• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮರಳಿನೊಂದಿಗೆ ಸ್ನೇಹ, ಬಸ್ಸಿನೊಂದಿಗೆ ಸರಸ ಇಟ್ಟುಕೊಂಡಿದ್ದರೆ ಜಗದೀಶ್ ಇನ್ನೊಂದು ಮಳೆಗಾಲ ಇಲ್ಲಿಯೇ ಕಳೆಯಬಹುದಿತ್ತು!

Hanumantha Kamath Posted On October 13, 2017


  • Share On Facebook
  • Tweet It

ಹಿಮ್ಮೇಳದಲ್ಲಿ ಮರಳು ಮಾಫಿಯಾ, ಪಕ್ಕವಾದ್ಯದಲ್ಲಿ ಬಸ್ ಲಾಬಿ, ಎದುರಿಗೆ ಜನಪ್ರತಿನಿಧಿಗಳ ತಲೆಯಾಡಿಸುವಿಕೆಗೆ ಸರಿಯಾಗಿ ಭಾಗವತಿಗೆ ನಡೆದರೆ ಆ ಅಧಿಕಾರಿ ಎರಡು ವರ್ಷ ಪೂರ್ಣವಾಗಿ ಒಂದೇ ಕಡೆ ಇರುತ್ತಾನೆ. ಅದು ಆಗದ ಪರಿಣಾಮವಾಗಿ ಡಾ| ಜಗದೀಶ್ ಅವರು ಒಂದು ವರ್ಷ, ಎರಡು ತಿಂಗಳಿಗೆನೆ ವರ್ಗಾವಣೆಯಾಗುತ್ತಿದ್ದಾರೆ. ಅವರ ವರ್ಗಾವಣೆಯನ್ನು ಸಂಭ್ರಮಿಸುವುದು ಅಥವಾ ವಿರೋಧಿಸುವುದು ಅವರವರಿಗೆ ಬಿಟ್ಟಿದ್ದು. ಪ್ರಾರಂಭದಲ್ಲಿ ಡಾ|ಜಗದೀಶ್ ಅವರ ಕೆಲಸದ ಶೈಲಿ ಬಗ್ಗೆ ನನಗೂ ಅಸಮಾಧಾನವಿತ್ತು. ಅವರು ನಮ್ಮ ಅಹವಾಲುಗಳನ್ನು ಸರಿಯಾಗಿ ಆಲಿಸಲ್ಲ, ಎಲ್ಲವನ್ನು ಬರೆದುಕೊಡಿ ಎಂದು ಹೇಳಿ ನಮಗೂ ಕಿರಿಕಿರಿಯನ್ನು ಉಂಟು ಮಾಡಿದ್ದರು. ಸಮಸ್ಯೆಗಳನ್ನು ನಾಲ್ಕೈದು ಪುಟ ಬರೆದು ಕೊಡಲು ಅದೇನು ಕಥೆ, ಕಾದಂಬರಿ ಅಲ್ಲ, ಮನವಿ ಪತ್ರದಲ್ಲಿ ಕೇವಲ ಮುಖ್ಯಾಂಶಗಳು ಮಾತ್ರ, ವಿವರಗಳನ್ನು ನಾವು ಹೇಳುತ್ತೇವೆ, ಕೇಳಿ ಎಂದು ನಾನೇ ಅವರಿಗೆ ಕೆಲವು ಸಲ ಹೇಳಬೇಕಾಯಿತು. ನಂತರ ದಕ್ಷಿಣ ಕನ್ನಡಕ್ಕೆ ಸರಿಯಾಗಿ ಅವರು ಬದಲಾದರು. ನಮ್ಮ ಮಾತುಗಳಿಗೆ ಕಿವಿ ಕೊಡಲು ಶುರು ಮಾಡಿದರು. ಅವರ ವರ್ಗಾವಣೆ ಅಚಾನಕ್ ಆಗಿ ಆಗಿದೆ ಎಂದು ನನಗೆ ಅನಿಸುವುದಿಲ್ಲ. ಯಾಕೆಂದರೆ ಮಳೆಗಾಲದ ಮುಂಚೆನೆ ಅವರನ್ನು ಕಳುಹಿಸುವ ಪ್ಲಾನ್ ಆಗಿತ್ತು. ಆದರೆ ಅದಕ್ಕೆ ಸರಿಯಾದ ಮುಹೂರ್ಥ ಕೂಡಿ ಬಂದಿರಲಿಲ್ಲ. ಅಷ್ಟಕ್ಕೂ ಡಾ| ಜಗದೀಶ್ ಅವರ ವರ್ಗಾವಣೆಗೆ ಕಾರಣಗಳು ಮುಖ್ಯವಾಗಿ ಎರಡು:
ಒಂದನೇಯದಾಗಿ ಮರಳು ಮಾಫಿಯಾ. ಇವರು ಬರುವ ಮೊದಲು ಇದ್ದ ಜಿಲ್ಲಾಧಿಕಾರಿ ಎಬಿ ಇಬ್ರಾಹಿಂ ಅವರು ಮರಳು ತೆಗೆಯುವ ಪರ್ಮಿಟ್ ಅನ್ನು ಕಡ್ಲೆಕಾಯಿಯಂತೆ ಹಂಚಿದ್ದರು. ಅದರ ನಂತರ ಅಧಿಕಾರ ವಹಿಸಿಕೊಂಡ ಡಾ| ಜಗದೀಶ್ ಅವರು ಅದರಲ್ಲಿ ಯಾರೆಲ್ಲಾ ಅರ್ಹವಾಗಿ ಮರಳು ಪರ್ಮಿಟ್ ತೆಗೆದುಕೊಳ್ಳಲು ಸಾಧ್ಯವಿಲ್ಲವೋ ಅವರ ಪರ್ಮಿಟ್ ಗಳನ್ನು ನವೀಕರಿಸಿರಲಿಲ್ಲ. ಇದರಿಂದ ಕುಳಿತುಕೊಂಡ ಕಡೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದದ್ದು ನಿಂತು ಹೋಗಿದ್ದ ಕಾರಣ ಅಂತವರೆಲ್ಲರೂ ಕೋಪಿಸಿಕೊಂಡಿದ್ದರು. ತಮ್ಮ ಸರಕಾರ ಇರುವಾಗಲೇ ನಾಲ್ಕು ಕಾಸು ಮಾಡಲು ಈ ಜಿಲ್ಲಾಧಿಕಾರಿ ಬಿಡುವುದಿಲ್ಲ ಎಂದಾದರೆ ಅವನನ್ನು ಸುಮ್ಮನೆ ಬಿಡೋಕೆ ಆಗುತ್ತಾ ಎನ್ನುವ ನಿರ್ಧಾರಕ್ಕೆ ಬಂದಿದ್ದರು.
ಅಷ್ಟಕ್ಕೂ ಮರಳು ಪರ್ಮಿಟ್ ಪಡೆದುಕೊಳ್ಳಲು ಅದಕ್ಕೆ ಹೀಗೆ ಎನ್ನುವ ನಿಯಮಗಳಿವೆ. ಆ ವ್ಯಕ್ತಿಗೆ ಕನಿಷ್ಟ 5 ವರ್ಷ ಮರಳು ತೆಗೆದ ಅನುಭವ ಇರಬೇಕು. ಅಂದರೆ ಹಿಂದೆ ಐದು ಬಾರಿ ಮರಳು ಪರ್ಮಿಟ್ ಸಿಕ್ಕಿರಬೇಕು. ಯಾವುದೇ ರೀತಿಯ ಅಪರಾಧಿಕ ಹಿನ್ನಲೆ ಇರಬಾರದು. ಸ್ವಂತ ಬೋಟು ಮತ್ತು ದಕ್ಕೆ ಇರಬೇಕು. ಆದರೆ ಮರಳು ನಿಯಮಗಳನ್ನು ಮೀರಿ ಹಿಂದಿನ ಜಿಲ್ಲಾಧಿಕಾರಿಯವರು ಪರ್ಮಿಟನ್ನು ಬಸ್ ನ ಮಾಲೀಕರಿಂದ ಹಿಡಿದು ಪತ್ರಕರ್ತರ ತನಕ ಬೇಕಾದವರಿಗೆಲ್ಲ ಹಂಚಿಬಿಟ್ಟಿದ್ದರು. ಆದರೆ ಅದಕ್ಕೆ ಕಡಿವಾಣ ಹಾಕಿದ ಡಾ|ಜಗದೀಶ್ ಎಲ್ಲವನ್ನು ಮೊಟಕುಗೊಳಿಸಿದ್ದರು. ಯಾವುದೇ ಒತ್ತಡಕ್ಕೆ ಮಣಿದಿರಲಿಲ್ಲ. ಆವತ್ತೇ ಅವರ ವರ್ಗಾವಣೆ ಬಹುತೇಕ ಗ್ಯಾರಂಟಿಯಾಗಿತ್ತು.
ಇನ್ನೊಂದು ಡಾ|ಜಗದೀಶ್ ಎದುರು ಹಾಕಿಕೊಂಡದ್ದು ಬಸ್ ಲಾಬಿಯನ್ನು. 1992 ರ ನಂತರ ಹೊಸ ಬಸ್ ಪರ್ಮಿಟ್ ಗಳನ್ನು ಕೊಡಲಾಗುತ್ತಿರಲಿಲ್ಲ. ಆದರೆ ಜಗದೀಶ್ ಅದನ್ನು ಮೊತ್ತಮೊದಲ ಬಾರಿಗೆ ಧೈರ್ಯದಿಂದ ಮುರಿದು ಎಲ್ಲೆಲ್ಲಿ ಜನ ಬಸ್ ಗಳನ್ನು ಕೇಳಿದ್ದರೋ ಅಲ್ಲೆಲ್ಲ ಕೊಡಲು ಯೋಜಿಸಿದ್ದರು. ಅವರು ಒಂದಿಷ್ಟು ದಿನ ಜಾಸ್ತಿ ಇದ್ದರೆ ಮೂಡಬಿದ್ರೆ, ಕಾರ್ಕಳಕ್ಕೂ ಸರಕಾರಿ ಬಸ್ ಗಳು ಓಡಲು ಶುರುವಾಗುತ್ತಿತ್ತು. ಅದರೊಂದಿಗೆ ಮುಡಿಪು, ಸೋಮೇಶ್ವರ, ಉಚ್ಚಿಲ, ಕೊಣಾಜೆ, ಉಳ್ಳಾಲದ ಭಾಗಗಳಿಗೆ ಹೊಸ ಬಸ್ಸುಗಳು ಇನ್ನಷ್ಟು ಓಡಲು ಪ್ರಾರಂಭವಾಗುತ್ತಿತ್ತು. ಇದಕ್ಕೆಲ್ಲಾ ವೇದಿಕೆ ರೆಡಿಯಾಗುತ್ತಿದ್ದಂತೆ ಅವರನ್ನು ಎತ್ತಂಗಡಿ ಮಾಡಲಾಗಿದೆ. ಮರಳು ಮತ್ತು ಬಸ್ಸಿನೊಂದಿಗೆ ಅವರು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರೆ ಅವರು ಇನ್ನೊಂದು ಮಳೆಗಾಲವನ್ನು ಆರಾಮವಾಗಿ ಮಂಗಳೂರಿನಲ್ಲಿಯೇ ಕಳೆಯಬಹುದಿತ್ತು. ಆದರೆ ಕೆಸರಿನೊಂದಿಗೆ ಸರಸವಾಡುವುದಕ್ಕಿಂತ ಎದ್ದು ಹೋಗುವುದು ಲೇಸು ಎಂದು ಅವರು ಅಂದುಕೊಂಡ ಕಾರಣ ಡಾ|ಜಗದೀಶ್ ಬೆಂಗಳೂರಿನ ಗಾಡಿ ಹತ್ತಿ ತೆರಳಿದ್ದಾರೆ!

  • Share On Facebook
  • Tweet It


- Advertisement -
DKDR.Jagadish. DC


Trending Now
ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
Hanumantha Kamath May 30, 2023
ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
Hanumantha Kamath May 29, 2023
Leave A Reply

  • Recent Posts

    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
    • ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
  • Popular Posts

    • 1
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 2
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 3
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 4
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search