ಕೆಣಕಿದರೆ ಬಿಡ್ತೀವಾ ಮತ್ತೆ, ಕಾಶ್ಮೀರದಲ್ಲಿ 170 ಉಗ್ರರ ಹತ್ಯೆ
ಶ್ರೀನಗರ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳಕ್ಕೆ ಕಡಿವಾಣ ಹಾಕುತ್ತಿದ್ದು, ಭದ್ರತಾ ಸಿಬ್ಬಂದಿ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನೇ ಕೈಗೊಂಡಿದೆ.
ಹೀಗೆ ಕಾಶ್ಮೀರದಲ್ಲಿ ನುಸುಳಲು ಯತ್ನಿಸಿದ, ದಾಳಿ ಮಾಡಿದ ಬಹುತೇಕ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ ಬರೋಬ್ಬರಿ 170 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2017ರ ಆರಂಭದಲ್ಲೇ, ಅಂದರೆ ಫೆಬ್ರವರಿ ಮುಗಿಯುವುದರೊಳಗೆ ಪಾಕಿಸ್ತಾನ ಕೃಪಾಪೋಷಿತ 22 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಉಗ್ರರನ್ನು ಹತ್ಯೆ ಮಾಡಲಾದ ಖ್ಯಾತಿ ಸೈನ್ಯದ ಮುಡಿಗೇರಿದೆ.
ಆದಾಗ್ಯೂ, ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಜಮ್ಮು-ಕಾಶ್ಮೀರದಲ್ಲಿ ಉಗ್ರವಾದಕ್ಕೆ ಬ್ರೇಕ್ ಹಾಕುತ್ತಿದ್ದು, ಕಲ್ಲು ತೂರಾಟ, ಉಗ್ರ ಚಟುವಟಿಕೆಗಳನ್ನು ನಿಗ್ರಹಿಸಲಾಗುತ್ತಿದೆ. ಅಲ್ಲದೆ ಕಲ್ಲು ತೂರಾಟಗಾರರನ್ನು ಪೋಷಿಸುತ್ತಿದ್ದ ಪ್ರತ್ಯೇಕತಾವಾದಿಗಳು ಹಾಗೂ ಅವರ ಮುಖಂಡ ಸೈಯದ್ ಶಾ ಗೀಲಾನಿ ವಿರುದ್ಧ ಎನ್ಐಎ ತನಿಖೆ ನಡೆಸುತ್ತಿದ್ದು, ಭಯೋತ್ಪಾದಕರಿಂದ ಹಣ ಪಡೆದು ಉಗ್ರ ಚಟುವಟಿಕೆಗಳಿಗೆ ನೀಡಿದ ಆರೋಪವೂ ಇವರ ಮೇಲಿದೆ. ಹಾಗಾಗಿ ಕಲ್ಲು ತೂರಾಟ ಪ್ರಕರಣ ಕಡಿಮೆಯಾಗುತ್ತಿವೆ.
ಕಳೆದ ಮೇ ನಿಂದ ಭಾರತೀಯ ಸೇನೆ ವಿಶೇಷವಾಗಿ ಕಾರ್ಯಾಚರಣೆ ನಡೆಸಿದ್ದು ಪ್ರಸಕ್ತ ವರ್ಷದಲ್ಲಿ ಲಷ್ಕರೆ ತಯ್ಯಬಾ, ಹಿಜ್ಬುಲ್ ಮುಜಾಹಿದ್ದೀನ್ ಪ್ರಮುಖ ಉಗ್ರರನ್ನು ಹತ್ಯೆ ಮಾಡಲಾಗಿದೆ. 2016ರಲ್ಲಿ ಭಾರತೀಯ ಭದ್ರತಾ ಸಿಬ್ಬಂಧಿ 88 ಉಗ್ರರನ್ನು ಹತ್ಯೆ ಮಾಡಿತ್ತು.
Leave A Reply