ನೋಟು ನಿಷೇಧದ ಬಳಿಕ ನಕಲಿ ಕಂಪನಿಗಳಿಂದ 17 ಸಾವಿರ ಕೋಟಿ ರು. ವಹಿವಾಟು
ದೆಹಲಿ: ನೋಟು ನಿಷೇಧದ ಬಳಿಕ ಕೇಂದ್ರ ಸರ್ಕಾರ ಕೈಗೊಂಡ ಕಪ್ಪು ಹಣದ ವಿರುದ್ಧದ ಕಾರ್ಯಾಚರಣೆ ಫಲ ನೀಡುತ್ತಿದ್ದು, ನೋಟು ನಿಷೇಧದ ಬಳಿಕ 2.24 ನಕಲಿ ಕಂಪನಿಗಳಿರುವ ಕುರಿತು ಪರಿಶೀಲನೆ ನಡೆಸಲಾಗಿದ್ದು, ಅವುಗಳಲ್ಲಿ 35 ಸಾವಿರ ನಕಲಿ ಕಂಪನಿಗಳಿಂದ 17 ಸಾವಿರ ಕೋಟಿ ರು. ವಹಿವಾಟು ನಡೆಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಮಾಹಿತಿ ನೀಡಿದೆ.
ನೋಟು ನಿಷೇಧದ ಬಳಿಕ ಮೊದಲ ಹಂತವಾಗಿ 56 ಬ್ಯಾಂಕುಗಳು ಶಂಕಿತ ನಕಲಿ ಕಂಪನಿಗಳ ವಹಿವಾಟು ಮಾಹಿತಿ ನೀಡಿದ್ದು, ಸುಮಾರು 35 ಸಾವಿರ ಕಂಪನಿಗಳು 58 ಸಾವಿರ ಖಾತೆಗಳ ಮೂಲಕ 17 ಸಾವಿರ ಕೋಟಿ ರು. ಠೇವಣಿ ಹಾಗೂ ವಿತ್ ಡ್ರಾ ಮಾಡಿವೆ ಎಂದು ತಿಳಿಸಿದೆ.
ಇವುಗಳಲ್ಲಿ ಒಂದೇ ಕಂಪನಿ ನ.8, 2016ಕ್ಕೂ ಮೊದಲು ಯಾವುದೇ ವಹಿವಾಟು ಹೊಂದಿರಲಿಲ್ಲ. ಆದರೆ ನೋಟ್ ಬ್ಯಾನ್ ಬಳಿಕ 2,134 ಖಾತೆಗಳ ಮೂಲಕ 2,484 ಕೋಟಿ ರು. ವಹಿವಾಟು ನಡೆಸಿದೆ ಎಂದು ವಿವರಿಸಿದೆ.
2013ರ ಕಂಪನಿಗಳ ಕಾಯಿದೆ ಪ್ರಕಾರ ಈ ನಕಲಿ ಕಂಪನಿಗಳ ವಿರುದ್ಧ ಸೂಕ್ರ ಕೈಗೊಳ್ಳಲಾಗುತ್ತದೆ. ಮತ್ತಷ್ಟು ತನಿಖೆ ನಡೆಸಿ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಈಗಾಗಲೇ ಸರ್ಕಾರ 2 ಲಕ್ಷ ನಿಷ್ಕ್ರಿಯಗೊಂಡಿರುವ ಹಾಗೂ ಸರ್ಕಾರಕ್ಕೆ ಸಮರ್ಪಕ ಮಾಹಿತಿ ಒದಗಿಸದಿರುವ ಕಂಪನಿಗಳ ನೋಂದಣಿ ರದ್ದುಗೊಳಿಸಿದೆ.
ನೋಟು ನಿಷೇಧದ ಬಳಿಕ ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ನೋಟು ನಿಷೇಧ ವಿಫಲ ಎಂದು ಘೀಳಿಡುವವರಿಗೆ ಸರ್ಕಾರದ ಈ ಕ್ರಮವೇ ಉತ್ತರವಾಗಿದೆ.
Leave A Reply