ಅಯೋಧ್ಯೆ ವಿವಾದ ಶಾಂತಿಯುತ ಇತ್ಯರ್ಥಕ್ಕೆ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಇಂಗಿತ!
Posted On November 8, 2017

ಲಖನೌ: ಅಯೋಧ್ಯೆಯ ರಾಮಜನ್ಮ ಭೂಮಿ ವಿವಾದದ ಕುರಿತು ಶಾಂತಿಯುತ ಮಾತುಕತೆ ಕುರಿತು ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಪ್ರಯತ್ನಿಸಿದ ಬೆನ್ನಲ್ಲೇ, ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ಬೋರ್ಡ್ ಸಹ ವಿವಾದ ಬಗೆಹರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದೆ.
ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಕುರಿತು ಡಿ.6ರೊಳಗೆ ಕರಡು ಪ್ರಸ್ತಾಪ ತಯಾರಿಸುವುದಾಗಿ ವಕ್ಫ್ ಬೋರ್ಡ್ ತಿಳಿಸಿದೆ.
ಈ ಕುರಿತು ಬೋರ್ಡ್ ಮುಖ್ಯಸ್ಥ ವಾಸಿಂ ರಿಜ್ವಿ ಪ್ರತಿಕ್ರಿಯಿಸಿದ್ದು, “ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಯೋಧ್ಯೆ ವಿವಾದ ಬಗೆಹರಿಸಿಕೊಳ್ಳುವ ಕುರಿತು ಅಯೋಧ್ಯೆ ಸಾಧು-ಸಂತರ ಜತೆ ಚರ್ಚಿಸಲಾಗಿದೆ. ನಾವು ಸಹ ಶಾಂತಿಯುತವಾಗಿಯೇ ಪ್ರಕರಣ ಇತ್ಯರ್ಥಗೊಳಿಸಲು ಇಚ್ಛಿಸುತ್ತೇವೆ ಎಂದು ತಿಳಿಸಿದ್ದಾರೆ.
ಡಿ.6, 1992ರಂದು ಬಾಬ್ರಿ ಮಸೀದಿ ಧ್ವಂಸಗೊಳಿಸಿದ್ದು, ಜಮೀನು ಯಾರಿಗೆ ಸೇರಬೇಕು ಎಂಬ ಕುರಿತು ಇನ್ನೂ ವಿವಾದವಿದೆ. ವಕ್ಫ್ ಬೋರ್ಡ್ ನಿಲುವಿಗೆ ಸಾಧು ಸಂತರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
- Advertisement -
Leave A Reply