ಹುಡುಗಿಯೊಬ್ಬಳ ಫೋಟೋ ಬದಲಿಸಿ ಉಪಟಳ ಮಾಡಿದ ಪಾಕ್ ರಕ್ಷಣಾ ಇಲಾಖೆ ಟ್ವಿಟರ್ ಸ್ಥಗಿತದ ಮುಖಭಂಗ
Posted On November 20, 2017

ದೆಹಲಿ: ಯಾವಾಗಲೂ ಭಾರತದ ವಿರುದ್ಧ ಹಲ್ಲು ಮಸಿದು, ಇಲ್ಲದ ಉಪಟಳ ಮಾಡುವ ಪಾಕಿಸ್ತಾನದ ಪ್ರಯತ್ನಕ್ಕೆ ಈಗ ಮತ್ತೆ ಮುಖಭಂಗವಾಗಿದ್ದು, ಭಾರತೀಯ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ಫೋಟೋ ತಿರುಚಿದ ಪಾಕಿಸ್ತಾನ ರಕ್ಷಣಾ ಇಲಾಖೆಯ ಟ್ವಿಟರ್ ಖಾತೆಯನ್ನೇ ಟ್ವಿಟರ್ ಕಂಪನಿ ಸ್ಥಗಿತಗೊಳಿಸಿದೆ.
ದೆಹಲಿಯ ಜಾಮಿಯಾ ಮಸೀದಿ ಎದುರು ನಿಂತ ಯುವತಿಯೊಬ್ಬಳು “ನಾನು ಭಾರತೀಯ ಪ್ರಜೆ. ದೇಶದ ಜಾತ್ಯತೀತ ಮೌಲ್ಯ ಗೌರವಿಸುತ್ತೇನೆ” ಎಂದು ಬರೆದ ಪೋಸ್ಟರ್ ಹಿಡಿದು ತೆಗೆಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಳು.
ಆದರೆ ಪಾಕಿಸ್ತಾನ ಇದೇ ಫೋಟೋ ತಿರುಚಿ, “ನಾನು ಭಾರತೀಯ ಪ್ರಜೆ. ಆದರೆ ದೇಶದ ವಸಾಹತು ಶಾಹಿ ನೀತಿ ಇಷ್ಟವಾಗುವುದಿಲ್ಲ. ಹಾಗಾಗಿ ಭಾರತವನ್ನು ದ್ವೇಷಿಸುತ್ತೇನೆ” ಎಂದು ಪೋಸ್ಟರ್ ನಲ್ಲಿ ನಕಲು ಮಾಡಲಾಗಿತ್ತು.
ಆದರೆ ಭಾರತದ ವಿರುದ್ಧ ಪಾಕಿಸ್ತಾನ ಮಾಡಿದ ಕುತಂತ್ರ ಬಯಲಾಗಿದ್ದು, ಟ್ವಿಟರ್ ಪಾಕಿಸ್ತಾನ ರಕ್ಷಣಾ ಇಲಾಖೆ ಖಾತೆಯನ್ನೇ ಸ್ಥಗಿತಗೊಳಿಸಿದೆ. ಆ ಮೂಲಕ ಕುತಂತ್ರ ಮಾಡಿದ್ದ ಪಾಕಿಸ್ತಾನಕ್ಕೆ ಏಟು ನೀಡಿದೆ.
- Advertisement -
Leave A Reply