ಮತಾಂತರದ ಕಾರ್ಖಾನೆಯಾಗುತ್ತಿದೆಯೇ ಕೇರಳ? ಇಲ್ಲಿದೆ ಅದರ ಮತ್ತೊಂದು ಮುಖವೊಂದು ಕರಾಳ
ಕೇರಳದಲ್ಲಿ ಅಖಿಲಾ ಅಶೋಕನ್ ಎಂಬ ಹಿಂದೂ ಮಹಿಳೆ ಇಸ್ಲಾಂಗೆ ಮತಾಂತರಗೊಂಡು, ಅದು ಲವ್ ಜಿಹಾದ್ ರೂಪ ಪಡೆದು ಈಗ ಪ್ರಕರಣ ಸುಪ್ರೀ ಕೋರ್ಟ್ ಅಂಗಳದಲ್ಲಿದೆ…
ಕಳೆದ ವರ್ಷವೇ ಹಿಂದೂ ಬಾಲಕಿಯೊಬ್ಬಳು ಮುಸ್ಲಿಮನನ್ನು ಪ್ರೀತಿಸಿ ಮದುವೆಯಾಗಿ, ಮತಾಂತರಗೊಂಡು ಐಸಿಸ್ ಸೇರಿದ ಕುರಿತ ಸುದ್ದಿ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
ಈಗ ಇಸ್ಲಾಂ ಮೂಲಭೂತವಾದಕ್ಕೆ ಮತ್ತೊಬ್ಬ ಹಿಂದೂ ಯುವತಿ ಬಲಿಯಾಗಿದ್ದು, ಇಡೀ ಕೇರಳ ಹಿಂದೂಗಳ ಕೊಲೆ ಹಾಗೂ ಮತಾಂತರದ ಕಾರ್ಖಾನೆಯಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿಸುತ್ತಿದೆ…
ಹೌದು, ಕೊಚ್ಚಿಯಲ್ಲಿ ವೈಮಾನಿಕ ಎಂಜಿನಿಯರ್ ಓದುತ್ತಿದ್ದ ಅಪರ್ಣಾ ಇತ್ತೀಚೆಗೆ ಕಾಣೆಯಾಗಿದ್ದಳು. ಮೊದಲೇ ಮತಾಂತರದ ಭೀತಿಯಲ್ಲಿದ್ದ ಕಾರಣ ತಾಯಿ ಕೇರಳ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಅನ್ವಯ ಕಾರ್ಯಾಚರಣೆ ಕೈಗೊಂಡ ಪೊಲೀಸರು ಕ್ಯಾಲಿಕಟ್ ನಲ್ಲಿ ಅಪರ್ಣಾಳನ್ನು ಪತ್ತೆ ಹಚ್ಚಿದ್ದಾರೆ. ಆದರೆ ಅಷ್ಟೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಅಪರ್ಣಾ ಇಸ್ಲಾಂ ಮೂಲಭೂತವಾದಿಗಳ ಮೋಸಕ್ಕೆ ಬಲಿಯಾಗಿ ಶಹಾನಾ ಆಗಿದ್ದಾಳೆ. ಅಲ್ಲದೆ ನನ್ನ ಪೋಷಕರ ಜತೆ ತೆರಳುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಹೆತ್ತ ಕರಳು ಅದೆಷ್ಟು ಚುರುಕ್ ಎಂದಿರಬೇಡ ಈ ಮಾತು ಕೇಳಿ!
ಮುಸ್ಲಿಮೇತರರ ಮನವೊಲಿಸಿ ಮತಾಂತರಗೊಳಿಸುವ ಕಾರ್ಖಾನೆಯಾಗಿಯೇ ರೂಪುಗೊಂಡಂತಿರುವ ಸತ್ಯ ಸಾರಿಣಿ ಎಂಬ ಸಂಸ್ಥೆ ಅಪರ್ಣಾಳ ತಲೆ ಕೆಡಿಸಿದೆ. ಅಲ್ಲಾನ ಸಂದೇಶವೊಂದನ್ನು ಬಿಟ್ಟು ಅಪರ್ಣಾ ತಲೆಯಲ್ಲಿ ಇಸ್ಲಾಂ ಮೂಲಭೂತವಾದದ ಹುಳು ಬಿಟ್ಟಿದ್ದಾರೆ. ಅಲ್ಲಿಗೆ ಹಿಂದೂ ಧರ್ಮದಲ್ಲೇ ಹುಟ್ಟಿದ ಅಪರ್ಣಾ ಈಗ ಹಿಂದೂ ಧರ್ಮಕ್ಕೇ ಶತ್ರುವಾಗಿದ್ದಾಳೆ.
ಏನಾಗುತ್ತಿದೆ ಕೇರಳದಲ್ಲಿ? ಎತ್ತ ಸಾಗುತ್ತಿದೆ ದೇಶ? ಇದರ ಬಗ್ಗೆಯೇಕೆ ಯಾರೂ ಮಾತನಾಡುವುದಿಲ್ಲ? ಈ ಅನ್ಯಾಯದ ಬಗ್ಗೆ ಏಕೆ ಬಾಯಿಬಿಡುವುದಿಲ್ಲ? ಹಿಂದೂಗಳೇನು ಬಿಟ್ಟಿ ಬಿದಿದ್ದಾರೆಯೇ? ಕೇರಳ ಮತಾಂತರದ ಕಾರ್ಖಾನೆಯಾಗುತ್ತಿದೆಯೇ?
ಗುಪ್ತಚರ ಮಾಹಿತಿ ಪ್ರಕಾರ ಕೇರಳದ ಕ್ಯಾಲಿಕಟ್ ಹಾಗೂ ಮಲಪ್ಪುರಂ ಮತಾಂತರದ ರಾಜಧಾನಿಯಾಗಿ ಮಾರ್ಪಡುತ್ತಿವೆ ಎಂದು ತಿಳಿದುಬಂದಿದೆ. 2011ರಿಂದ 2015ರವರೆಗಿನ ಅವಧಿಯಲ್ಲಿ ಕೇರಳದಲ್ಲಿ 5700ಕ್ಕೂ ಅಧಿಕ ಮುಸ್ಲಿಮೇತರ, ಹಿಂದೂಗಳೇ ಜಾಸ್ತಿಯಿರುವ ಯುವತಿಯರು ಹಾಗೂ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಮತಾಂತರಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಆದಾಗ್ಯೂ, ಇವರಲ್ಲಿ ಶೇ.75ಕ್ಕಿಂತ ಹೆಚ್ಚು ಮಹಿಳೆಯರು 35 ವರ್ಷದವರಿಗಿಂತ ಕಡಿಮೆ ವಯಸ್ಸಿನವರಿದ್ದಾರಂತೆ. ನೋಂದಣಿಯಾಗದ ಇಸ್ಲಾಮಿಕ್ ಸಂಸ್ಥೆಗಳು ನೋಡಲು ಲಕ್ಷಣವಾಗಿರುವ ಮುಸ್ಲಿಂ ಯುವಕರನ್ನು ಬಿಟ್ಟೋ, ಬಡತನ ಬಂಡವಾಳವಾಗಿಸಿ ಆಮಿಷ ತೋರಿಸಿಯೋ ಮತಾಂತರಗೊಳಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಇಷ್ಟಾದರೂ ಕೇರಳದ ಕಮ್ಯುನಿಸ್ಟ್ ಸರ್ಕಾರ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಣ್ಣು ಮುಚ್ಚಿ ಕುಳಿತಿದ್ದಾರೆ. ಕಣ್ಣೆದುರಿಗೇ ಆರೆಸ್ಸೆಸ್ ಬಿಜೆಪಿ ಕಾರ್ಯಕರ್ತ ಹತ್ಯೆಯಾದರೂ, ಹಿಂದೂಗಳ ಮತಾಂತರವಾದರೂ ಮಗ್ಗುಮ್ಮಾಗಿ ಕುಳಿತಿದೆ ಎಂದರೆ ಪರೋಕ್ಷವಾಗಿ ಈ ಸರ್ಕಾರವೂ ಇಂಥ ಕೃತ್ಯಗಳಿಗೆ ಬೆಂಬಲ ನೀಡುತ್ತದೆ ಎಂದೇ ಅರ್ಥವಲ್ಲವೇ?
ಪರಿಸ್ಥಿತಿ ಹೀಗಿರುವಾಗ, ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಸರ್ಕಾರಗಳಿರುವ ರಾಜ್ಯದಲ್ಲಿ ಹಿಂದೂಗಳಿಗೆ ಬೆಲೆ ಇಲ್ಲ ಎಂಬುದಕ್ಕೆ ಪಶ್ಚಿಮ ಬಂಗಾಳ, ಕೇರಳ ಹಾಗೂ ಕರ್ನಾಟಕಗಳೇ ಸಾಕ್ಷಿಯಾಗಿದ್ದು, ಹಿಂದೂಗಳಾದ ನಾವೇ ಎಚ್ಚೆತ್ತುಕೊಳ್ಳಬೇಕು. ಯಾವ ಆಮಿಷದ ಹಿಂದೆ ಯಾವ ದುರುಳತನವಿದೆ, ಯಾವ ಪ್ರೀತಿಯ ಹಿಂದೆ ಮತಾಂತರದ ವಿಷಬೀಜವಿದೆ, ಯಾವ ಸಂಸ್ಥೆಯ ಹಿಂದೆ ಯಾವ ಕೆಟ್ಟ ಉದ್ದೇಶವಿದೆ ಎಂಬುದನ್ನು ಅರಿಯಬೇಕು. ನಮ್ಮ ಜಾಗೃತಿಯಲ್ಲಿ ನಾವಿರಬೇಕು. ಇಲ್ಲದಿದ್ದರೆ ನಮ್ಮ ಮನೆಯ ಅಪರ್ಣಾಳೂ ಶಯಾನಾ ಆದಾಳು? ಎಚ್ಚರ.
Leave A Reply