಾಲದಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಜಿಲ್ಲಾಧಿಕಾರಿಗಳು ತುರ್ತು ಶಾಲೆ,ಕಾಲೇಜುಗಳಿಗೆ ರಜೆ ಘೋಷಿಸಿದ ಕಾರಣಕ್ಕಾಗಿ ಅದನ್ನು ಸರಿದೂಗಿಸಲು ದಸರಾ ರಜೆ ಕಡಿಮೆ ಮಾಡಲು ಶಿಕ್ಷಣ ಇಲಾಖೆಯು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿದೆ.

ಅಕ್ಟೋಬರ್ 7 ರಿಂದ 21 ರವರೆಗೆ ನೀಡಲಾಗುವ ರಜೆಯನ್ನು ಅಕ್ಟೋಬರ್ 14 ರಿಂದ 21 ರ ತನಕ ಸೀಮಿತಗೊಳಿಸಲಾಗಿದೆ. ಇದು ಸರಿಯಲ್ಲ. ಮಕ್ಕಳಿಗೆ ನವರಾತ್ರಿಯ ಸಮಯದಲ್ಲಿ ನೀಡಲಾಗುವ ರಜೆಯನ್ನು ಯಾವ ಕಾರಣಕ್ಕೂ ಕಡಿಮೆ ಮಾಡಬಾರದು,ಪಕೃತಿ ವಿಕೋಪದ ಸಂಧರ್ಭದಲ್ಲಿ ನೀಡಿರುವ ರಜೆಯನ್ನು ಶನಿವಾದ ದಿವಸ ಹೆಚ್ಚುವರಿ ತರಗತಿಗಳನ್ನು ನಡೆಸಿ ಸರಿದೂಗಿಸಬಹುದು ಎಂದು ಶಾಸಕರು ಮನವಿ ಮಾಡಿದ್ದಾರೆ.

ಕ್ರಿಸ್ಮಸ್ ಹಬ್ಬದ ರಜೆ ನೀಡುವ ವಿಚಾರದಲ್ಲಿ ಆಯಾಯ ಶಾಲಾ ಕಾಲೇಜುಗಳ ವಿವೇಚನೆಗೆ ಬಿಟ್ಟ ನಿರ್ಣಯ ಎಂದಿರುವ ಸರಕಾರ, ದಸರಾ ರಜೆಯನ್ನು ನೀಡುವ ವಿಚಾರವನ್ನು ಕೂಡ ಆಯಾಯ ಶಾಲಾ ಕಾಲೇಜುಗಳ ವಿವೇಚನೆಗೆ ಬಿಡಬೇಕಿತ್ತು.ಆದರೆ ದಸರಾ ರಜೆ ಕಡಿಮೆ ಮಾಡುವ ಸುತ್ತೋಲೆಯನ್ನು ಸ್ವತಃ ರಾಜ್ಯ ಸರಕಾರವೇ ಹೊರಡಿಸಿರುವುದು ರಾಜ್ಯ ಸರಕಾರದ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಶಾಸಕ ಕಾಮತ್ ಅವರು ಹೇಳಿದ್ದಾರೆ‌.

0
Shares
  • Share On Facebook
  • Tweet It


bjpchristmasdasaraholidayleave dasaravedavays kamath


Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
ಮೊಯಿಲಿ ಪುತ್ರವಾತ್ಸಲ್ಯ ಕಾಂಗ್ರೆಸ್ ಜಾತಕ ಬಯಲಿಗೆ ತಂದು ಸಿದ್ದು ಕ್ಯಾಪೆಸಿಟಿ ತೋರಿಸಿತು!
March 21, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search