ಲಿಂಗಾಯತ ಧರ್ಮದ ಪ್ರತ್ಯೇಕತೆಗೆ ಹೊರಟಿರುವವರಿಗೊಂದಿಷ್ಟು ಪ್ರಶ್ನೆಗಳು?
Posted On November 6, 2017
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಯಾವಾಗ ರಾಜಕೀಯ ಸ್ಪರ್ಶ ಸಿಕ್ಕಿತೋ, ಅಲ್ಲಿಂದ ಅರ್ಥವಿಲ್ಲದ, ಹಿಂದೂ ಧರ್ಮ ಒಡೆಯುವ ನಿರರ್ಥಕ ಹೋರಾಟಕ್ಕೊಂದು ವೇಗ ಸಿಕ್ಕಿದೆ. ಹೀಗೆ ಒಂದಾಗಿರುವವರನ್ನು ಒಡೆಯಲು ಹೊರಟಿರುವವರಿಗೆ ಕೇಳಲು ಒಂದಿಷ್ಟು ಪ್ರಶ್ನೆಗಳಿವೆ. ಉತ್ತರಿಸಿದ್ದರೂ ಪರವಾಗಿಲ್ಲ, ಆತ್ಮಾವಲೋಕನವಾದರೂ ಮಾಡಿಕೊಳ್ಳಿ.
- ಸಲಹಿದ ತಂದೆ, ತಾಯಿಯನ್ನು, ಜ್ಞಾನ ನೀಡಿದ ಗುರುವನ್ನು ಗೌರವಿಸುವುದು ಅದು ನಮ್ಮ ಸಂಸ್ಕೃತಿ. ಅದನ್ನೇ ಅಸಮಾನತೆ ಎಂದರೆ ಹೇಗೆ. ಗುರುಹಿರಿಯರೆದುರು ಕಾಲಮೇಲೆ ಕಾಲು ಹಾಕಿ ಕುಳಿತುಕೊಳ್ಳದ ಸಂಸ್ಕೃತಿ ನಮ್ಮದು. ಅದನ್ನೆ ಪಾಲಿಸಿದರೆ ಅಸಮಾನತೆ ಎನ್ನುತ್ತೀರಾದರೆ, ಪ್ರತ್ಯೇಕ ಧರ್ಮ ಎನ್ನುವ ಸ್ವಾಮೀಜಿಗಳ ಎದುರು ಅವರ ಭಕ್ತರು ಅಗೌರವ ತೋರಿದರೇ ಸುಮ್ಮನಿರುವವರೇ?
- ಅಲ್ಪಂಖ್ಯಾತ ಸ್ಥಾನಕ್ಕಾಗಿ ಹೋರಾಟ, ಮೀಸಲಾತಿ ದೊರೆಯುತ್ತದೆ ಎನ್ನುತ್ತೀರಾದರೆ ಇಷ್ಟು ವರ್ಷ ಸಚಿವ ಎಂ.ಬಿ ಪಾಟೀಲ್ ನೇತೃತ್ವದ ಬಿಎಲ್ ಡಿ ಸಂಸ್ಥೆ ಸೇರಿ ಸಾವಿರಾರು ಶೈಕ್ಷಣಿಕ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಯಾವುದೇ ಮೀಸಲಾತಿ ಇಲ್ಲದೇ ಅಲ್ಲವೇ?
- ಕಾಯಕವನ್ನೇ ಕೈಲಾಸ ಎಂದ ಶರಣತತ್ವವನ್ನು ಮರೆತು ದುಡಿಯುವುದನ್ನೆ ಮರೆಮಾಚಿ, ಯಾರೋ ನೀಡುವ ಸೌಲಭ್ಯಕ್ಕೆ ಕೈ ಚಾಚುವುದೇ ಶರಣ ಸಂಸ್ಕೃತಿಯೇ?
- ಮಾತೆತ್ತಿದರೇ ಪಂಚಪೀಠಾಧೀಶರು ಎನ್ನುವ ಹೋರಾಟದ ಸ್ವಾಮೀಜಿಗಳು ಅದೆಷ್ಟು ಹೀನ ಮನಸ್ಥಿತಿಯವರು ಎನ್ನುವುದಕ್ಕೆ ಅವರ ಹೇಳಿಕೆಗಳೇ ಸಾಕ್ಷಿಯಾಗುತ್ತಿಲ್ಲವೇ?
- ಲಿಂಗದೇವ ಎಂದು ಬಸವಣ್ಣನ ಅಂಕಿತವನ್ನೆ ತಿದ್ದಿ ಶರಣರ ಮೂಲ ಇತಿಹಾಸಕ್ಕೆ ಅವಮಾನ ಮಾಡಿದ ಮಹಾದೇವಿ ಅವರ ನಡೆಯ ಬಗ್ಗೆ ಮೌನ ವಹಿಸಿದ್ದೇಕೆ.
- ಚುನಾವಣೆಗೆ ಮುಂಚೆಯೇ ಪ್ರತ್ಯೇಕ ಧರ್ಮವನ್ನು ಮಾಡುವ ಹಂಬಲ, ಆತುರವೇಕೆ?, ಚುನಾವಣೆಗಾಗಿಯೇ ಧರ್ಮದ ಹೆಸರಲ್ಲಿ ಕಾಂಗ್ರೆಸ್ ಸಮಾವೇಶ ನಡೆಸುತ್ತಿಲ್ಲವೇ?
- ಸ್ಥಾವರ ಪೂಜಕರಲ್ಲ ಎನ್ನುವವರು ಬಸವಕಲ್ಯಾಣದಲ್ಲಿ 108 ಅಡಿ ಬಸವಣ್ಣನ ಮೂರ್ತಿ ಸ್ಥಾಪಿಸಿದ್ದೇಕೆ. ಇಂದಿಗೂ ನಿಮ್ಮ ಬೆನ್ನು ಹತ್ತಿರುವ ಮುಗ್ದ ಲಿಂಗಾಯತರ ಅದೆಷ್ಟು ಮನೆಗಳ ಜಗುಲಿಯಲ್ಲಿ ಅಂಬಾಭವಾನಿ, ವೀರಭದ್ರ, ಕಾಶೀ ವಿಶ್ವನಾಥ, ಶ್ರೀಶೈಲ್ ಮಲ್ಲಿಕಾರ್ಜುನ, ಕಲಬುರಗಿ ಶರಣಬಸವಪ್ಪನ ಮೂರ್ತಿಗಳನ್ನು ಬದಿಗಿಟ್ಟು, ಬರೀ ಲಿಂಗ ಪೂಜೆ ಮಾಡುತ್ತಾರೇ?
- ನಡೆದಾಡುವ ದೇವರು ಸಿದ್ಧಗಂಗಾ ಶ್ರೀ ಶಿವಕುಮಾರ ಶ್ರೀಗಳು ಹೈಕಮಾಂಡ್ ಇದ್ದ ಹಾಗೆ ಎನ್ನುವವರು ಅವರ ಹೇಳಿಕೆ ಕೇಳಿದ ಮೇಲೆ ಏಕೆ ಬಾಯಿಯಲ್ಲಿ ಕಡುಬು ತುರುಕಿಕೊಂಡವರಂತೆ ಆಡುತ್ತಿದ್ದೀರಿ?
- ಬಾಬು ರಾಜೇಂದ್ರ ಪ್ರಸಾದ ಅಧ್ಯಕ್ಷತೆಯಲ್ಲಿ ಭಾರತದ ಸಂವಿಧಾನ ರಚನಾ ಸಮಿತಿ ಸಿದ್ಧವಾಯಿತು. ಅದರಲ್ಲಿ ಕರ್ನಾಟಕದ ನಿಜಲಿಂಗಪ್ಪನವರು ಇದ್ದರು. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರರು ಇದ್ದರು. ನಮ್ಮ ಸಂವಿಧಾನದ ಹಿಂದೂ ನಾಗರೀಕ ಸಂಹಿತೆ ಕುರಿತು Hindu law applies to hindus, jains, Budhist, sikh’s and virashaivas ಎಂದು ಹೇಳಲಾಗಿದೆ.
- ಹೋರಾಟದ ನೇತೃತ್ವ ವಹಿಸಿರುವ ಎಂ.ಬಿ.ಪಾಟೀಲರೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಳೆಗಾಗಿ ಮಹಾರಾಷ್ಟ್ರದಲ್ಲಿ ಹೋಮ ನಡೆಸಲಿಲ್ಲವೇ? ರಾಜಕೀಯ ಲಾಭಕ್ಕಾಗಿ, ಯಾವುದೋ ಕೆಲ ಸ್ವಾಮೀಜಿಗಳ ಒಳಜಗಳದಿಂದ ಪ್ರತ್ಯೇಕ ಧರ್ಮ ಎಂದು ಒಡೆದು ಆಳುವುದು ಯಾವ ಮಟ್ಟಿಗಿನ ನೈತಿಕತೆ ಇದೆ.
- ಪ್ರತ್ಯೇಕ ಧರ್ಮದ ಹೋರಾಟಕ್ಕೆ ಮುಸ್ಲಿಂರು ಬೆಂಬಲಿಸುತ್ತಿರುವ ಔಚಿತ್ಯವೇನು?. ಅದೇ ವಿಶ್ವೇಶ ತೀರ್ಥ ಸ್ವಾಮೀಜಿ ಮಾತನಾಡಿದರೇ ನೀವ್ಯಾಕೇ ನಮ್ಮ ವಿಷಯಕ್ಕೆ ಬರುತ್ತೀರಿ ಎಂದು ಪ್ರಶ್ನಿಸುತ್ತೀರಿ. ಅವರು ಎಷ್ಟೇ ಆಗಲಿ ಹಿಂದೂ ಧರ್ಮದ ರಕ್ಷಕರು. ಅವರಿಗೂ ವೀರಶೈವ ಲಿಂಗಾಯತರಿಗೂ ಸಂಬಂಧವಿದೆ. ಆದರೆ ಏನು ಸಂಬಂಧವಿಲ್ಲದ, ಲಿಂಗಾಯತ ಧರ್ಮದ ಗಂಧ ಗಾಳಿಯೇ ಇಲ್ಲದ ಮುಸ್ಲಿಂರು ಹೋರಾಟಕ್ಕೆ ಬೆಂಬಲಿಸುತ್ತಿದ್ದಾರೆಂದರೆ. ಹಿಂದೂಗಳನ್ನು ಒಡೆಯುವ ಹುನ್ನಾರ ಎಂಬುದು ನಿಮ್ಮ ಗಮನಕ್ಕೆ ಬಾರದೆ ಹೋಯಿತೇ?.
- Advertisement -
Trending Now
ಆವತ್ತು ಮಗಳನ್ನು ಪಕ್ಷಕ್ಕೆ ತೆಗೆದುಕೊಳ್ಳದೇ ಇದ್ದ ಡಿಕೆ ಕಾದಿದ್ದು ತಂದೆಗಾಗಿ!
October 23, 2024
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
Leave A Reply