ಸೆಕ್ಸ್ ಮೂಲ ಹಕ್ಕು ಎಂದ ಮೇವಾನಿ, ಹಾರ್ದಿಕ್ ಹಾದರ ಒಪ್ಪಿಕೊಂಡಂತಾಯಿತಲ್ಲವೇ?
ಆತ್ಮೀಯ ಹಾರ್ದಿಕ್ ಪಟೇಲ್ ನಿರಾಶರಾಗದಿರಿ. ನಾನು ನಿಮ್ಮ ಜತೆ ಇದ್ದೇನೆ. ಸೆಕ್ಸ್ ಹೊಂದುವುದು ಮಾನವನ ಮೂಲಭೂತ ಹಕ್ಕು. ನಮ್ಮ ಗೌಪ್ಯತೆಯನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿಲ್ಲ.
ಜಿಗ್ನೇಶ ಮೇವಾನಿ, ದಲಿತ ಹೋರಾಟಗಾರ.
ಚುನಾವಣೆ ವೇಳೆ ಬಿಜೆಪಿ ನನ್ನ ವಿರುದ್ಧ ಕೊಳಕು ರಾಜಕಾರಣ ಮಾಡುತ್ತಿದೆ. ನನ್ನ ಮರ್ಯಾದೆಗೆ ಧಕ್ಕೆ ತನ್ನಿರಿ ಆದರೆ ಈ ರೀತಿ ಮಾಡಿ. ಗುಜರಾತ್ ನ ಮಹಿಳೆಯರಿಗೆ ಅಪಮಾನ ಮಾಡಬೇಡಿ.
ಹಾರ್ದಿಕ್ ಪಟೇಲ್, ಪಾಟೀದಾರ ಮೀಸಲು ಹೋರಾಟಗಾರ
ಇದು ಗುಜರಾತ್ ನಲ್ಲಿ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ಹೊರ ಬಂದ ಬಳಿಕ ದಲಿತರ ಹೋರಾಟದ ಮೂಲಕ ರಾಜಕೀಯ ಮುಂಚೂಣಿಗೆ ಬಂದ ಮಹಾನ್ ಹೋರಾಟಗಾರ ಜಿಗ್ನೇಶ್ ಮೇವಾನಿ ಮತ್ತು ಪಾಟೀದಾರ್ ಮೀಸಲು ಹೋರಾಟದ ಮುಖಂಡ ಹಾರ್ದಿಕ್ ಪಟೇಲ್ ನೀಡಿದ ಹೇಳಿಕೆ. ಪಾಟೀದಾರ ಮೀಸಲು ಹೋರಾಟ ಸಮಿತಿ ಮುಖಂಡ ಹಾರ್ದಿಕ್ ಪಟೇಲ್ ಸೆಕ್ಸ್ ಸ್ಕ್ಯಾಂಡಲ್ ಬಯಲಾದ ನಂತರ ಅದನ್ನು ಬೆಂಬಲಿಸಿದ ಪರಿ ಇದು. ಎಲ್ಲಿಗೆದ ಬಂದಿತೂ ನೋಡಿ ನಮ್ಮ ಭವಿಷ್ಯದ ನಾಯಕರು ಎನ್ನಿಸಿಕೊಂಡವರ ಸ್ಥಿತಿ.
ಗುಜರಾತ್ ನಲ್ಲಿ ಹಲವು ಹೋರಾಟಗಳ ಮೂಲಕ ಈ ಯುವ ನಾಯಕರು ಕೋಟ್ಯಂತರ ಜನರಿಗೆ ಮಾದರಿಯಾಗಿರಬೇಕು. ಆದರೆ ಮದುವೆಗೆ ಮುಂಚೆಯೇ ಮಹಿಳೆಯೊಬ್ಬಳ ಜತೆ ಲೈಂಗಿಕ ಸಂಬಂಧ ಹೊಂದಿ, ಅದು ಬಹಿರಂಗವಾದ ನಂತರ ಅದನ್ನು ಸಮರ್ಪಣೆಗೆ ಇಳಿದಿದ್ದು ದುರಂತ.
ಸೆಕ್ಸ್ ಸಿಡಿಯನ್ನು ಸಮರ್ಪಿಸುವ ಬರದಲ್ಲಿ ಹಾರ್ದಿಕ್ ಪಟೇಲ್ ಅಂತದ್ದೊಂದು ಚಟುವಟಿಕೆಯಲ್ಲಿ ಭಾಗಿಯಾಗಿದ್ದರು, ಎಂಬುದನ್ನು ಮೇವಾನಿ ಒಪ್ಪಿಕೊಂಡತಾಯಿತು. ಇನ್ನು ಅದು ಸುಳ್ಳು ವಿಡಿಯೋ, ಅದರಲ್ಲಿರುವುದು ನಾನಲ್ಲ ಎಂದು ಬಡಬಡಾಯಿಸುತ್ತಿರುವ ಹಾರ್ದಿಕ್ ಪಟೇಲ್ ‘ನನ್ನ ಮಾನ ಹರಾಜಾಗುತ್ತಿದೆ. ಅದರ ಕುರಿತು ತನಿಖೆ ನಡೆಸಿ. ಸುಳ್ಳು ಪ್ರಸಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರು ನೀಡಬೇಕಿತ್ತಲ್ಲವೇ? ಯಾಕೆ ಸುಮ್ಮನಾದರು. ಮಾನ ಮೂರಾಬಟ್ಟೆಯಾದರೂ ಸೆಕ್ಸ್ ಮಾಡಿದ್ದು ಸಮರ್ಪಿಸುವ ಮೇವಾನಿ, ದೂರು ನೀಡದೇ ಮುಗ್ಗುಮಾಗಿರುವ ಹಾರ್ದಿಕರ ನಡೆ ಮತ್ತು ನುಡಿಯ ಮಧ್ಯೆ ಅದೆಷ್ಟು ಅಂತರವಿಲ್ಲ. ನಾವು ಮಾಡಿದ್ದೇ ಹೇಳುತ್ತಿದ್ದೇವೆ. ನಾವು ಮಾಡಿದ್ದು ನಿಜ, ಅದು ತಪ್ಪಲ್ಲ ಎನ್ನುವುದು ಒಪ್ಪಿಕೊಂಡು ಬಿಟ್ಟರೆ.
ಭಾರತೀಯ ಸಮಾಜ ಒಬ್ಬ ಹೋರಾಟಗಾರ, ಸಮಾಜಸೇವಕ, ಜನಪ್ರತಿನಿಧಿ ಸ್ವೇಚಾಚಾರಿ ಯಾಗಿರಬಾರದು, ಮುಂದಿನ ಪೀಳಿಗೆಗೆ ಮಾದರಿಯಾಗಿರಬೇಕು, ಆತನ ಪ್ರತಿ ನಡೆ ನುಡಿ ಎಲ್ಲರೂ ಅನುಸರಿಸುವಂತಿರಬೇಕು ಎಂದು ಭಯಸುತ್ತದೆ. ಆದರೆ ಹಾರ್ದಿಕ್ ಪಟೇಲ್ ಇಡೀ ದೇಶಕ್ಕೆ ಮಹಾನ್ ಕೊಡುಗೆ ನೀಡಿದ ಮತ್ತು ನೀಡುತ್ತಿರುವ ಪಟೇಲ್ ಸಮುದಾಯದ ಪ್ರತಿನಿಧಿಯಾಗಿ ನೀಡುತ್ತಿರುವ ಸಂದೇಶ ಪ್ರಶ್ನಾರ್ಹ.
ಹೌದು, ಗೌಪತ್ಯೆ ಕಾಪಾಡುವುದು ಎಲ್ಲರ ಹಕ್ಕು. ಅದನ್ನು ಬಹಿರಂಗಪಡಿಸುವುದು ಸರಿಯಲ್ಲ. ಆದರೆ ಇಲ್ಲಿ ವ್ಯಕ್ತಿ ಯಾರು, ಆತನ ಅರ್ಹತೆ ಏನು, ಹಿನ್ನೆಲೆ ಎಂಥಾದ್ದು, ಆತನ ವರ್ತನೆ ಜನರ ಮೇಲೆ ಬೀರುವ ಪರಿಣಾಮವೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಮುಖ್ಯ. ತಾನೊಂದು ಕರೆ ನೀಡಿದರೇ ಸೇರುವ ಸಾವಿರಾರು ಜನರಿಗೆ ಹಾರ್ದಿಕ್, ಮೇವಾನಿಯಂತವರು ಅದೆಂಥ ಸಂದೇಶ ನೀಡಿಯಾರು?, ಅದ್ಯಾವ ಮಟ್ಟಕ್ಕೆ ಹೋರಾಟವನ್ನು ಮುನ್ನಡೆಸುವವರು?
ಇದೇ ಮೇವಾನಿ, ಹಾರ್ದಿಕ್, ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಲು ಮುಂದಾಗಿದ್ದಾರೆ. ಅದ್ಯಾಕೆ ಇವರು ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು?. ಅದ್ಯಾವ ಪಕ್ಷ ಅಧಿಕಾರಕ್ಕೆ ಬರುತ್ತೋ, ಅದಕ್ಕೆ ಒತ್ತಡ ಹೇರಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಅದೆಲ್ಲವನ್ನು ಬಿಟ್ಟು, ಮೋದಿ, ಬಿಜೆಪಿಯನ್ನು ವಿರೋಧಿಸುವ ನೆಪದಲ್ಲಿ ಕಾಂಗ್ರೆಸ್ ಜತೆ ಕೈ ಜೋಡಿಸಿರುವುದು ಇವರ ಹೋರಾಟದ ಅಸಲಿಯತ್ತು ತೋರಿಸುತ್ತದೆ. ಇನ್ನು ಇವರ ನೈತಿಕತೆ ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಇವರು ನೀಡುವ ಇಂತಹ ಸಮರ್ಥನೆಗಳೇ ಸಾಕ್ಷಿ.
Leave A Reply