ಹಿಂದೂಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ, ಎಲ್ಲರೂ ಒಂದಾಗಿ
ಒಂದೆಡೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹಿಂದೂಗಳೇ ಇಬ್ಭಾಗವಾಗಲು ಹೊರಟಿದ್ದಾರೆ. ಇನ್ನೊಂದೆಡೆ ಹಿಂದೂಗಳೇ ಗೋಮಾಂಸ ಸೇವನೆ ಬಗ್ಗೆ ಇಬ್ಬಂದಿತನ ಹೊಂದಿದ್ದಾರೆ. ಆದಾಗ್ಯೂ, ಕೆಲವು ಬುದ್ಧಿಜೀವಿಗಳು, ಕೆ.ಎಸ್.ಭಗವಾನರಂಥವರು ಹಿಂದೂ ದೇವರನ್ನು, ನಂಬಿಕೆಯನ್ನು ಒಡೆಯುವ ಹೇಳಿಕೆ ನೀಡಿ ತಾವು ಧರ್ಮದ ತಾರಸಿಯಡಿ ಹುಟ್ಟಿದವರೇ ಎಂಬುದನ್ನೇ ಮರೆಯುತ್ತಾರೆ. ಟಿಪ್ಪು ದೇಶಭಕ್ತ ಎನ್ನುವ ಸ್ವಾಮೀಜಿಗಳಿದ್ದಾರೆ. ಹಿಂದೂ-ಹಿಂದೂಗಳ ನಡುವೆಯೇ ಕಂದಕ ಹುಟ್ಟಿಸುವ ರಾಜಕಾರಣಿಗಳಿದ್ದಾರೆ. ಹಲವು ಜಾತಿಗಳ ನಡುವೆ ವೈಷಮ್ಯ ಹುಟ್ಟಿದೆ…
ಪರಿಸ್ಥಿತಿ ಹೀಗಿರುವಾಗ…
ಕೇರಳದಲ್ಲಿ ಲವ್ ಜಿಹಾದಿಗೆ ಸಾವಿರಾರು ಹಿಂದೂ ಹಾಗೂ ಕ್ರಿಶ್ಚಿಯನ್ ಮಹಿಳೆಯರು ಬಲಿಯಾಗುತ್ತಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಎನ್ಐಎ ಈಗಾಗಲೇ 90 ಪ್ರಕರಣಗಳ ತನಿಖೆ ನಡೆಸುತ್ತಿದೆ. ಹಿಂದೂ ಮಹಿಳೆಯರನ್ನು ಲೈಂಗಿಕ ಒತ್ತೆಯಾಳಾಗಿಟ್ಟುಕೊಳ್ಳಲು ಹಾಗೂ ಲವ್ ಜಿಹಾದಿಯಂಥ ಕೃತ್ಯದಲ್ಲಿ ತೊಡಗಿಸಲು ಐಸಿಸ್ ಹಾಗೂ ಬಾಕೊ ಹರಾಮ್ ಎಂಬ ಹರಾಮಿ ಸಂಸ್ಥೆಗಳಿಗೆ ಅಂತಾರಾಷ್ಟ್ರೀಯ ಸಂಸ್ಥೆಗಳೇ ಹಣ ನೀಡುತ್ತಿವೆ ಎಂಬ ಸ್ಫೋಟಕ ವರದಿ ಸಹ ಬಿತ್ತರವಾಗಿವೆ. ಹಿಂದೂಗಳ ಹಬ್ಬವಾದ ದಸರೆಗೆ ಪಶ್ಚಿಮ ಬಂಗಾಳದಲ್ಲಿ ಅಡ್ಡಗಾಲು ಹಾಕಲು ಹೊರಟ ಅಲ್ಲಿನ ಸರ್ಕಾರ ಇದೇ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಹರಿಯಾಣದಲ್ಲಿ ಕೆಲವು ಮೂಲಭೂತವಾದಿಗಳು ಹಿಂದೂ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಮಾಡಿದ್ದಲ್ಲದೇ, ಆಕೆಯನ್ನು 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಸುದ್ದಿಯನ್ನು ಯಾವ ಸೆಕ್ಯುಲರ್ ಮೀಡಿಯಾಗಳು ವರದಿ ಮಾಡಲಿಲ್ಲ. ಬುದ್ಧಿಜೀವಿಗಳೂ ಬೊಬ್ಬೆ ಹಾಕಲಿಲ್ಲ.
ಅಷ್ಟೇ ಏಕೆ, ಕೇರಳದಲ್ಲಿ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಮಾರಣ ಹೋಮ ನಡೆಯುತ್ತಿದೆ. ಕರ್ನಾಟಕವೂ ಮತ್ತೊಂದು ಕೇರಳವಾಗುತ್ತಿದೆ. ಗೌರಿ ಲಂಕೇಶರಂಥವರ ಹತ್ಯೆಯಾದಾಗಲೂ ಪೊಲೀಸರು ಹಿಂದೂಗಳೇ ಕೊಲೆ ಮಾಡಿದ್ದಾರೆ ಎಂದು ಬಿಂಬಿಸಲು ರೇಖಾಚಿತ್ರದ ಹಣೆಗೆ ಕುಂಕುಮ ಬಳಿಯುತ್ತಾರೆ.
ಹೇಳಿ ಜಗತ್ತಿನ ಯಾವ ಧರ್ಮದ ಮೇಲೆ ಇಷ್ಟೊಂದು ಅಸಹಿಷ್ಣುತೆ, ಹಿಂಸಾಚಾರ, ಹೊಸಕಿ ಹಾಕುವ ಪ್ರಯತ್ನ ನಡೆಯುತ್ತಿದೆ? ಯಾವ ಧರ್ಮದ ಮೇಲೆ ಇಷ್ಟು ಹಲ್ಲು ಮಸಿಯಲಾಗುತ್ತದೆ? ಯಾವ ದೇಶದಲ್ಲಿ ಬಹುಸಂಖ್ಯಾತರಾಗಿರುವವರ ಶೋಷಣೆ ನಡೆಯುತ್ತಿದೆ?
ಇಷ್ಟಾದರೂ ಬಹುಸಂಖ್ಯಾತ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ, ಇಷ್ಟಾದರೂ ಎಲ್ಲರೂ ಒಗ್ಗೂಡಿ ಹಿಂದುತ್ವದ ಉಳಿವಿಗೆ ಹೋರಾಡದಿದ್ದರೆ ಹಿಂದೂಸ್ಥಾನದಲ್ಲೇ ಹಿಂದೂಗಳಿಗೆ ನೆಲೆಯಿಲ್ಲದಂತಾಗುವುದರಲ್ಲಿ ಎರಡು ಮಾತಿಲ್ಲ. ಇಂಥಾ ಉದಾಹರಣಗಳೇ ಅಂಥ ಪರಿಸ್ಥಿತಿ, ಆತಂಕದ ಭಯ ಹುಟ್ಟಿಸಿವೆ.
ಹಿಂದೂಗಳ ರಕ್ಷಣೆಗೆ ಉದಯಿಸಿದ ಶಿವಾಜಿ, ರಾಜ್ಯದ ಜತೆಗ ಧರ್ಮವನ್ನೂ ರಕ್ಷಿಸಿದ. ಒಬ್ಬ ಹಿಂದೂ ಮತಾಂತರವಾದರೆ ಆತ ಹಿಂದೂ ಧರ್ಮದ ವಿರುದ್ಧ ಒಬ್ಬ ಶತ್ರು ಉದಯಿಸಿದ ಎಂದ ಸ್ವಾಮಿ ವಿವೇಕಾನಂದರು ಆಗಲೇ ಮತಾಂತರದ ಭೀಕರತೆ ತೆರೆದಿಟ್ಟಿದ್ದರು. ಹಾಗಂತ ನಾವೇನು, ಸ್ವಾಮಿ ವಿವೇಕಾನಂದರು, ಛತ್ರಪತಿ ಶಿವಾಜಿ ಆಗಬೇಕಿಲ್ಲ. ಬದಲಾಗಿ, ಹಿಂದೂ ರಕ್ಷಣೆಗೆ ತುಸು ಮನಸ್ಸು ಮಾಡಬೇಕು. ಒಗ್ಗೂಡಿ ಮುನ್ನುಗ್ಗಬೇಕು. ಮೂಲಭೂತವಾದಿಗಳ ಕಪಿಮುಷ್ಟಿಗೆ ಸಿಲುಕದೆ ಎಚ್ಚರಿಕೆಯಿಂದ ಅಡಿಯಿಡಬೇಕು.
ಮೇಲಾಗಿ ನಾವೆಲ್ಲ ಹಿಂದೂ, ನಾವೆಲ್ಲರೂ ಒಂದು ಎಂಬ ಮನೋಭಾವನೆ ಮೂಡಬೇಕು. ಇಲ್ಲದಿದ್ದರೆ, ನಮ್ಮ-ನಿಮ್ಮ ಮನೆಗೂ ಜಿಹಾದ್ ಕಾಲಿಡಬಹುದು. ಎಚ್ಚರ.
Leave A Reply