• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ರೋಹಿಂಗ್ಯಾ ಮುಸಲ್ಮಾನರನ್ನು ದೇಶದಲ್ಲಿ ಇಟ್ಟುಕೊಂಡು ಬೇಕಾದರೆ ಕಾಶ್ಮೀರಿ ಪಂಡಿತರನ್ನು ಓಡಿಸೋಣ!

Hanumantha Kamath Posted On October 14, 2017
0


0
Shares
  • Share On Facebook
  • Tweet It

ಅತಿಥಿ ದೇವೋಭವ ಎನ್ನುವುದು ಸರಿ, ಭಾರತದಲ್ಲಿ ಮನೆಗೆ ಬಂದ ಅತಿಥಿಗಳನ್ನು ದೇವರ ಹಾಗೆ ಕಾಣಬೇಕು ಎನ್ನುವ ಸಂಸ್ಕೃತಿ ಇದೆ. ಹಾಗಂತ ಮನೆಯ ಹೊಸ್ತಿಲ ಒಳಗೆ ಕಾಲಿಟ್ಟವರು ದೇವರ ಮನಸ್ಸಿನವರೋ ಅಥವಾ ದೆವ್ವದ ಗುಣದವರೋ ಎಂದು ನೋಡುವ ಅವಶ್ಯಕತೆ ಇದೆ. ಅದು ಬಿಟ್ಟು ಒಳಗೆ ಬಂದವರು ಸಿಕ್ಕಾಪಟ್ಟೆ ಜಾತ್ಯಾತೀತರು ಎನ್ನುವ ಕಾರಣಕ್ಕೆ ಅವರನ್ನು ಪೂಜಿಸಬೇಕು ಎಂದು ಹೊರಟರೆ ಅವರು ಈಗಲ್ಲದಿದ್ದರೂ ಎರಡು ತಿಂಗಳ ನಂತರ ದೀಪಾವಳಿಯನ್ನು ಭಾರತದ ಹೃದಯ ಭಾಗಗಳಲ್ಲಿ ಬಾಂಬ್ ಸಿಡಿಸುವ ಮೂಲಕ ಆಚರಿಸಿದರೆ ಆಗ ಏನು ಮಾಡುವುದು?

https://tulunadunews.com/wp-content/uploads/2017/10/vid-20171014-wa0000.mp4

ಭಾರತದ ಗಡಿಯೊಳಗೆ ಈಗ ಸುಮಾರು 40 ಸಾವಿರ ರೋಹಿಂಗ್ಯಾ ಮುಸಲ್ಮಾನರಿದ್ದಾರೆ. ಅವರು ಹಿಂದಿನ ಬರ್ಮಾ ಅಥವಾ ಈಗಿನ ಮಯನ್ ಮಾರ್ ಪ್ರದೇಶದಿಂದ ಓಡಿ ಬಂದು ನಮ್ಮ ದೇಶದೊಳಗೆ ಆಶ್ರಯ ಪಡೆದುಕೊಂಡವರು. ಅಷ್ಟಕ್ಕೂ ನಮ್ಮ ಗಡಿಭಾಗದ ಜಿಲ್ಲೆಗಳೇನೂ ಸಾರ್ವಜನಿಕ ಶೌಚಾಲಯಗಳಲ್ಲ. ಯಾರು ಬೇಕಾದರೂ ಯಾವಾಗ ಬೇಕಾದರೂ ಶೌಚ ಮಾಡಿ ಹೋಗೋಣ ಎಂದು ಅಂದುಕೊಳ್ಳಲು ಸಾಧ್ಯವಿಲ್ಲ. ಇನ್ನು ಕೇಂದ್ರ ಸರಕಾರದ ಗುಪ್ತಚರ ವರದಿಯ ಪ್ರಕಾರ ಈಗ ಬಂದ ಅತಿಥಿಗಳು ಭಯೋತ್ಪಾದಕ ಸಂಘಟನೆಯ ನೇತಾರ ಅಸಿಫ್ ಸೈಯದ್ ಜೊತೆ ಸ್ನೇಹದಲ್ಲಿ ಇದ್ದಾರೆ. ಒಂದೊಮ್ಮೆ ಆ ಭಯೋತ್ಪಾದಕ ಸಂಘಟನೆಯಿಂದ ಸೂಕ್ತ ಪಟಾಕಿಗಳ ಪೂರೈಕೆಯಾದರೆ ವರ್ಷಾಂತ್ಯದಲ್ಲಿ ದೆಹಲಿಯಿಂದ ಹಿಡಿದು ಚೆನೈ ತನಕ ಎಲ್ಲಿ ಬೇಕಾದರೂ ಅಲ್ಲಿ ಬಾಂಬ್ ಸ್ಫೋಟ ಆಗಬಹುದು. ಕೆಲವು ಮುಸಲ್ಮಾನ ಸಂಘಟನೆಗಳು, ಮುಸಲ್ಮಾನ ಮುಖಂಡ, ಸಂಸದ ಒವೈಸಿಯಂತವರು ರೋಹಿಂಗ್ಯಾ ಮುಸಲ್ಮಾನರನ್ನು ನಮ್ಮ ದೇಶದಲ್ಲಿಯೇ ಉಳಿಸಬೇಕು, ಅವರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ರೋಹಿಂಗ್ಯಾ ಮುಸಲ್ಮಾನರು ತಮ್ಮ ದೂರದ ಕಸಿನ್ ಗಳೋ ಎನ್ನುವಂತೆ ಕಾಂಗ್ರೆಸ್ ಮುಖಂಡರಾದ ಚಿದಂಬರಂ, ಶಶಿ ತರೂರ್, ಆಮ್ ಆದ್ಮಿ ಮಾಜಿ ಪ್ರಮುಖರಾದ ಯೋಗೇಂದ್ರ ಯಾದವ್, ಶಶಿಭೂಷಣ್ ನಂತಹ ಸುಮಾರು 40 ಜನರು ಮನವಿ ಪತ್ರಕ್ಕೆ ಸಹಿ ಹಾಕಿ ರಾಷ್ಟ್ರಪತಿಯವರಿಗೆ ಕೊಟ್ಟು ಬಂದಿದ್ದಾರೆ. ಅವರ ಪರವಾಗಿ ಇಂತವರು ನ್ಯಾಯಾಲಯದಲ್ಲಿ ವಾದಿಸುತ್ತಾರೆ. ಇವರುಗಳ ವಾದವನ್ನು ಆಲಿಸಿರುವ ನ್ಯಾಯಾಲಯ ನವೆಂಬರ್ 21 ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಈಗ ನನ್ನ ಪ್ರಶ್ನೆ ಏನೆಂದರೆ ನವೆಂಬರ್ 21 ಕ್ಕೆ ಇನ್ನೂ ಐದು ವಾರಗಳಿವೆ. ಈ ರೋಹಿಂಗ್ಯಾ ಮುಸಲ್ಮಾನರನ್ನು ದೇಶದೊಳಗೆ ಇಟ್ಟುಕೊಳ್ಳುವುದೆಂದರೆ ಸೆರಗಿನಲ್ಲಿ ಕೆಂಡವನ್ನು ಇಟ್ಟುಕೊಂಡು ಹಾಯಾಗಿರುವುದು. ಇನ್ನೊಂದು ಅರ್ಧ ಗಂಟೆ ಇಟ್ಟುಕೊಳ್ಳೋಣ, ಏನೂ ಆಗುವುದಿಲ್ಲ ಎಂದು ಅಂದುಕೊಂಡಂತೆ. ಯಾವಾಗ ಸೆರಗು ಸುಟ್ಟು ಹೋಗಿ ನಾವು ಮೇಲೆ ನೋಡೋಣ ಪರಿಸ್ಥಿತಿ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಬೇರೆ ಯಾವ ಕೇಸನ್ನಾದರೂ ದಿನಗಟ್ಟಲೆ ದೂಡುವ ನಮ್ಮ ಸುಪ್ರೀಂ ಕೋರ್ಟ್ ಅಥವಾ ಬೇರೆ ನ್ಯಾಯಾಲಯಗಳು ಇಂತಹ ದೇಶಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇರುವ ಕೇಸ್ ಗಳನ್ನು ವಾರದೊಳಗೆ ಇತ್ಯರ್ಥ ಮಾಡಿ ಕೈತೊಳೆದುಕೊಂಡು ಬಿಡಬೇಕು. ಯಾಕೆಂದರೆ ಈಗ ಬಂದಿರುವ ರೋಹಿಂಗ್ಯಾ ಮುಸಲ್ಮಾನರಿಗೆ ನಾವೆಷ್ಟು ಅನ್ನಾಹಾರ, ನೀರು, ವಸತಿ ಕೊಟ್ಟರೂ ಅವರಿಗೆ ನಮ್ಮ ದೇಶದ ಮೇಲೆ ಪ್ರೀತಿ ಬರುವುದಿಲ್ಲ. ಅಂತವರ ಮೇಲೆ ನಮ್ಮ ನ್ಯಾಯಾಲಯಗಳು ಯಾಕೆ ಪ್ರೀತಿ ತೋರಿಸಬೇಕು. ಪ್ರೀತಿ ತೋರಿಸಲೇಬೇಕಾದ ವಿಷಯಗಳ ಮೇಲೆ ನಮ್ಮ ನ್ಯಾಯಾಲಯಗಳು ಪ್ರೀತಿ ತೋರಿದ್ದು ಕಡಿಮೆ. ಉದಾಹರಣೆಗೆ ಕಾಶ್ಮೀರಿ ಪಂಡಿತರ ಪ್ರಕರಣ.
ಕಾಶ್ಮೀರಿ ಪಂಡಿತರು ಇದೇ ದೇಶದಲ್ಲಿ ಹುಟ್ಟಿ, ಇಲ್ಲಿಯೇ ಬೆಳೆದು, ಇಲ್ಲಿಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡವರು. ಅವರು ಕಾಶ್ಮೀರದ ಮೂಲನಿವಾಸಿಗಳು. ಅವರನ್ನು ಅಲ್ಲಿ ವಲಸೆ ಬಂದ ಪಾಕ್ ಆಕ್ರಮಿತ ಕಾಶ್ಮೀರದ ಪಕ್ಕಾ ಜಾತ್ಯಾತೀತರು ಕಾಶ್ಮೀರದಿಂದ ಓಡಿಸಿದರು. ಈಗ ಕಾಶ್ಮೀರಿ ಪಂಡಿತರು ದೆಹಲಿ, ನೋಯ್ಡಾ ಸಹಿತ ಉತ್ತರ ಭಾರತದ ಅಲ್ಲಲ್ಲಿ ಡೇರೆ ಕಟ್ಟಿ ವಲಸಿಗರಂತೆ ಬೀದಿಬದಿಯಲ್ಲಿ ಟೆಂಟ್ ಹೂಡಿ ಜೀವನ ಸಾಗಿಸುತ್ತಿದ್ದಾರೆ. ಅವರನ್ನು ಮತ್ತೆ ತಮ್ಮ ಮೂಲ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲು ನ್ಯಾಯಾಲಯ ಆದೇಶ ಕೊಡಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯ ಏನು ಮಾಡುತ್ತಿವೆ. ನೈಜ ದೌರ್ಜನ್ಯಕ್ಕೊಳಗಾದ ಸಾವಿರಾರು ಕಾಶ್ಮೀರಿ ಪಂಡಿತರಿಗೆ ದಶಕಗಳಿಂದ ಸರಿಯಾದ ನೆಲೆ ಇಲ್ಲ. ಅವರನ್ನು ಕೇಳುವವರು ಇಲ್ಲ. ಅದೇ ಬೇರೆ ದೇಶದ ವಲಸಿಗರಿಗೆ ನಮ್ಮ ದೇಶದಲ್ಲಿ ಆಶ್ರಯ ಕೊಡಬೇಕು ಎಂದು ವಾದಿಸುವವರು ಗಲ್ಲಿಗೊಂದರಂತೆ ಹೈದರಾಬಾದ್, ದೆಹಲಿ, ಕೋಲ್ಕತ್ತಾಗಳಲ್ಲಿ ಸಿಗುತ್ತಾರೆ. ರೋಹಿಂಗ್ಯಾ ಮುಸಲ್ಮಾನರ ವಿಷಯ ಬಂದಾಗ ನಮ್ಮಲ್ಲಿ ಕೆಲವರಿಗೆ ಮಾನವಹಕ್ಕು ನೆನಪಾಗುತ್ತದೆ. ಕಾಶ್ಮೀರದ ಪಂಡಿತರದ ವಿಷಯದಲ್ಲಿ ಮಾನವ ಹಕ್ಕು ಕೂಡ ಇಲ್ಲ, ಮಾವನ ಹಕ್ಕು ಕೂಡ ಇಲ್ಲ. ಕಾಶ್ಮೀರದಲ್ಲಿದ್ದ ಮೂಲ ನಿವಾಸಿಗಳನ್ನು ಓಡಿಸಿದ ಅಲ್ಲಿನ ಭಯೋತ್ಪಾದಕ ಸಂಘಟನೆಗಳಿಗೆ ಏನೂ ಆಗುವುದಿಲ್ಲ. ರೋಹಿಂಗ್ಯಾ ಮುಸಲ್ಮಾನರನ್ನು ಹೊರಗೆ ಕಳುಹಿಸುವುದಿಲ್ಲ. ಇನ್ನು ನಮ್ಮ ದೇಶದ ಎಷ್ಟು ನಾಗರಿಕರು, ಯೋಧರು ಸುಮ್ಮಸುಮ್ಮನೆ ಹುತಾತ್ಮರಾಗಲು ಇದೆಯೋ, ಓವೈಸಿಗೆ ಗೊತ್ತು!

Vedio Courtesy: Sudharshan Channel

0
Shares
  • Share On Facebook
  • Tweet It


Rohingya MuslimSudharshan channel vedio


Trending Now
ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
Hanumantha Kamath July 8, 2025
ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
Hanumantha Kamath July 8, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
  • Popular Posts

    • 1
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 2
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • 3
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 4
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 5
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!

  • Privacy Policy
  • Contact
© Tulunadu Infomedia.

Press enter/return to begin your search