ಆಧಾರ್ ಮಾಡಿಸಿದ್ದೀರಾ, ರಿಪೇರಿ ಮಾಡಲು ಬಾಕಿ ಇಟ್ಟಿದ್ದೀರಾ!
ನೀವು ಎಲ್ಲಿ ಕೂಡ ಹೋಗಿ ಕೇಳುವುದು ಆಧಾರ್ ಕಾರ್ಡ್ ಇದೆಯಾ? ಬ್ಯಾಂಕಿನಿಂದ ಹಿಡಿದು ವಿಮಾನ ನಿಲ್ದಾಣದ ತನಕ ಯಾವುದೇ ಸರಕಾರಿ ವ್ಯವಸ್ಥೆ ಆಗಿರಲಿ ಕೇಳುವುದು ಆಧಾರ್ ಕಾರ್ಡ್ ಇದೆಯಾ? ಆಧಾರ್ ಇಲ್ಲದ ವ್ಯಕ್ತಿಯನ್ನು ಆಶ್ಚರ್ಯದಿಂದ ನೋಡುವ ಸಂಪ್ರದಾಯ ನಿಧಾನವಾಗಿ ನಮ್ಮಲ್ಲಿ ಬೆಳೆಯುತ್ತಿದೆ. ಹಾಗಂತ ಸರಕಾರಗಳು ನಡೆಸುವ ವ್ಯವಸ್ಥೆಯಲ್ಲಿ ಆಧಾರ್ ಕಾರ್ಡ್ ಮಾಡಿಸಲು ಹೋಗಿ. ಯಾವಾಗ ಆಗುತ್ತದೆಯೆಂದು ಅವರಿಗೂ ಗೊತ್ತಿರುವುದಿಲ್ಲ. ನಿಮಗಂತೂ ಅವರು ಹೇಳುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಆಧಾರ್ ಕಾರ್ಡ್ ಎಲ್ಲದಕ್ಕೂ ಪ್ರಮುಖವಾಗಿ ಬೇಕು ಎಂದು ಗೊತ್ತಿದ್ದರೂ ಸರಕಾರಿ ವ್ಯವಸ್ಥೆಯಲ್ಲಿ ಅದು ಆಮೆಗಿಂತ ಸ್ಲೋ ಆಗಿ ಚಲಿಸುತ್ತಾ ಇರುತ್ತದೆ. ಒಂದು ಅಂದಾಜಿನ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ಎಂಭತೈದು ಸಾವಿರ ನಾಗರಿಕರ ಬಳಿ ಆಧಾರ್ ಕಾರ್ಡ್ ಇಲ್ಲ. ಬೇಡಾ ಎಂದಲ್ಲ. ಮಾಡಿಸುವ ಪ್ರಕ್ರಿಯೆಗೆ ಯಾರೂ ಮುಂದೆ ಬರಲಿಲ್ಲ. ಇದನ್ನು ಮನಗಂಡ ಮಂಗಳೂರಿನ ಸಮಾಜ ಸೇವಿ ಸಂಘಟನೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಿ ವೇದವ್ಯಾಸ ಕಾಮತ್ ನಾಗರಿಕರ ಉಪಯೋಗಕ್ಕಾಗಿ ಮಂಗಳೂರಿನಲ್ಲಿ ಬೃಹತ್ ಆಧಾರ್ ಮೇಳ ಮಾಡುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ (ರಿ) ಜೋಡುಮಠ ರಸ್ತೆ, ಮಂಗಳೂರು ಹಾಗೂ ಈ-Governance Service ಇಂಡಿಯಾ ಲಿಮಿಟೆಡ್ ಸಹಭಾಗಿತ್ವದೊಂದಿಗೆ ಬೃಹತ್ ಆಧಾರ್ ಮೇಳ ಇದೇ ನವೆಂಬರ್ 17, 18, 19 ರಂದು ನಡೆಯಲಿದೆ. ಮೊನ್ನೆ ಭಾನುವಾರದಿಂದ ಟೋಕನ್ ಕೊಡುವ ಕಾರ್ಯ ಶುರುವಾಗಿದೆ. ಒಂದಿಷ್ಟು ಹೆಚ್ಚಿನ ಸಂಖ್ಯೆಯ ಜನರಿಗೆ ಈ ಸೌಲಭ್ಯ ಸಿಗಲಿ ಎನ್ನುವ ಕಾರಣಕ್ಕೆ ಇದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
ನಾಳೆ ಗುರುವಾರದ ತನಕ ಬೆಳಿಗ್ಗೆ 8.30 ರಿಂದ ರಾತ್ರಿ 8.30 ರ ವರೆಗೆ ಆಧಾರ್ ನೋಂದಾಣಿ ಪ್ರಕ್ರಿಯೆ ಜರುಗಲಿತ್ತದೆ. ಈ ಸಂದರ್ಭದಲ್ಲಿ ಹೊಸ ಆಧಾರ್ ನೋಂದಾವಣಿ, ಆಧಾರ್ ತಿದ್ದುಪಡಿ, ಆಧಾರ್ ಲಿಂಕ್, ಆಧಾರ್ ಸ್ಮಾಟರ್್ ಕಾಡರ್್ ನಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ನವೆಂಬರ್ 17, 18, 19 ಮೂರು ದಿನ ಬೆಳಿಗ್ಗೆ 8.30 ರಿಂದ ರಾತ್ರಿ 8.30 ರ ಒಳಗೆ ಬಂದು ಆಧಾರ್ ಗೆ ಸಂಬಂಧಪಟ್ಟಿದ್ದು ನಿಮ್ಮ ಸಮಸ್ಯೆ ಏನಿದೆಯೋ ಅದಕ್ಕೆ ಪರಿಹಾರವನ್ನು ಕೂಡ ಕಂಡುಕೊಳ್ಳಬಹುದು.
ನಾನು ಮೂರು ದಿನಗಳಿಂದ ಹೆಚ್ಚಿನ ಹೊತ್ತು ಪಿವಿಎಸ್ ಕಲಾಕುಂಜದಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿರುವ ಈ ಆಧಾರ್ ಕಾರ್ಡ್ ಅಭಿಯಾನ ನಡೆಯಲಿರುವ ಅಟಲ್ ಸೇವಾಕೇಂದ್ರದ ಕಚೇರಿಯಲ್ಲಿಯೇ ಇದ್ದೆ. ಆಧಾರ್ ಮೇಳ ಬರುವ ಶುಕ್ರವಾರದಿಂದ ಆದಿತ್ಯವಾರದ ತನಕ ಇದ್ದರೂ ಜನರಿಗೆ ಅನುಕೂಲಕರವಾಗಲಿ ಎನ್ನುವ ಕಾರಣಕ್ಕೆ ಈಗಲೆ ಟೋಕನ್ ಕೊಟ್ಟು ಅದರಲ್ಲಿ ಸಮಯ ಮತ್ತು ದಿನವನ್ನು ಬರೆದು, ಒಂದು ಫಾರಂ ಕೊಟ್ಟು ಬರುವಾಗ ಆಧಾರ್ ಮಾಡಿಸಲಾದರೆ ಏನು ದಾಖಲೆ ತರಬೇಕು ಮತ್ತು ತಿದ್ದುಪಡಿ ಮಾಡಿಸಲು ಇದ್ದರೆ ಏನು ತರಬೇಕು ಮತ್ತು ಯಾವ ತಿದ್ದುಪಡಿ ಆದರೆ ಯಾವ ದಾಖಲೆ ತರಬೇಕು ಎಂದು ಬಂದ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕುಳಿತಿದ್ದೆ. ಬಂದ ಜನರಲ್ಲಿ ಹೆಚ್ಚಿನವರಿಗೆ ಆಧಾರ್ ಕಾರ್ಡ್ ನಲ್ಲಿರುವ ತಪ್ಪುಗಳನ್ನು ಹೇಗೆ ಸರಿ ಮಾಡುವುದು ಎನ್ನುವುದೇ ಸವಾಲು.
ನಾವು ಹೇಳುವಾಗ ಸರಿ ಹೇಳಿದ್ದೇವೆ, ಆದರೆ ಆಧಾರ್ ಕಾರ್ಡ್ ಪ್ರಿಂಟ್ ಆಗಿ ಬರುವಾಗ ಸ್ಪೆಲ್ಲಿಂಗ್ ಮಿಸ್ಟೇಕ್ ನಿಂದ ಹಿಡಿದು ಫೋನ್ ನಂಬ್ರ ಬದಲಾವಣೆ, ಮನೆ ವಿಳಾಸ ಬದಲಾವಣೆ, ದೂರವಾಣಿ ಸಂಖ್ಯೆ ಸೇರಿಸುವುದು ಹೀಗೆ ಅನೇಕ ಪ್ರಶ್ನೆಗಳಿದ್ದವು. ಸಮಾಜಮುಖಿ ಚಿಂತನೆಯುಳ್ಳ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಪರವಾಗಿ ಅವರಿಗೆ ಪ್ರತಿಯೊಂದನ್ನು ಅರ್ಥವಾಗುವ ಹೇಳುವ ಕೆಲಸ ಮಾಡಿದೆ. ಕೆಲವರು ಬ್ರೋಕರ್ ಗಳು ಬಂದು ಬೇರೆಯವರ ಪರವಾಗಿ ಟೋಕನ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಅವರಿಗೆ ಸ್ಪಷ್ಟವಾಗಿ ತಾಕೀತು ಮಾಡಿ ಕಳಿಸಿದೆ. ಅವರ ಹೊಟ್ಟೆಗೆ ಹೊಡೆಯಬೇಕು ಅಂತಲ್ಲ. ಆದರೆ ಸುಳ್ಳು ಹೇಳುತ್ತಾರೆ. ನನ್ನ ಅಣ್ಣನಿಗೆ ಆಧಾರ್ ಕಾರ್ಡ್ ಮಾಡಿಸಬೇಕಿತ್ತು, ಟೋಕನ್ ಕೊಡಿ ಎಂದ ಒಬ್ಬ. ನನಗೆ ಅವನನ್ನು ನೋಡುವಾಗಲೇ ಬ್ರೋಕರ್ ಎಂದು ಗೊತ್ತಾಯಿತು. ಸರಿ, ನಿಮ್ಮ ತಾಯಿಯ ಹೆಸರು ಹೇಳಿ ಎಂದ. ಅವನು ತಡವರಿಸಿದ. ನಿಮ್ಮ ತಾಯಿಯ ಹೆಸರು ಗೊತ್ತಿಲ್ವಾ ಎಂದೆ. ನಿಮ್ಮ ಅಣ್ಣನಿಗೆ ಟೋಕನ್ ಎಂದು ಹೇಳುತ್ತೀರಿ, ತಾಯಿಯ ಹೆಸರು ಕೇಳಿದರೆ ಗೊತ್ತಿಲ್ಲ ಎಂದರೆ ನೀವು ಸುಳ್ಳು ಹೇಳುತ್ತೀರಿ ಎಂದು ಗೊತ್ತಾಗಲ್ವಾ ಎಂದೆ.
ನೂರು ರೂಪಾಯಿ ಸಿಗುತ್ತದೆ, ಹೊಟ್ಟೆಪಾಡಿಗೆ ಬೇರೆಯವರಿಗಾಗಿ ತೆಗೆದುಕೊಳ್ಳಲು ಬಂದಿದ್ದೇನೆ ಎಂದರೆ ನಾನು ಆಯಿತು ಎನ್ನುತ್ತಿದ್ದೆ. ಆದರೆ ಸುಳ್ಳು ಹೇಳಿ ಯಾಕೆ ತೆಗೆದುಕೊಳ್ಳುತ್ತಿರಿ ಎಂದೆ. ನಾನು ಆ ವ್ಯಕ್ತಿ ಬರುವಾಗ ಅಲ್ಲಿ ಇದ್ದದ್ದು ಕಾಕತಾಳಿಯ. ನಾನು ಅವನ ತಾಯಿಯ ಹೆಸರು ಕೇಳುತ್ತೇನೆ ಎಂದು ಅವನು ಅಂದುಕೊಂಡಿರಲಿಲ್ಲ. ಅವನಿಗೆ ಟೋಕನ್ ಕೊಟ್ಟು ಕಳುಹಿಸಿದೆ.
ನಿಮಗೂ ಆಧಾರ್ ಕಾರ್ಡ್ ಮಾಡಿಸಲು ಇದ್ದರೆ ಅಲ್ಲಿ ಹೋಗಿ. ಕಚೇರಿಯಲ್ಲಿ ನಿಮ್ಮನ್ನು ಕುಳ್ಳಿರಿಸಿ, ಮಾತನಾಡಿಸಿ, ಪ್ರಶ್ನೆಗಳಿಗೆ ಸಮಾಧಾನದ ಉತ್ತರ ಕೊಟ್ಟು ಕಳುಹಿಸಲು ಯುವಕ, ಯುವತಿಯರು ಇದ್ದಾರೆ. ಆಧಾರ್ ಕಾರ್ಡ್ ಇಲ್ಲದ 85 ಸಾವಿರ ಜನರಿಗೆ ನಾವು ಮಾಡಿಸಲು ಆಗಲಿಕ್ಕಿಲ್ಲ. ಆದರೆ ಒಂದಿಷ್ಟು ಸಾವಿರ ಜನರ ಕೈಯಲ್ಲಿ ಆಧಾರ್ ಕಾರ್ಡ್ ಕೊಟ್ಟರೆ ಅದೇ ಸಂತೃಪ್ತಿ
Leave A Reply