ಶಾಸಕರು, ಸಂಸದರು ಆರೋಪಿಗಳಾಗಿರುವ ಪ್ರಕರಣದ ವಿಚಾರಣೆ ಬರಲಿದೆ ಫಾಸ್ಟ್‍ಟ್ರ್ಯಾಕ್ ಕೋರ್ಟ್
Posted On November 2, 2017
** ಸುಪ್ರೀಂಕೋರ್ಟ್‍ನಿಂದ ಕಾರ್ಯನಕ್ಷೆ ಸಿದ್ದಪಡಿಸಿ ಸಲ್ಲಿಕೆಗೆ ಕೇಂದ್ರಕ್ಕೆ 6 ವಾರಗಳ ಗಡುವು
** ಕಳೆದ ಮೂರು ವರ್ಷದಲ್ಲಿ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಹೊಸ ಪ್ರಕರಣಗಳ ಪಟ್ಟಿ ನೀಡಲು ಸೂಚನೆ
ನವದೆಹಲಿ : ಶಾಸಕರು ಮತ್ತು ಸಂಸದರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿದೆ.
ನ್ಯಾ.ರಂಜನ್ ಗೊಗೊಯಿ ಮತ್ತು ನ್ಯಾ. ನವೀನ್ ಸಿನ್ಹಾ ಅವರಿದ್ದ ನ್ಯಾಯಪೀಠ ಕೇಂದ್ರ ಸರ್ಕಾರದಿಂದ ತ್ವರಿತ ವಿಚಾರಣೆ ನ್ಯಾಯಾಲಯಗಳ ಸ್ಥಾಪನೆಗೆ ಆರು ವಾರಗಳೊಳಗೆ ನಕ್ಷೆ ಸಿದ್ಧಪಡಿಸಿ ಸಲ್ಲಿಸಲು ಸೂಚಿಸಿದೆ.
2014ರಿಂದ ರಾಜಕಾರಣಿಗಳ ವಿರುದ್ಧದ 1581 ಪ್ರಕರಣಗಳ ವಿಚಾರಣೆಯ ಪ್ರಗತಿ ವರದಿ ಸಲ್ಲಿಕೆಗೂ ಕೇಂದ್ರಕ್ಕೆ ಸುಪ್ರೀಂ ಸೂಚಿನೆ ನೀಡಿದೆ.
ಅಷ್ಟಲ್ಲದೇ ಕಳೆದ ಮೂರು ವರ್ಷಗಳಲ್ಲಿ ಶಾಸಕರು ಮತ್ತು ರಾಜಕಾರಣಿಗಳ ವಿರುದ್ಧ ದಾಖಲಾಗಿರುವ ಹೊಸ ಪ್ರಕರಣಗಳ ವಿವರ ನೀಡುವಂತೆಯೂ ತಾಕೀತು ಮಾಡಿದೆ. ಡಿ. 13ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಲಾಗಿದೆ.
ರಾಜಕಾರಣ ಶುದ್ಧವಾಗಬೇಕಿರುವುದ ಪ್ರಧಾನಿ ಆಶಯ:
ಈ ಹಿಂದೆಯೂ ಪ್ರಧಾನಿ ಮೋದಿ ಕಳಂಕಿತ ಜನಪ್ರತಿನಿಧಿಗಳನ್ನು ಚುನಾವಣೆಯಿಂದ ಬಹಿಷ್ಕರಿಸುವ ಪ್ರಸ್ತಾವನೆಯನ್ನು ಚುನಾವಣಾ ಆಂಯೋಗದ ಎದುರು ಇಟ್ಟಿದ್ದರು. ಇದನ್ನೇ ಸುಪ್ರೀಂಕೋರ್ಟ್‍ಗೆ ಬುಧವಾರ ತಿಳಿಸಲಾಯಿತು. ತ್ವರಿತಗತಿ ವಿಚಾರಣೆ ನ್ಯಾಯಾಲಯಗಳ ಸ್ಥಾಪನೆಗೆ ಕೇಂದ್ರ ಸರಕಾರ ಉತ್ಸುಕವಾಗಿದೆ. ಅಪರಾಧ ಹಿನ್ನೆಲೆಯ ಕಳಂಕಿತ ರಾಜಕಾರಣಿಗಳಿಗೆ ಮತ್ತು ಚುನಾವಣಾ ಅಭ್ಯರ್ಥಿಗಳಿಗೆ ಜೀವಮಾನ ಪೂರ್ತಿ ಚುನಾವಣೆಯಿಂದ ನಿಷೇಧ ಹೇರುವ ಕಾನೂನ ಆಯೋಗದ ಶಿಫಾರಸು ಕುರಿತು ಶೀಘ್ರವೇ ಕೇಂದ್ರ ಚಿಂತನೆ ನಡಸಲಿದೆ ಎಂದು ಸುಪ್ರೀಂಗೆ ತಿಳಿಸಲಾಯಿತು.
ಅಪರಾಧ ಸಾಬೀತಾದರೆ ಅಂಥ ಜನಪ್ರತಿನಿಧಿಗಳಿಗೆ ಆರು ವರ್ಷ ಚುನಾವಣೆಯಿಂದ ಬಹಿಷ್ಕಾರ ಹೇರುವ ಕಾನೂನು ಸದ್ಯ ಜಾರಿಯಲ್ಲಿದೆ ಎಂದು ಚುನಾವಣಾ ಆಯೋಗ ಕೋರ್ಟ್‍ಗೆ ತಿಳಿಸಿತು.
ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ವಿಚಾರಣೆ ನಡೆಸಿತ್ತು.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply