ಹಿಂದೂಗಳು ಒಗ್ಗೂಡದಿದ್ದರೆ ವಿನಾಶ ಖಚಿತ: ಮಲಯಾಳಂ ನಿರ್ದೇಶಕ ಎಚ್ಚರಿಕೆ
ಹಿಂದೂಗಳು ಇನ್ನಾದರೂ ಒಗ್ಗೂಡಬೇಕು, ಒಗ್ಗೂಡಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿದ್ದರೆ, ಮುಂದೊಂದು ದಿನ ಎಲ್ಲ ಹಿಂದೂಗಳೂ ನಾಶವಾಗಬೇಕಾಗುತ್ತದೆ ಎಂದು ಮಲಯಾಳಂ ಚಿತ್ರ ನಿರ್ದೇಶಕ ಮೇಜರ್ ರವಿ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಕೇರಳದ ಗುರುವಾಯೂರ್ ಪಾರ್ಥಸಾರಥಿ ದೇವಾಲಯದ ಮೇಲೆ ದಾಳಿ ನಡೆದ ಆರೋಪದ ಹಿನ್ನೆಲೆಯಲ್ಲಿ ಮೇಜರ್ ರವಿ ಮಾತನಾಡಿರುವ ಕುರಿತ ಆಡಿಯೋ ಕ್ಲಿಪ್ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಜ್ಯದಲ್ಲಿ ಹಿಂದೂಗಳನ್ನು ಹತ್ತಿಕ್ಕಲಾಗುತ್ತಿದೆ. ದೇವಾಲಯಗಳ ಮೇಲೆ ದಾಳಿ ಮಾಡಿ ನಮ್ಮ ನಂಬುಗೆಯನ್ನೇ ಬುಡಮೇಲು ಮಾಡಲಾಗುತ್ತಿದೆ. ಈಗಾಗಲೇ ಸಮಯ ಮೀರಿದ್ದು, ಹಿಂದೂಗಳು ಇನ್ನಾದರೂ ಒಗ್ಗೂಡಬೇಕು, ಒಗ್ಗೂಡಿ ದುಷ್ಟಶಕ್ತಿಗಳ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.
ಕಳೆದ ವರ್ಷ ಟಿವಿ ಆ್ಯಂಕರ್ ಒಬ್ಬರು ದುರ್ಗಾ ದೇವಿಯನ್ನು ವೇಶ್ಯೆಗೆ ಹೋಲಿಸಿದ್ದರು. ಆಗ ನನ್ನ ರಕ್ತ ಕುದಿಯಿತು. ಹಾಗಾಗಿಯೇ ಟಿವಿ ಆ್ಯಂಕರ್ ಮುಖಕ್ಕೆ ಉಗಿಯಬೇಕು ಎಂದಿದ್ದೆ. ಆದರೆ ಎಲ್ಲರೂ ನನ್ನ ವಿರುದ್ಧವೇ ಮುಗಿಬಿದ್ದರು. ಆಗ ಯಾವ ಹಿಂದೂಗಳೂ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಇದು ಹೀಗೆಯೇ ಮುಂದುವರಿದರೆ ಹಿಂದೂಗಳು ನಾಶವಾಗಬೇಕಾಗುತ್ತದೆ ಎಂದಿದ್ದಾರೆ.
ಆದಾಗ್ಯೂ ಕೇರಳದಲ್ಲಿ ಇತ್ತೀಚೆಗೆ ಲವ್ ಜಿಹಾದ್, ಹಿಂದೂ ಯುವತಿಯರ ಬಲವಂತದ ಮತಾಂತರ, ಹಿಂದೂಗಳ ಕೊಲೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ರವಿ ಹೀಗೆ ಹೇಳಿರುವುದು ಎಚ್ಚರಿಕೆ ಗಂಟೆಯಂತಿದೆ.
Leave A Reply