ಕೇಂದ್ರದ ದಿಟ್ಟ ನಡೆ, ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡುವರೇ ದಿನೇಶ್ವರ್?
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ಗುಂಡಿನ ಮೂಲಕವೇ ದಿಟ್ಟ ಉತ್ತರ ನೀಡಿದ್ದ ಕೇಂದ್ರ ಸರ್ಕಾರ ಈಗ ಪ್ರತ್ಯೇಕತವಾದಿಗಳ ಮನವೊಲಿಕೆ ಮೂಲಕ ಶಾಂತಿ ಸ್ಥಾಪಿಸಲು ಚಾಣಾಕ್ಷ ನಡೆ ಇಟ್ಟಿದ್ದು, ಶಾಂತಿ ಸ್ಥಾಪನೆಗೆ ಮುಂದಾಗುವವರ ಜತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ “ಸಂಧಾನಕಾರ”ರೊಬ್ಬರನ್ನು ನೇಮಿಸಿದೆ.
ಗುಪ್ತಚರ ಇಲಾಖೆ ಮಾಜಿ ನಿರ್ದೇಶಕ ದಿನೇಶ್ವರ್ ಶರ್ಮಾ ಅವರು ಜಮ್ಮುಕಾಶ್ಮೀರದ ಸಂಧಾನಕಾರರಾಗಿ ನೇಮಕವಾಗಿದ್ದು, ಪ್ರತ್ಯೇಕತವಾದಿಗಳು ಸೇರಿ ಯಾರೇ ಮಾತುಕತೆ ಬಂದರೂ ಅವರ ಜತೆ ಸಂಧಾನ ನಡೆಸುವ ಅಧಿಕಾರವನ್ನು ದಿನೇಶ್ವರ್ ಹೊಂದಿದ್ದಾರೆ.
ಕೆಲ ತಿಂಗಳುಗಳ ಹಿಂದೆಯೇ ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಾವು ಯಾರೊಂದಿಗೂ ಮಾತುಕತೆ ನಡೆಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಇಂಗಿತ ವ್ಯಕ್ತಪಡಿಸಿರುವ ಬೆನ್ನಲ್ಲೇ ಈಗ ಸಂಧಾನಕಾರರನ್ನು ನೇಮಿಸಿದ್ದು ಉತ್ತಮ ನಡೆ ಎಂದೇ ಹೇಳಲಾಗುತ್ತಿದೆ.
ಕಳೆದ ತಿಂಗಳು ಕಾಶ್ಮೀರಕ್ಕೆ ಭೇಟಿ ನೀಡಿದ್ದ ರಾಜನಾಥ್ ಸಿಂಗ್ ಸುಮಾರು 87 ನಿಯೋಗಗಳೊಂದಿಗೆ ಮಾತುಕತೆ ನಡೆಸಿದ್ದರು. ಆದಾಗ್ಯೂ, ದಿನೇಶ್ವರ್ ಶರ್ಮಾ ಗುಪ್ತಚರ ಇಲಾಖೆಯಲ್ಲೂ ಕೆಲಸ ಮಾಡಿರುವುದರಿಂದ ಪ್ರತ್ಯೇಕತಾವಾದಿಗಳ ಕುತಂತ್ರದ ಮೇಲೂ ಒಂದು ಕಣ್ಣಿಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
Leave A Reply