ಯೋಗಿ ಆದಿತ್ಯನಾಥರ ತಮ್ಮಸೈನಿಕ ಹಾಗೂ ಪ್ರಸ್ತುತ ಚೀನಾ ಗಡಿ ಕಾಯುತ್ತಿರುವ ಸುಬೇದಾರ್!

ಬಿಜೆಪಿಯವರು ಎಂದರೆ ಬಾಯಿಮಾತಿನ ದೇಶಭಕ್ತರು ಎಂದು ಕಾಂಗ್ರೆಸ್ ಸೇರಿ ಹಲವು ವಿರೋಧ ಪಕ್ಷಗಳು ಬಾಯಿಬಡಿದುಕೊಳ್ಳುತ್ತವೆ. ಆದರೆ ಅದೆಷ್ಟು ರಾಜಕಾರಣಿಗಳು ತಮ್ಮ ಮಕ್ಕಳನ್ನು, ಸಂಬಂಧಿಕರು ಸೈನ್ಯಕ್ಕೆ ಸೇರಿಸಿ ನಿಜವಾದ ದೇಶಭಕ್ತರು ಎನಿಸಿದ್ದಾರೆ? ಅದೆಷ್ಟು ಜನ ಕಳುಹಿಸಬಯಸುತ್ತಾರೆ?
ನೀವು ನಂಬಲೇಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಹೋದರ ಸೈನಿಕ ಹಾಗೂ ಪ್ರಸ್ತುತ ಚೀನಾ ಗಡಿಗೆ ನಿಯೋಜಿಸಿರುವ ಸುಬೇದಾರ್!
ಇಂಡಿಯಾ ಟುಡೇ ಚಾನೆಲ್ ಚೀನಾ ಗಡಿಗೆ ತೆರಳಿ ಆದಿತ್ಯನಾಥರ ಸಹೋದರ್ ಸುಬೇಂದ್ರ ಶೈಲೇಂದ್ರ ಮೋಹನ್ ಅವರನ್ನು ಭೇಟಿ ಮಾಡಿ ಸಂದರ್ಶಿಸಿದ್ದು, “ಭದ್ರತಾ ಅಪಾಯದ ದೃಷ್ಟಿಯಿಂದ ಚೀನಾ ಗಡಿಯಲ್ಲಿ ಗಸ್ತು ಕಾಯುತ್ತಿದ್ದೇವೆ. ಇದು ನಮ್ಮ ತಾಯಿನಾಡು, ತಾಯಿನಾಡಿನ ರಕ್ಷಣೆಗಾಗಿ ಯಾವುದೇ ಸಮಸ್ಯೆ ಎದುರಾದರೂ ಹೋರಾಡಲು ಸಿದ್ಧ” ಎಂದಿದ್ದಾರೆ ಸುಬೇದಾರ್.
ಅಣ್ಣ ಯೋಗಿ ಆದಿತ್ಯನಾಥರ ಕುರಿತು ಸಹ ಮಾತನಾಡಿದ್ದು, “ಅಣ್ಣ ಮುಖ್ಯಮಂತ್ರಿಯಾದ ಬಳಿಕ ದೆಹಲಿಯಲ್ಲಿ ಒಮ್ಮೆಯಷ್ಟೇ ಭೇಟಿಯಾಗಿದ್ದೇನೆ. ಅಣ್ಣ ಯಾವಾಗಲೂ ದೇಶದ ಭದ್ರತೆಗಾಗಿ ಹೋರಾಡುತ್ತಿರುವ ಎಂಬ ಒಂದೇ ಸಂದೇಶ ಹಾಗೂ ಸಲಹೆ ತಿಳಿಸಿದ್ದಾರೆ” ಎಂದು ಶೈಲೇಂದ್ರ ಹೇಳಿದ್ದಾರೆ.
ಇನ್ನಾದರೂ ಬಿಜೆಪಿಯವರದ್ದು ಬಾಯಿಮಾತಿನ ದೇಶಭಕ್ತಿ ಎನ್ನುವವವರು ಒಮ್ಮೆ ಯೋಚಿಸಿ ಹಾಗೂ ಯೋಗಿ ಆದಿತ್ಯನಾಥರ ತಮ್ಮನನ್ನು ನೆನಪಿಸಿಕೊಳ್ಳಿ ಮತ್ತು ನೀವು ನಿಮ್ಮ ಮಗನನ್ನು, ತಮ್ಮನನ್ನು ಸೈನ್ಯಕ್ಕೆ ಕಳುಹಿಸುವಿರಾ? ಒರೆಗೆ ಹಚ್ಚಿ.
Leave A Reply