ಖಾದಿ ಫಾರ್ ನೇಶನ್, ಖಾದಿ ಫಾರ್ ಫ್ಯಾಶನ್: ನರೇಂದ್ರ ಮೋದಿ
ದೇಶದ ಸಂಪ್ರದಾಯದ ಸಂಕೇತವಾದ ಖಾದಿ ಬಳಕೆ ಈಗ ರೂಪಾಂತರವಾಗಿದ್ದು, ಖಾದಿ ಫಾರ್ ನೇಶನ್, ಖಾದಿ ಫಾರ್ ಫ್ಯಾಶನ್ ಎಂಬಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮನ್ ಕೀ ಬಾತ್ ರೇಡಿಯೋ ಸರಣಿಯ 37ನೇ ಕಾರ್ಯಕ್ರಮದಲ್ಲಿ ದೇಶದ ಜನರನ್ನುದ್ದೇಶಿಸಿದ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಖಾದಿ ಬಳಸಿ ಎಂದು ಕರೆ ನೀಡಿದರು.
ಜಮ್ಮು-ಕಾಶ್ಮೀರದ ಗುರೇಜ್ ವಲಯದಲ್ಲಿ ಸೈನಿಕರ ಜತೆ ದೀಪಾವಳಿ ಆಚರಿಸಿದ್ದು ಸಂತಸ ತಂದಿದೆ. ನನಗೆ ಆ ಮಧುರ ಕ್ಷಣಗಳೂ ಎಂದಿಗೂ ಸ್ಮೃತಿಪಟಲದಲ್ಲಿರುವಂಥವು ಎಂದು ಮೋದಿ ಸ್ಮರಿಸಿದರು.
ನಾವೆಲ್ಲರೂ ನಮ್ಮ ಸೈನಿಕರ ಶೌರ್ಯವನ್ನು ಮೆಚ್ಚಬೇಕು. ವಿಶ್ವಸಂಸ್ಥೆಯ ಶಾಂತಿ ಸ್ಥಾಪನೆ ಘಟಕಕ್ಕೆ ನಮ್ಮ ಹೆಮ್ಮೆಯ 18 ಸಾವಿರ ಯೋಧರು ಅಮೋಘ ಕೊಡುಗೆ ನೀಡಿದ್ದಾರೆ. ಅವರ ಸೇವೆ ಸ್ಮರಣೀಯ ಎಂದು ಪ್ರಧಾನಿ ಶ್ಲಾಘಿಸಿದರು.
ಛಾತಾ ಪೂಜೆ ಕುರಿತು ಮಾತನಾಡುವ ಮೂಲಕ ಕಾರ್ಯಕ್ರಮ ಆರಂಭಿಸಿದ ಮೋದಿ, “ಛಾತ್ ಪೂಜೆ ನಿಸರ್ಗವನ್ನು ಆರಾಧಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತದೆ. ಸೂರ್ಯ ಮತ್ತು ಚಂದ್ರ ಪಹಾಪರ್ವ ಛಾತ್ ನ ಕೇಂದ್ರ ಬಿಂದು ಎಂದು ತಿಳಿಸಿದರು.
ಭಾರತ ವಸುದೈವ ಕುಟುಂಬಕಂ ಎಂಬ ತತ್ವದಂತೆ ಕಾರ್ಯನಿರ್ವಹಿಸುತ್ತಿದ್ದು, ಎಂದಿಗೂ ಶಾಂತಿ ಹಾಗೂ ಏಕತೆ ಸಾರುವುದೇ ನಮ್ಮ ನೆಲದ ಗುಣವೈಶಿಷ್ಟ್ಯ ಎಂದು ಹೇಳಿದರು.
Leave A Reply