ಕಾರ್ಯಪ್ಪ ಭಾರತ ರತ್ನಕ್ಕೆ ಅರ್ಹ ವ್ಯಕ್ತಿ:ರಾವತ್
Posted On November 5, 2017

ಮಡಿಕೇರಿ: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಭಾರತ ರತ್ನ ಗೌರವ ಪಡೆಯಲು ಅರ್ಹ ವ್ಯಕ್ತಿ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದರು.
ಕೊಡಗಿನ ಗೋಣಿಕೊಪ್ಪಲುನಲ್ಲಿ ಶುಕ್ರವಾರ ನಡೆದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯನವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ರತ್ನ ಪ್ರಶಸ್ತಿಗಾಗಿ ಕೊಡಗಿನ ಜನರಿಂದ ಬಹುದಿನಗಳಿಂದ ಬೇಡಿಕೆ ಕೇಳಿ ಬರುತ್ತಿದೆ. ಕೊಡವರ ನಿಲುವಿಗೆ ನನ್ನ ಬೆಂಬಲವಿದೆ. ಭಾರತ ರತ್ನ ಪಡೆಯಲು ಕಾರ್ಯಪ್ಪ ಸೂಕ್ತ ವ್ಯಕ್ತಪಡಿಸಿದರು.
ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರಲ್ಲಿ ದೇಶದ ಕುರಿತ, ರಕ್ಷಣೆಯ ಕುರಿತು ದೂರದೃಷ್ಟಿ ಇತ್ತು. ಅವರಿಬ್ಬರೂ ಕೊಡಗಿನ ಮಾದರಿ ನಾಯಕರು. ದೇಶಕ್ಕಾಗಿ ತಮ್ಮ ಪ್ರಾಣ ನೀಡಿದ ಹುತಾತ್ಮರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಹುತಾತ್ಮರಿಗೆ ಗೌರವ ನೀಡದಿದ್ದರೇ ಭಾರತದ ಸೇನೆ ಬಲಿಷ್ಠವಾಗಿ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.
- Advertisement -
Trending Now
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
March 23, 2023
Leave A Reply