ಸೋತ ಹತಾಶೆಗೆ ತೆಗೆಯಲು ಮುಂದಾದರು ಆರ್‍ಎಸ್‍ಎಸ್ ಕಾರ್ಯಕರ್ತನ ಜೀವ!
Posted On October 16, 2017
0

ತಿರುವನಂತಪುರಂ : ವೆಂಗಾರ ವಿಧಾನಸಭೆ ಉಪಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯಿಂದ ಸಿಪಿಐ(ಎಂ) ಸೋಲು ಕಂಡಿದ್ದೇ ತಡ ಇತ್ತ ಕಣ್ಣೂರಿನಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನಿಗೆ ಸಾಯುವಂತೆ ಥಳಿಸಲಾಗಿದೆ. ಸಿಎಂ ವಿಜಯನ್ ತವರು ಕ್ಷೇತ್ರ ಕಣ್ಣೂರು ಜಿಲ್ಲೆಯ ಥಲಾಸ್ಸೆರಿ ಬಳಿಯ ಮುಳುಪ್ಪಿಲಾಂಗದ್ ಗ್ರಾಮದಲ್ಲಿ ನಿದೇಶ್ ಎಂಬ 28 ವರ್ಷದ ಯುವಕನಿಗೆ ಶಂಕಿತ ಕಮ್ಯೂನಿಸ್ಟ್ ಕಾರ್ಯಕರ್ತರು ಮನಬಂದಂತೆ ಥಳಿಸಿದ್ದಾರೆ. ಆತನನ್ನು ಹೆಚ್ಚಿನ ಚಿಕಿತ್ಸೆಗೆ ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸಂಜೆ 5.30ಕ್ಕೆ ದಾಳಿ ನಡೆದಿದ್ದು, ಬೈಕ್‍ನಲ್ಲಿ ಬಂದ ಹಲ್ಲೆಕೋರರು ಬೀಚ್ ಮಾರ್ಗದ ರಸ್ತೆಯಲ್ಲಿ ನಿದೇಶ್ ಮೇಲೆ ಹಲ್ಲೆ ನಡಿಸಿದ್ದಾರೆ. 2000ನೇ ಇಸವಿಯಿಂದ ಇದುವರೆಗೂ ರಾಜಕೀಯ ಷಡ್ಯಂತ್ರಗಳಿಂದಾಗಿ 44 ಬಿಜೆಪಿ ಕಾರ್ಯಕರ್ತರನ್ನು ಹತ್ಯೆಮಾಡಲಾಗಿದೆ.

15 ದಿನಗಳ ಜನರಕ್ಷಾ ಯಾತ್ರೆ ನಡೆಸುತ್ತಿರುವ ಬಿಜೆಪಿಯನ್ನು ಮಟ್ಟಹಾಕಲು ಎಲ್ಲ ಪ್ರಯತ್ನಗಳನ್ನು ಸಿಪಿಐ(ಎಂ) ನಡೆಸುತ್ತಿದೆ, ಈ ಹಲ್ಲೆ ಅದರದ್ದೇ ಭಾಗವಾಗಿದೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇತ್ತೀಚೆಗೆ ಸಿಪಿಐ(ಎಂ) ರ್ಯಾಲಿಯಲ್ಲಿ ಅವರದ್ದೇ ಕಾರ್ಯಕರ್ತರು ಲಘು ತೀವ್ರತೆ ಬಾಂಬ್ ಸ್ಫೋಟಿಸಿ ಬಿಜೆಪಿ-ಆರ್‍ಎಸ್‍ಎಸ್ ಮೇಲೆ ಆರೋಪ ಎಳೆದಿದ್ದರು.
Trending Now
ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
October 22, 2025
ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
October 22, 2025