ಅರಣ್ಯ ಸಚಿವ ಬಿ. ರಮಾನಾಥ ರೈಯವರಿಂದ ಭೂಕಬಳಿಕೆ
ಮಂಗಳೂರು: ಅರಣ್ಯ ಸಂರಕ್ಷಣೆ ಮಾಡಬೇಕಾದ ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರ ಮೇಲೆಯೇ ಭೂಕಬಳಿಕೆ ಆರೋಪಗಳು ಕೇಳಿ ಬಂದಿವೆ. ಕಾಂಗ್ರೆಸ್ನ ಮಾಜಿ ಮುಖಂಡ ಹರಿಕೃಷ್ಣ ಬಂಟ್ವಾಳ ದಾಖಲೆ ಸಮೇತ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸವರ್ೆ ನಂ.20/2ರ ಪೈಕಿ 2.014 ಎಕರೆ ಹಾಗೂ ಸವರ್ೆ ನಂ. 38/2ರ ಪೈಕಿ ಒಂದು ಎಕರೆ ಹೀಗೆ ಒಟ್ಟು 3.04 ಎಕರೆ ಜಾಗವನ್ನು ತಮ್ಮ ಪತ್ನಿ ಶೈಲಾ ಆರ್. ರೈ (ಅವರ ನಿಜವಾದ ಹೆಸರು ಧನಭಾಗ್ಯ ರೈ- ಚುನಾವಣೆ ನಾಮಪತ್ರ ಸಲ್ಲಿಕೆ ಸಂದರ್ಭ ನೀಡುವ ಆಸ್ತಿ ವಿವರಗಳಲ್ಲಿ ಅವರ ಹೆಸರು ಧನಭಾಗ್ಯ ರೈ ಎಂದೇ ನೀಡಿದ್ದಾರೆ) ಅವರ ಹೆಸರಿನಲ್ಲಿ ಅಕ್ರಮ- ಸಕ್ರಮ ಜಾಗವನ್ನು ನಿಯಯಾವಳಿ ಉಲ್ಲಂಘಿಸಿ ಮಂಜೂರು ಮಾಡಿಸಿದ್ದಾರೆ. ಶೈಲಾ ರೈ (ಧನಭಾಗ್ಯ) ತನ್ನ ತಿಂಗಳ ವೇತನ 500ರೂ. (ವಾಷರ್ಿಕ ವೇತನ 6000ರೂ.) ಯೆಂದು ನಂಬಿಸಿ ಸರಕಾರಿ ಜಾಗ ಅಂದರೆ ಸವರ್ೆ ನಂ.20/2ಕ್ಕೆ ಅಜರ್ಿ ಸಲ್ಲಿಸಿದ್ದಾರೆ. ಅಜರ್ಿ ಸಲ್ಲಿಕೆ ಸಂದರ್ಭ ಸಚಿವ ರೈಯವರ ಪತ್ನಿ ಇತರೆ ಭೂಮಿಯಾಗಿ 1.90 ಎಕರೆ ಜಾಗ ಹೊಂದಿರುವುದಾಗಿ ಹೇಳಿದ್ದಾರೆ. ಅಕ್ರಮ-ಸಕ್ರಮ ನಿಯಮಾವಳಿ ಪ್ರಕಾರ ಯಾವುದೇ ವ್ಯಕ್ತಿಗೆ ತಾನು ಹೊಂದಿರುವ ಜಮೀನು ಮತ್ತು ಮಂಜೂರಾತಿ ನೀಡಿರುವ ಜಮೀನು ನಾಲ್ಕು ಯುನಿಟ್ಗಿಂತ ಮೀರಿರಬಾರದು. ಆದರೆ, ಇಲ್ಲಿ ಆ ಮಿತಿಯನ್ನು ಮೀರಲಾಗಿದೆ. ಇದೊಂದು ಅಕ್ರಮವಾದರೆ, ಸವರ್ೆ ನಂ.38/2ರ ಜಾಗಕ್ಕೆ ಯಾವುದೇ ಅಜರ್ಿ ಸಲ್ಲಿಸದೆ ತಮ್ಮ ಪ್ರಭಾವವನ್ನು ಬಳಸಿ, ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇದೆಂಥ ಕಾನೂನು ಎಂದು ಪ್ರಶ್ನಿಸಿದ್ದಾರೆ.
ಇಷ್ಟೆಲ್ಲಾ ಸಾಲದೆಂಬಂತೆ ಕಳ್ಳಿಗೆಯಲ್ಲಿ ಹತ್ತು ಎಕರೆ ಸರಕಾರಿ ಜಾಗದಲ್ಲಿ ತಮ್ಮದೇ ಜಾಗದಂತೆ ರಬ್ಬರ್ ತೋಟ ಮಾಡಿದ್ದಾರೆಂದರೆ ಒಬ್ಬ ಸಚಿವರಾದವರು ಜನರಿಗೆ, ಸರಕಾರಕ್ಕೆ, ಕಾನೂನಿಗೆ ಇದಕ್ಕಿಂತ ದೊಡ್ಡ ಅನ್ಯಾಯ ಮಾಡಲು ಸಾಧ್ಯವೇ ಎಂದು ಕೇಳಿದ್ದಾರೆ. ಸಚಿವರು ತಾಕತ್ತಿದ್ದರೆ ತಮ್ಮ ಅಕ್ರಮ ಜಮೀನನ್ನು ಬಿಟ್ಟು ಬಡವರಿಗೆ ಹಂಚಲಿ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಚಿವರ ಭೂಕಬಳಿಕೆಯ ತನಿಖೆಯನ್ನು ಎಸಿಬಿಗೆ ನೀಡಲಿ. ತನಿಖೆಯ ಸತ್ಯಾಸತ್ಯತೆ ಹೊರಬರಲಿ. ಇದು ಸಾಧ್ಯವಿಲ್ಲವಾದರೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಪ್ರಾಮಾಣಿಕ ಐಎಎಸ್ ಅಧಿಕಾರಿಯಾಗಿದ್ದರೆ ಈ ಪ್ರಕರಣದ ತನಿಖೆಯನ್ನು ತಾವೇ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ತಾನಂತೂ ಸಚಿವ ರೈಯವರಿಂದ ರಾಜೀನಾಮೆ ಕೇಳುವುದಿಲ್ಲ. ಇನ್ನು ಕೇವಲ ಆರು ತಿಂಗಳಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ಸಚಿವರ ಈ ಅಕ್ರಮಗಳನ್ನು ಜನತಾ ನ್ಯಾಯಾಲಯದ ಮುಂದಿಡುತ್ತೇನೆ. ಅವರೇ ತೀಮರ್ಾನಿಸಲಿ ಎಂದರು.
ಸಚಿವರ ಅಕ್ರಮ ಭೂ ಕಬಳಿಕೆ ತನಗೆ ಈ ಹಿಂದೆಯೇ ಗೊತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಮಾತೆತ್ತಿದ್ದರೆ ಪಕ್ಷದಿಂದ ಉಚ್ಛಾಟನೆ ಮಾಡುವ ಬೆದರಿಕೆಯೊಡ್ಡುತ್ತಿದ್ದರು. ಆದರೆ, ತಾನು ಜನಾರ್ದನ ಪೂಜಾರಿಯವರಿಗೋಸ್ಕರ ಸುಮ್ಮನಿದ್ದೆ. ಅವರು ನಮ್ಮವರು ಎಂದು ತನ್ನ ಬಾಯಿ ಮುಚ್ಚಿಸುತ್ತಿದ್ದರು. ಆದರೆ, ಈಗ ಅಂಥಹ ನಿಷ್ಠಾವಂತ ಕಾರ್ಯಕರ್ತನನ್ನೇ ಪಕ್ಷ ದೂರ ಮಾಡಿಕೊಂಡಿದೆ.
ಇಂದಿಗೂ ಸರಕಾರಿ ಐಬಿಯಲ್ಲಿ ದುಡ್ಡುಕೊಟ್ಟು ಊಟ ಮಾಡುವ ಪ್ರಾಮಾಣಿಕ ಜನಾರ್ದನ ಪೂಜಾರಿಯಂತಹ ನಾಯಕರು ಬೇಡ. ಅಕ್ರಮ, ಭೂ ಮಾಫಿಯಾದಲ್ಲಿರುವವರೇ ಬೇಕು ಎಂದ ಅವರು, ಕಾಂಗ್ರೆಸ್ ಎಂದರೆ ಲೂಟಿಕೋರರ ಕಂಪೆನಿ ಎಂದು ಟೀಕಿಸಿದರು.
ಬಂಟ್ವಾಳದಲ್ಲಿ ಸಚಿವರ ರೈಯವರ ವಿರುದ್ಧ ಯಾರೂ ಸೊಲ್ಲೆತ್ತುವಂತಿಲ್ಲ. ಅದೀಗ ರಿಪಬ್ಲಿಕ್ ಹಬ್ ಆಗಿದೆ. ಮಾತೆತ್ತಿದ್ದರೆ ಬೆದರಿಕೆ ಕರೆಗಳು. ತನಗೂ ಬೆದರಿಕೆ ಕರೆಗಳು, ಪತ್ರಗಳು ಈಗಾಗಲೇ ಬಂದಿವೆ ಎಂದ ಅವರು, ನಾನು ಸಚಿವರ ಬೆದರಿಕೆಗೆ ಜಗ್ಗುವುದಿಲ್ಲ ಎಂದಿದ್ದಾರೆ.
Leave A Reply