ಕೇರಳದಲ್ಲಿ ಸಿಪಿಎಂ ಕಾರ್ಯಕರ್ತರಿಂದ ಆರ್ ಎಸ್ ಎಸ್ ಸ್ವಯಂ ಸೇವಕನ ಹತ್ಯೆ
Posted On November 13, 2017
ತ್ರುಶೂರ್: ಕೇರಳದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯಾಸರಣಿ ಮುಂದುವರಿದಿದ್ದು, ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕನನ್ನು ಸಿಪಿಎಂ ಕಾರ್ಯಕರ್ತರು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಟರ್ ಬೈಕ್ ಮೇಲೆ ಹೋಗುತ್ತಿದ್ದ ಸ್ವಯಂಸೇವಕ ಆನಂದನ್ (23) ಅವರ ಮೇಲೆ ಕಾರಿನಲ್ಲಿ ಬಂದ ಸಿಪಿಎಂ ದುರುಳರು ದಾಳಿ ಮಾಡಿದ್ದು, ಕೊಲೆ ಮಾಡಿದ್ದಾರೆ. ದಾಳಿ ನಂತರ ಆಸ್ಪತ್ರೆಗೆ ದಾಖಲಿಸಿದರೂ, ತೀವ್ರವಾಗಿ ಗಾಯಗೊಂಡಿದ್ದ ಆನಂದನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆನಂದನ್ ಕೊಲೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಸಿಪಿಎಂ ಸರಕಾರ ಕೊಲೆಗಾರರನ್ನು ಬೆಂಬಲಿಸುತ್ತಿದೆ. ಕೇರಳದಲ್ಲಿ 2001ರಿಂದ ಇದುವರೆಗೆ 120 ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಕಣ್ಣೂರು ಒಂದರಲೇ 84 ಜನರನ್ನು ಕೊಲೆ ಮಾಡಲಾಗಿದೆ. ಮುಖ್ಯಮಂತ್ರಿ ಮೂಲ ಸ್ಥಾನದಲ್ಲೇ 14 ಜನರನ್ನು ಕೊಲೆ ಮಾಡಲಾಗಿದೆ. ಈ ಎಲ್ಲದ್ದಕ್ಕೂ ಪಿಣರಾಯಿ ವಿಜಯನ್ ಪರೋಕ್ಷ ಬೆಂಬಲವಿದೆ ಎಂದು ಆರೋಪಿಸಿದೆ.
- Advertisement -
Trending Now
ಆವತ್ತು ಮಗಳನ್ನು ಪಕ್ಷಕ್ಕೆ ತೆಗೆದುಕೊಳ್ಳದೇ ಇದ್ದ ಡಿಕೆ ಕಾದಿದ್ದು ತಂದೆಗಾಗಿ!
October 23, 2024
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
Leave A Reply