2022ಕ್ಕೆ ರಾಮ ಮಂದಿರ, ರಾಮರಾಜ್ಯ ಕನಸು ಪೂರ್ಣ:ಯೋಗಿ ಆದಿತ್ಯನಾಥ
ಲಖನೌ: ಹಿಂದೂಸ್ತಾನದಲ್ಲಿ ಶೀಘ್ರದಲ್ಲಿ ರಾಮರಾಜ್ಯದ ಕನಸು ಪೂರ್ಣಗೊಳ್ಳಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದು, ಪರೋಕ್ಷವಾಗಿ 2022ರ ಹೊತ್ತಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವೂ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.0
‘ಹಿಂದೂಸ್ತಾನ ಶಿಖರ ಸಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ‘ಕನಸುಗಳು ಸದಾ ವಾಸ್ತವವಾಗಿರುತ್ತವೆ ಎಂದು ಯೋಗಿ ಹೇಳಿದ್ದು. ನನ್ನ ಗುರುಗಳಾದ ಮಹಾಂತ ಅವೈಧ್ಯನಾಥರ ಕನಸು ಪೂರ್ಣಗೊಳಿಸಬೇಕಿದೆ ಎಂದು ಹೇಳಿದರು. ಮಹಾಂತ ಅವೈಧ್ಯ ನಾಥರು ರಾಮಮಂದಿರ ಹೋರಾಟದಲ್ಲಿ ಸಕ್ರೀಯರಾಗಿದ್ದು ಗಮನಾರ್ಹ.
ಇನ್ನು 2022ರ ವೇಳೆಗೆ ಭಾರತದಲ್ಲಿ ಅರಾಜಕತೆ, ಬಡತನ ಹೋಗಲಾಡಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ. ಅವರ ದೂರದೃಷ್ಟಿಗೆ ಪೂರಕ ಮತ್ತು ರಾಮರಾಜ್ಯದ ಕನಸಿಗೆ ಪೂಕರ ಕಾರ್ಯಗಳನ್ನು ಹಮ್ಮಿಕೊಳ್ಳಬೇಕಿದೆ. ಇನ್ನು ರಾಮಮಂದಿರ ನಿರ್ಮಾಣ ಕುರಿತು ಸಂಕಲ್ಪ ಮತ್ತು ಸಿದ್ಧಿ ಮಾಡಲಾಗಿದೆ. ಆ ನಿಟ್ಟಿನಲ್ಲಿ ನಿತ್ಯ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ನಮ್ಮ ಗುರಿ ಸ್ವಚ್ಛ ಮತ್ತು ಸ್ವಸ್ಥವಾಗಿದ್ದರೇ ದೇವರು ನಮ್ಮ ಬೆಂಬಲಕ್ಕೆ ನಿಲ್ಲುತ್ತಾನೆ. ಇನ್ನು ಸ್ಪಷ್ಟ ಮತ್ತು ಸ್ವಚ್ಛ ಗುರಿ ಹೊಂದಿರುವ ಯೋಗಿಯೊಬ್ಬನಿಗೆ ಅಸಾಧ್ಯವಾದದ್ದು ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಶ್ರಮಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವು ಅಯೋಧ್ಯ ಹೋರಾಟದಿಂದಲೂ ಸೂಕ್ತ ಶ್ರಮವಹಿಸಿದ್ದೇವೆ. ನಾವು ಅಯೋಧ್ಯೆಗೆ ನೀಡಿದಷ್ಟೇ ಮಹತ್ವವನ್ನು ಆಗ್ರಾದ ತಾಜಮಹಲ್ ಅಭಿವೃದ್ಧಿಗೂ ನೀಡುತ್ತಿದ್ದೇವೆ. ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
Leave A Reply