ಹೆಂಡತಿಗೆ ವಾಟ್ಸ್ ಆ್ಯಪ್ ಮೂಲಕ ತಲಾಖ್ ನೀಡಿದ ಅಲಿಗಡ್ ಮುಸ್ಲಿಂ ವಿವಿ ಪ್ರಾಧ್ಯಾಪಕ

ಆಗ್ರಾ: ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕನೊಬ್ಬ ವಾಟ್ಸ್ ಪ್ ಸಂದೇಶ ಕಳುಹಿಸುವ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಅಲಿಗಡ ಮುಸ್ಲಿಂ ವಿವಿಯ ಸಂಸ್ಕೃತ ವಿಭಾಗದ ಮುಖ್ಯಸ್ಥ, ಪ್ರೋಫೆಸರ್ ಯುಸೂಫ್ ಖಾನ್ ವಾಟ್ಸ್ ಪ್ ಮೂಲಕ ಸಂದೇಶ ಕಳುಹಿಸಿ ತಲಾಖ್ ನೀಡಿದ ಭೂಪ.
ಮಹಿಳೆ ಯಾಸ್ಮೀನ್ ಖಲೀದ್ ತಲಾಖ್ ಗೆ ಒಳಪಟ್ಟ ಮಹಿಳೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಿಳೆ ತಲಾಖ್ ನೀಡಿರುವುದರಿಂದ ನನ್ನ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ದಾರಿ ಬಾಕಿ ಉಳಿದಿದೆ ಎಂದು ಹೇಳಿದ್ದಾಳೆ.
ಅವರು ನನಗೆ ಮನೆಯಿಂದ ಹೊರಹಾಕಿದ್ದಾರೆ. ಈಗ ನಾನು ನ್ಯಾಯಕ್ಕಾಗಿ ಅಲೆದಾಡುತ್ತಿದ್ದೇನೆ. ಯಾರೂ ನನಗೆ ಸಾಹಯ ಮಾಡುತ್ತಿಲ್ಲ. ಪೊಲೀಸರ ಸಹಕಾರದಿಂದ ನಾನು ನನ್ನ ಮನೆಗೆ ಮರಳಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಯಾಸ್ಮೀನ್ ಖಲೀದ್.
ಇನ್ನು ಮಹಿಳೆ ದೂರಿಗೆ ಪ್ರತಿಕ್ರಿಯೆ ನೀಡಿರುವ ಪತಿರಾಯ ಖಾನ್ ‘ನಾನು ಕೇವಲ ವಾಟ್ಸ್ ಪ್ ಮೂಲಕವಲ್ಲ. ಇಬ್ಬರು ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಷರಿಯಾ ನಿಯಮದಂತೆ ತಲಾಖ್ ನೀಡಿದ್ದೇನೆ. ಅವಳು ನನಗೆ ಎರಡು ದಶಕದಿಂದ ಕಿರುಕುಳ ನೀಡುತ್ತಿದ್ದಾಳೆ ಎಂದು ತಿಳಿಸಿದ್ದಾನೆ. ಇನ್ನು ಪೊಲೀಸರು ಸದಸ್ಯ ಯಾಸ್ಮೀನ್ ಅವರನ್ನು ಅವರ ಮನೆಗೆ ಸೇರಿಸಿದ್ದು, ಯಾವುದೇ ಅಧಿಕೃತ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ಭಾರತದಲ್ಲಿ ತ್ರಿವಳಿ ತಲಾಖ್ ಕಾನೂನು ಬಾಹಿರ ಎಂದು ತೀರ್ಪು ನೀಡಿತ್ತು.
Leave A Reply