ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಹೇಳಿಕೆ ಆರೋಪ, ಬಾಂಗ್ಲಾದೇಶದಲ್ಲಿ 30 ಮನೆಗಳಿಗೆ ಬೆಂಕಿ
ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಯುವಕ ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಹಿಂದೂಗಳ 30 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
ರಂಗಪುರ ಜಿಲ್ಲೆ ಥಾಕುರ್ ಪಾರಾ ಎಂಬಲ್ಲಿ ಘಟನೆ ನಡೆದಿದ್ದು, ಹಿಂದೂಗಳ ಮನೆ ಸುಡಲು ಯತ್ನಿಸಿದ ಗುಂಪು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಅಲ್ಪಸಂಖ್ಯಾತ ಯುವಕ ಟಿಟು ರಾಯ್ ಎಂಬಾತ ಪ್ರವಾದಿ ಮಹಮ್ಮದ್ ಕುರಿತು ಅವಹೇಳನಕಾರಿಯಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ ಎಂದು ಕೆರಳಿದ ಮುಸ್ಲಿಮರು 30ಕ್ಕೂ ಅಧಿಕ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ ಮನೆಯಲ್ಲಿದ್ದ ಹಣ ಸೇರಿ ಹಲವು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೇಳು ಗ್ರಾಮಗಳ ಸುಮಾರು 20 ಸಾವಿರ ಮುಸ್ಲಿಮರು ದಾಳಿ ನಡೆಸಿದ್ದು, ಪೊಲೀಸರು ಹಾರಿಸಿದ ಗುಂಡಿಗೆ ಆರೇಳು ಜನರಿಗೆ ಗಾಯಗಳಾಗಿವೆ. ಅದೇ ಮುಸ್ಲಿಮರು ಹಿಂದೂ ದೇವರನ್ನು ಎಷ್ಟೇ ಟೀಕಿಸಿದರೆ ಅಭಿವ್ಯಕ್ತಿ ಸ್ವಾತಂತ್ರ್ಯವಾಗುತ್ತದೆ, ಹಿಂದೂಗಳ ಪೋಸ್ಟ್ ಮಾತ್ರ ಅವಹೇಳನಕಾರಿಯಾಗುತ್ತದೆ.
Leave A Reply