ಕಾಂಗ್ರೆಸ್ ಸರ್ಕಾರ ಮುಂದುವರಿದರೆ ಕಸಬ್ ಜಯಂತಿ ಆಚರಿಸುತ್ತದೆ: ಅನಂತಕುಮಾರ್ ಹೆಗಡೆ
Posted On November 14, 2017

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟಿಪ್ಪು ಸುಲ್ತಾನ ಜಯಂತಿ ಆಚರಿಸಿ ತಪ್ಪು ಮಾಡಿದೆ. ಹಾಗೊಂದು ವೇಳೆ ಇದೇ ಸರ್ಕಾರ ಮುಂದುವರಿದರೆ, ಮುಂದೊಂದು ದಿನ ಉಗ್ರ ಕಸಬ್ ಜನ್ಮದಿನವನ್ನೂ ಆಚರಿಸುತ್ತದೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಟೀಕಿಸಿದ್ದಾರೆ.
ಕುಂದಾಪುರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಎಲ್ಲರ ವಿರುದ್ಧ ಕಟ್ಟಿಕೊಂಡು ಟಿಪ್ಪು ಜಯಂತಿ ಆಚರಿಸಿದ್ದನ್ನು ನೋಡಿದರೆ, ಇದು ಮುಂದೆ ಕಸಬ್ ಜಯಂತಿಯನ್ನೂ ಆಚರಿಸುತ್ತದೆ. ದೇಶದ್ರೋಹಿಗಳ ಜಯಂತಿ ಆಚರಿಸಲು ಸಹ ಈ ಸರ್ಕಾರ ಹಿಂಜರಿಯುವುದಿಲ್ಲ ಎಂದು ಜರಿದಿದ್ದಾರೆ.
ಹಾಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದು ಅನಂತಕುಮಾರ್ ಹೆಗಡೆ ಮನವಿ ಮಾಡಿದರು.
- Advertisement -
Leave A Reply