ತಂಗಿಯೊಬ್ಬಳು ನಿಮ್ಮ ಸಹಾಯಕ್ಕೆ ಕಾಯುತ್ತಿದ್ದಾಳೆ!
Posted On October 28, 2017
ಬರೋಬ್ಬರಿ ಹದಿನೆಂಟು ವರ್ಷ. ಆ ಹೆಣ್ಣು ಜೀವಕ್ಕೆ ಮನೆಯೇ ಪ್ರಪಂಚ. ಹೊರಗೆ ಕಾಲಿಡಲಾಗದಂತಹ ಪರಿಸ್ಥಿತಿ. ಅದರಲ್ಲಿಯೂ ಕಳೆದ ಐದಾರು ವರ್ಷಗಳಿಂದ ಮನೆಯ ಚಾಪೆಯೇ ಜೀವನ. ನಿಮ್ಮ ಕರುಣೆಯ ಕಡಲಿನಿಂದ ಒಂದು ಬೊಗಸೆ ಸಹಾಯವನ್ನು ಮಾಡಿದರೂ ಆಕೆಯ ಬಾಳಿನಲ್ಲಿ ನಂದನವನದ ಪರಿಮಳ ಬೀರಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ ಆ ಹೆಣ್ಣುಮಗಳಿಗೆ ನಿಮ್ಮ ಸಹಾಯದ ಅವಶ್ಯಕತೆ ಇದೆ.
ಆಕೆಯ ಹೆಸರು ಅಖಿಲಾ. ಬಟ್ಟಲಿನಂತಹ ಕಣ್ಣುಗಳು. ಆದರೆ ದೇಹದ ಮೇಲೆ ಕಿತ್ತು ಹೋದಂತಿರುವ ಚರ್ಮ. ನಮ್ಮ ನಿಮ್ಮಂತೆ ಆಕೆಯ ಚರ್ಮ ಇಲ್ಲ. ನಾನು ಕಪ್ಪಿದ್ದೇನೆ, ಬಿಳಿಯಾಗಬೇಕು ಎಂದು ದಿನ ಬೆಳಿಗ್ಗೆ ಒದ್ದಾಡುವ ಯುವತಿಯರ ಎದುರು ತನಗೆ ಆರೋಗ್ಯವಂತ ಚರ್ಮ ಕೊಡು ಭಗವಂತ ಎಂದು ಬೇಡುವ ಅನಿವಾರ್ಯತೆ ಅಖಿಲಾಳದ್ದು.
ವೈದ್ಯರು ಯಾವುದೋ ಅರ್ಥವಾಗದ ಹೆಸರು ಕೊಟ್ಟು ಬಿಟ್ಟಿದ್ದಾರೆ. Epidematisis Bullossa ಆಕೆಯ ಕಾಯಿಲೆ ಹೆಸರು ಜನಸಾಮಾನ್ಯರಾದ ನಮಗೆ ಅರ್ಥವೂ ಆಗುವುದಿಲ್ಲ. ಅದೇ ರೀತಿಯಲ್ಲಿ ಆಕೆ ಕಳೆದ ಹದಿನೆಂಟು ವರ್ಷಗಳಿಂದ ಅನುಭವಿಸುವ ಸಂಕಟದ ಅರಿವೂ ಆಗಲು ಸಾಧ್ಯವಿಲ್ಲ. ಇದೊಂದು ರೀತಿಯಲ್ಲಿ ಜೆನೆಟಿಕ್ ಡಿಸ್ ಆರ್ಡರ್. ಅಖಿಲಾ ತಾನು ಹುಟ್ಟಿದ ಒಂದು ತಿಂಗಳಿನಿಂದಲೇ ಈ ಕಾಯಿಲೆಯೊಂದಿಗೆ ಜೀವನ ಸವೆಸುತ್ತಿದ್ದಾಳೆ. ಒಂದು ವಾರ ಯಾವುದಾದರೂ ಕಾಯಿಲೆ ನಮಗೆ ಬಂದು ಮಲಗಿ ಕಳೆದರೆ ನಮ್ಮ ಪರಿಸ್ಥಿತಿ ಹೇಗಿರುತ್ತೆ ಎನ್ನುವುದು ನಮಗೆ ಗೊತ್ತಿದೆ. ಹಾಗಿರುವಾಗ ನಮಗಿಂತ ಸಾವಿರ ಪಟ್ಟು ಹೆಚ್ಚು ಸಂಕಟವನ್ನು ಅನುಭವಿಸುತ್ತಿರುವ ಅಖಿಲಾಳ ಕಷ್ಟ ಭಗವಂತ ಮತ್ತು ಆಕೆಯನ್ನು ಈ ಪ್ರಪಂಚಕ್ಕೆ ತಂದ ಆಕೆಯ ಪೋಷಕರಿಗೆ ಮಾತ್ರ ಗೊತ್ತು.
ಅಖಿಲಾ ತಂದೆ ವೇಲಾಯುಧನ್ ಮತ್ತು ಮಿನಿ ದಂಪತಿಗಳ ಏಕೈಕ ಮಗಳು ಈಕೆ. ವೇಲಾಯುಧನ್ ಸಿದ್ಧಾಪುರ ಸಮೀಪ ಇಂಜಲ್ ಕೆರೆ ಎನ್ನುವ ಊರಿನಲ್ಲಿರುವ ಎಸ್ಟೇಟ್ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಎಸ್ಟೇಟ್ ನಲ್ಲಿ ಮರ ಕಡಿಯುವುದು ಅವರ ಮುಖ್ಯ ಕೆಲಸ. ಸಹಜವಾಗಿ ಕೆಳಮಧ್ಯಮ ವರ್ಗದ ಜೀವನ. ಅಖಿಲಾ ಒಂದು ತಿಂಗಳಿರುವಾಗ ಆಕೆಯ ದೇಹದ ಮೇಲಿನ ಚರ್ಮ ಬೆಂಕಿಗೆ ಸುಟ್ಟಂತೆ ಕಾಣುತ್ತಿತ್ತು. ನೀವು ಬೆಂಕಿಗೆ ತುತ್ತಾದವರನ್ನು ನೋಡಿರಬಹುದು. ಅದೇ ರೀತಿಯಲ್ಲಿ ಅಖಿಲಾ ಚರ್ಮ ಸುಟ್ಟು ಹೋದಂತೆ ಕಂಡಾಗ ವೇಲಾಯುಧನ್ ಮಗುವನ್ನು ಕರೆದುಕೊಂಡು ವೈದ್ಯರ ಬಳಿ ಹೋದರು. ಮಗುವನ್ನು ಜಾಗ್ರತೆಯಾಗಿ ನೋಡಿಕೊಳ್ಳಿ. ಹೊರಗೆ ಕಳುಹಿಸಬೇಡಿ, ಬೇರೆಯವರಿಂದ ಮುಟ್ಟಿಸಬೇಡಿ, ನೀವು ಅವಳನ್ನು ಎಷ್ಟು ಜಾಗ್ರತೆಯಾಗಿ ನೋಡಿಕೊಳ್ಳುತ್ತಿರೋ ಆಕೆ ಅಷ್ಟು ಬೇಗ ಸರಿಯಾಗಬಹುದು ಎಂದು ವೈದ್ಯರು ಹೇಳಿದರು. ಆವತ್ತಿನಿಂದ ಅಖಿಲಾ ತನ್ನ ತಂದೆ, ತಾಯಿಯ ಮುದ್ದಿನ ಕಾವಲಿನಲ್ಲಿ ಬೆಳೆಯುತ್ತಾ ಇದ್ದಾಳೆ.
ತನ್ನ ಮಗಳ ಬದುಕು ಹೀಗೆ ಆಗಿದ್ದರೂ ಆ ತಂದೆ, ತಾಯಿಯ ಮನಸ್ಸನ್ನು ನೋಡಿ. ಬೇರೆ ಇಬ್ಬರು ಅನಾಥ ಮಕ್ಕಳನ್ನು ಸಾಕುತ್ತಿದ್ದಾರೆ. ಆ ಇಬ್ಬರು ಮಕ್ಕಳು ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಖಿಲಾಳಿಗೆ ಟೀಚರ್ ಒಬ್ಬರು ಮನೆಗೆ ಬಂದು ಕಲಿಸಿ ಹೋಗುತ್ತಾರೆ. ಇಲ್ಲಿಯ ತನಕ ಈ ಕುಟುಂಬ ಅನೇಕ ವೈದ್ಯರಲ್ಲಿ ಅಖಿಲಾಳನ್ನು ತೋರಿಸಿ ಮಗಳು ಎಲ್ಲರಂತೆ ಆಗಲಿ ಎಂದು ಆಸೆಯಿಂದ ಕಾಯುತ್ತಿದೆ. ಪ್ರಸ್ತುತ ಗೋಣಿಕೊಪ್ಪದಲ್ಲಿ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈಗ ಅಖಿಲಾಳಿಗೆ ನಿಮ್ಮ ಸಹಾಯದ ಅಗತ್ಯ ಇದೆ. ಆಕೆಯ ತಂದೆಯ ಬ್ಯಾಂಕ್ ಖಾತೆಯ ವಿವರಗಳನ್ನು ಇಲ್ಲಿ ನೀಡಿದ್ದೇವೆ.
ಹೆಸರು: ವೇಲಾಯುಧನ್
ಬ್ಯಾಂಕ್: ಕೆನರಾ ಬ್ಯಾಂಕ್
ಉಳಿತಾಯ ಖಾತೆ ಸಂಖ್ಯೆ: 0687101011399
ಬ್ರಾಂಚ್: ಸಿದ್ಧಾಪುರ
ಐಎಫ್ ಎಸ್ ಸಿ ಕೋಡ್: ಸಿಎನ್ ಆರ್ ಬಿ 0000687
ಅಖಿಲಾಳೊಂದಿಗೆ ನೀವು ಮಾತನಾಡಬಹುದು. ದೂರವಾಣಿ ಸಂಖ್ಯೆ: 944826896
- Advertisement -
Trending Now
ಆವತ್ತು ಮಗಳನ್ನು ಪಕ್ಷಕ್ಕೆ ತೆಗೆದುಕೊಳ್ಳದೇ ಇದ್ದ ಡಿಕೆ ಕಾದಿದ್ದು ತಂದೆಗಾಗಿ!
October 23, 2024
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
Leave A Reply