ಜಗತ್ತಿಗೆ ಮಾನವೀಯತೆ ಸಾರಿದ ಶ್ರೀರಾಮನನ್ನು ಕೊಟ್ಟ ಪುಣ್ಯಭೂಮಿ ಅಯೋಧ್ಯೆ: ಯೋಗಿ
Posted On October 18, 2017
>> ಸರಯೂ ನದಿ ತೀರದಲ್ಲಿ 1.71 ಲಕ್ಷ ಮಣ್ಣಿನ ಹಣತೆಗಳನ್ನು ಹಚ್ಚುವ ಮೂಲಕ ಯೋಗಿ ಸರ್ಕಾರದಿಂದ ವಿಶ್ವದಾಖಲೆ
>> ರಾಮನ ದ್ವೇಷಿಗಳು ಅಯೋಧ್ಯೆ ಅಭಿವೃದ್ಧಿಗೆ ಕಲ್ಲುಹಾಕಲು ಬಿಡುವುದಿಲ್ಲ
ಅಯೋಧ್ಯೆ : ಪ್ರಪಂಚಕ್ಕೆ ಬೆಳಕಿನ ಹಬ್ಬ ದೀಪಾವಳಿಯನ್ನು ಕೊಡುಗೆಯಾಗಿ ನೀಡಿದ್ದು ಅಯೋಧ್ಯೆ. ನಮಗೆ ಮಾನವೀಯತೆ ಪಾಠ ಕಲಿಸಿದ್ದೇ ಅಯೋಧ್ಯೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಸರ್ಕಾರ ರಾವಣನಂತಿತ್ತು. ಕೇವಲ ಸ್ವಜನಪಕ್ಷಪಾತದ ರಾಜಕಾರಣ ನಡೆಸಿತು. ಆದರೆ ಬಿಜೆಪಿಯ ಆಡಳಿತ ” ರಾಮರಾಜ್ಯ ” ದಂತೆ. ಯಾರಿಗೂ ತಾರತಮ್ಯ ಮಾಡಿದ ಉದಾಹರಣೆ ಇಲ್ಲ, ಸರ್ವರಿಗೂ ಸಮನಾಗಿ ಕರೆಂಟ್, ರಸ್ತೆ ಮತ್ತು ನೀರು ಎಂದು ಸಿಎಂ ಯೋಗಿ ರೂ.133 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಾ ಗುಡುಗಿದ್ದಾರೆ.
ಕಾಶಿ, ಮಥುರಾ, ಮಿರ್ಜಾಪುರ, ಸಹರಾನ್‍ಪುರ, ನೈಮಿಶಾರಣ್ಯ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಜಾಗತಿಕ ಮಟ್ಟದಲ್ಲಿ ಇತಿಹಾಸ ಪ್ರಚಾರಮಾಡಿ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಮಾಡಲಾಗುವುದು ಎಂದು ಆದಿತ್ಯನಾಥ ವಿವರಿಸಿದ್ದಾರೆ.
ಹೆಲಿಕಾಪ್ಟರ್‍ನಲ್ಲಿ ಸರಯೂ ನದಿ ತೀರದ ದೀಪೋತ್ಸವ ಕಾರ್ಯಕ್ರಮ ಬಂದಿಳಿದ ರಾಮ, ಸೀತಾ, ಲಕ್ಷ್ಮಣ ವೇಷಧಾರಿಗಳು ಗಮನ ಸೆಳೆದರು.
- Advertisement -
adityanathayodhyabjpdeepavalideepotsavdiwaligandhimodinarendrandapradeshrahulramram lallaram mandirsarayushreeramshriramsriramuputtaryogi
Trending Now
ದೇಶದ್ರೋಹಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.
August 30, 2024
Leave A Reply