ಕೇಂದ್ರದಿಂದ ಮತ್ತೊಂದು ದಿಟ್ಟ ನಿರ್ಧಾರ: 431 ಪಾಕಿಸ್ತಾನಿ ವಲಸಿಗ ಹಿಂದೂಗಳಿಗೆ ಭಾರತದ ನಾಗರಿಕತ್ವ
ಮೊನ್ನೆಯಷ್ಟೇ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ 51 ಹಿಂದೂ ಕುಟುಂಬಗಳಿಗೆ ಭಾರತದ ನಾಗರಿಕತ್ವ ನೀಡಿದ್ದ ಕೇಂದ್ರ ಸರ್ಕಾರ ಈಗ ಮತ್ತೊಂದು ದಿಟ್ಟ ನಿರ್ಧಾರ ಕೈಗೊಂಡಿದ್ದು ಪಾಕಿಸ್ತಾನದಿಂದ ವಲಸೆ ಬಂದಿರುವ 431 ಹಿಂದೂಗಳಿಗೆ ಭಾರತದ ನಾಗರಿತ್ವ ನೀಡಿದೆ.
ಇವರಲ್ಲಿ ಪಾಕಿಸ್ತಾನದ ಜತೆಗೆ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ರಾಷ್ಟ್ರಗಳಿಂದ ತೊಂದರೆ ಅನುಭವಿಸಿ ಭಾರತಕ್ಕೆ ಬಂದು ನೆಲೆಸಿದವರಿದ್ದು, ದೀರ್ಘಾವಧಿ ವೀಸಾ, ಪ್ಯಾನ್ ಹಾಗೂ ಆಧಾರ್ ಕಾರ್ಡ್ ನೀಡುವ ಜತೆಗೆ ಭಾರತದಲ್ಲಿ ಆಸ್ತಿ ಖರೀದಿಸುವ ಹಕ್ಕನ್ನೂ ನರೇಂದ್ರ ಮೋದಿ ಸರ್ಕಾರ ನೀಡಿದೆ.
ಇವುಗಳ ಜತೆಗೆ ವಾಹನಾ ಚಾಲನಾ ಪರವಾನಗಿ, ಸ್ವಯಂ ಉದ್ಯೋಗ, ಉದ್ಯಮದಲ್ಲಿ ಪಾಲ್ಗೊಳ್ಳುವ ಹಕ್ಕನ್ನೂ ಸರ್ಕಾರ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬರೀ ಹಿಂದೂಗಳಿಗಷ್ಟೇ ಅಲ್ಲದೆ, ಡಿ.29ರಿಂದ 31ರ ವರೆಗೆ ಪಂಜಾಬಿನ ಖದಾನಾ ಎಂಬಲ್ಲಿ ನಡೆಯುವ 123ನೇ ಜಲ್ಸಾ ಸಲಾನ ಕಾರ್ಯಕ್ರಮಕ್ಕೆ ಪಾಕಿಸ್ತಾನದಿಂದ ಆಗಮಿಸುವ 1800 ಅಹಮ್ಮದೀಯರಿಗೂ ಭಾರತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದೆ. ಭಾರತ 2015ರಲ್ಲಿ ಹೀಗೆ ಭದ್ರತೆ ನೀಡಿದ್ದ ಕಾರಣಕ್ಕೇ 5000 ಪಾಕಿಸ್ತಾನಿ ಅಹಮ್ಮದೀಯರು ಭಾಗವಹಿಸಿದ್ದರು.
ಒಟ್ಟಿನಲ್ಲಿ ಪಾಕಿಸ್ತಾನ ಎಷ್ಟೇ ಕುತಂತ್ರ ತೋರಿದರೂ, ಭಾರತಕ್ಕೆ ಉಗ್ರರನ್ನು ಬಿಟ್ಟು ಉಪಟಳ ಮಾಡಿದರೂ ಭಾರತ ಮಾತ್ರ ಪಾಕಿಸ್ತಾನಿ ನಾಗರಿಕರಿಗೆ ಭಾರತದಲ್ಲಿ ರಕ್ಷಣೆ, ಚಿಕಿತ್ಸೆಗಾಗಿ ವೀಸಾ ಸೇರಿ ಅಲ್ಲಿಂದ ಇಲ್ಲಿ ಬಂದು ನೆಲೆಸಿರುವವರಿಗೆ ನಾಗರಿಕತ್ವ ನೀಡಿ ಮಾನವೀಯತೆ ಮೆರೆಯುತ್ತಿದೆ. ಹಾಂಗಂತ ಭಾರತವೇನು ಕಾಶ್ಮೀರದಲ್ಲಿ ಉಗ್ರರು ಬಂದರೆ ಬಂದೂಕು ನಳನಳಿಸದೆ ಬಿಡುವುದಿಲ್ಲ ಮತ್ತೆ!
Leave A Reply